25.7 C
ಪುತ್ತೂರು, ಬೆಳ್ತಂಗಡಿ
September 20, 2026
ತಾಲೂಕು ಸುದ್ದಿಧಾರ್ಮಿಕ

ಶಿಶಿಲ: ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಗ್ರಾಮಸಮಿತಿ – ವಾರ್ಷಿಕ ಮಹಾಸಭೆ ಹಾಗೂ ಸತ್ಯನಾರಾಯಣ ಪೂಜೆ

ಶಿಶಿಲ: ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಗ್ರಾಮಸಮಿತಿ ಶಿಶಿಲ ಇದರ ಅಂಗವಾಗಿ ವಾರ್ಷಿಕ ಮಹಾಸಭೆ ಹಾಗೂ ಸತ್ಯನಾರಾಯಣ ಪೂಜೆ ಶಿಶಿಲ ಗ್ರಾಮದ ಪಡ್ಪು ಕೊರಗಪ್ಪ ಗೌಡ ಮನೆಯಲ್ಲಿ ಏ.3ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನಡ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಮೋಹನ್ ಗೌಡ ನೆರವೇರಿಸಿದರು.
ಅಧ್ಯಕ್ಷತೆಯನ್ನು ಶಿಶಿಲ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಗ್ರಾಮಸಮಿತಿ ಇದರ ಅಧ್ಯಕ್ಷ ಕುಶಾಲಪ್ಪ ಗೌಡ ಬದ್ರಿಜಾಲು ವಹಿಸಿದ್ದರು.

ಮುಖ್ಯಅತಿಥಿಗಳಾಗಿ ಬೆಳ್ತಂಗಡಿ ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ, ಬೆಳ