27.1 C
ಪುತ್ತೂರು, ಬೆಳ್ತಂಗಡಿ
September 27, 2026
ಪ್ರಮುಖ ಸುದ್ದಿಬೆಳ್ತಂಗಡಿ

ಜೀವಿತಾವಧಿಯಲ್ಲಿ ಹೇಗೆ ಬದುಕಿದ್ದಾನೆ ಎಂಬುದು ಬಹಳ ಮುಖ್ಯ: ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲ – ತಾ.ಪಂ ವಿಶ್ರಾಂತ ಅಧೀಕ್ಷಕ‌ ಪ್ರಶಾಂತ್ ಬಳಂಜ ಅವರಿಂದ ವಿಶಿಷ್ಟ ರೀತಿಯ ಕೃತಜ್ಞತಾ ಕಾರ್ಯಕ್ರಮ

ಬೆಳ್ತಂಗಡಿ: ನಮ್ಮ ಆಯುಷ್ಯದಲ್ಲಿ ಜೀವಿಸುವುದು ಮುಖ್ಯವಲ್ಲ. ಹೇಗೆ ಬದುಕಿದ್ದೇವೆ ಎಂಬುದು ಬಹಳ ಮುಖ್ಯ ಎಂದು ಅಳದಂಗಡಿ ಅಜಿಲ‌ಸೀಮೆಯ ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲ ಹೇಳಿದರು.
ತಾ.ಪಂ ವಿಶ್ರಾಂತ ಅಧೀಕ್ಷಕ‌ ಪ್ರಶಾಂತ್ ಬಳಂಜ ಅವರಿಂದ ಎಸ್.ಡಿ.ಎಂ ಕಲಾ ಭವನದಲ್ಲಿ ಎ.4 ರಂದು ನಡೆದ ವಿಶಿಷ್ಟ ರೀತಿಯ ಕೃತಜ್ಞತಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಶಾಂತ್ ಬಳಂಜ ಅವರು ಉತ್ತಮ‌ ಬರಹಗಾರರಾಗಿದ್ದು, ಅವರು ಮಾಧ್ಯಮದಲ್ಲಿ ನಮ್ಮ‌ಅಳದಂಗಡಿ ಅರಮನೆಯನ್ನು ಸಮಗ್ರವಾಗಿ ಪರಿಚಯಿಸಿದ್ದರು. ಪ್ರಶಾಂತ್ ಅವರ ಅಜ್ಜ, ತಂದೆ ಹಾಗೂ ಅವರು ಮೂರು ತಲೆಮಾರಿನ ಸಂಬಂಧವಿದೆ. ಸರಕಾರಿ ಹುದ್ದೆ ಕಷ್ಟದಾಯಕ ಆದರೆ ಪ್ರಶಾಂತ್ ಅವರು ಕಷ್ಟಕ್ಕೆ ಸಿಲುಕಿದವರಲ್ಲ. ಅಂತಹಾ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದಯವಾಣಿಯ ಉಪ ಮುಖ್ಯ ಸಂಪಾದಕ ಲಕ್ಷ್ಮೀ ಮಚ್ಚಿನ ವಹಿಸಿ ಮಾತನಾಡಿ, ಸಮಾಜದಿಂದ ತನಗೆ ಸಿಕ್ಕಿದ್ದನ್ನು ಮರಳಿಸುವ ಕಾರ್ಯಕ್ರಮವಾಗಿ ಈ ಸಮಾರಂಭ ಗೋಚರಿಸುತ್ತಿದೆ. ಸರಕಾರಿ ಅಧಿಕಾರಿಗಳು ಸಾರ್ವಜನಿಕ ಚಟುವಟಿಕೆಗಳಲ್ಲಿ ಇರಬಾರದು ಎಂಬ ನಿರ್ಬಂಧವಿದೆ. ಆದರೆ ಸರಕಾರಿ ಉದ್ಯೋಗಿ ಕೂಡ ಸಮಾಜ ಸೇವೆ ಮಾಡಬಹುದು ಎಂಬುದನ್ನು ಪ್ರಶಾಂತ್ ಬಳಂಜ ತೋರಿಸಿಕೊಟ್ಟಿದ್ದಾರೆ ಎಂದರು.

ಸಮಾರಂಭದಲ್ಲಿ ತಹಶಿಲ್ದಾರ್ ಪೃಥ್ವಿ ಸಾನಿಕಮ್, ಮೈಸೂರು ಅರಮನೆಯ ತಾಂತ್ರಿಕ ವಿಭಾಗದ ನಿವೃತ ಮುಖ್ಯಸ್ಥ ರಾಜಶೇಖರ ಗೌಡ, ಹೈಕೋರ್ಟ್ ಹಿರಿಯ ನ್ಯಾಯವಾದಿ ಕೆ‌‌ ಶಿವಪ್ರಕಾಶ್ ಹೆಗ್ಡೆ, ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್, ಮೂಡಬಿದ್ರೆಯ ತಾ.ಪಂ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಶೇಷ ಕರ್ತವ್ಯಕ್ಕೆ ಕೃತಜ್ಞತಾ ಪೂರ್ವಕ ಸನ್ಮಾನ:
ಬಳಂಜ ಮಂಡಲ ಪಂಚಾಯತ್ ಮಾಜಿ ಅಧ್ಯಕ್ಷ ವಸಂತ ಸಾಲಿಯಾನ್, ಪಿಡಿಒ ಗಳಾದ ರಾಜಶೇಖರ ರೈ ಪಡಂಗಡಿ, ಮೋಹನ ಬಂಗೇರ ಮತ್ತು ಸಫಾನಾ, ಸುದ್ದಿ ಉದಯ ಪತ್ರಿಕೆಯ ಸಂಪಾದಕ ಬಿ.ಎಸ್ ಕುಲಾಲ್ , ಸುದ್ದಿ ಬಿಡುಗಡೆಯ ವ್ಯವಸ್ಥಾಪಕ ಮಂಜುನಾಥ ರೈ, , ಗ್ರಾ.ಪಂ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಬೊಳ್ಮ, ಜಿಲ್ಲಾಧ್ಯಕ್ಷ ಸತೀಶ್ ನಾರಾವಿ, ತಾ. ಅಧ್ಯಕ್ಷ ರುಕೇಶ್, ತಾ.ಪಂ ವಿಷಯ ನಿರ್ವಾಹಕ ಮಂಜು, ವಸತಿ ಯೋಜನೆಯ ನೋಡೆಲ್ ಅಧಿಕಾರಿ ಪ್ರಶಾಂತ್ ಇವರನ್ನು ಪ್ರಶಾಂತ್ ಬಳಂಜ ಅವರು ವಿಶೇಷ ರೀತಿಯಲ್ಲಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದ‌ ರುವಾರಿ, ತಾ.ಪಂ ನಿವೃತ್ತ ಅಧೀಕ್ಷಕ ಪ್ರಶಾಂತ ಬಳಂಜ ಸ್ವಾಗತಿಸಿ‌ ಪ್ರಸ್ತಾವನೆಗೈದರು.
ಶಿಕ್ಷಕ ಅರವಿಂದ ಚೊಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು.

ಅನೇಕ ಸವಾಲುಗಳನ್ನು ಎದುರಿಸಿದ್ದೇನೆ:

ತಮ್ಮ ಸೇವಾವಧಿಯ ಕೆಲವು ಅನುಭವಗಳನ್ನು ಹಂಚಿಕೊಂಡ ಪ್ರಶಾಂತ್ ಬಳಂಜ, ಶಾಸಕರು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ವಸಂತ ಬಂಗೇರ ಅವರನ್ನು ಸಮೀಪದಿಂದ ನೋಡಿ ನಾನು ಕಲಿತಿದ್ದೇನೆ. ಅವರು ಪತ್ರ ಬರೆದರೆ ಬಹುತೇಕ ಎಲ್ಲಾ ಕೆಲಸಗಳು ಆಗುತ್ತಿತ್ತು. ಅಷ್ಟು ಪ್ರಭಾವವಿತ್ತು. ವಿಧಾನ ಸೌಧಕ್ಕೆ ಅವರ ಹೆಸರು ಹೇಳಿದರೆ ಪಾಸ್ ಕೂಡ ಬೇಕಾಗಿರಲಿಲ್ಲ ಎಂದರು.
ನಾನು ಕರ್ತವ್ಯದಲ್ಲಿರುವ ವೇಳೆ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ಅದನ್ನು ಎಲ್ಲವನ್ನೂ ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಿಲ್ಲ. 2011 ರಲ್ಲಿ ಅವಧಿಯಲ್ಲಿ ತಾಲೂಕಿಗೆ 4 ಸಾವಿರ ಮನೆಗಳು ಮಂಜೂರಾಗಿದ್ದವರು. ಅದಕ್ಕಾಗಿ ನಾನು ಕೆಲಸ ಮಾಡಿದ್ದೆ ಎಂದು ಒಂದು ವಿಚಾರವನ್ನು ಸಭೆಯಲ್ಲಿ ಉಲ್ಲೇಖಿಸಿದರು.

Related posts

ಬಂಗಾಡಿ ಸರಕಾರಿ ಪ್ರೌಢಶಾಲೆಗೆ ಶೇ.98 ಫಲಿತಾಂಶ

Suddi Udaya

ಜೂ.30: ಬೆಳ್ತಂಗಡಿ ಬ್ಯಾಂಕ್ ಆಫ್ ಬರೋಡದಿಂದ ಇಂಡಿಯಾ ಫಸ್ಟ್ ಲೈಫ್ ಕಛೇರಿ ಉದ್ಘಾಟನೆ

Suddi Udaya

ವಿಶ್ವಕರ್ಮ ಬ್ಯಾಂಕಿನ ಉಜಿರೆ ಶಾಖೆಯ ವತಿಯಿಂದ ಸ್ವಚ್ಛತಾ ಶ್ರಮದಾನ

Suddi Udaya

ಬೆಳ್ತಂಗಡಿಯಲ್ಲಿ ಪೇಪರ್ ಲೇಸ್ ರಿಜಿಸ್ಟ್ರೇಷನ್ ತರಬೇತಿ

Suddi Udaya

ಆ. 10 ರವರೆಗೆ ಇ-ಖಾತಾ ಅಭಿಯಾನದ ವಿಸ್ತರಣೆ

Suddi Udaya

2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು: ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್ ರಿಂದ ಸಚಿವ ಮಧು ಬಂಗಾರಪ್ಪ ರವರಿಗೆ ಮನವಿ

Suddi Udaya
error: Content is protected !!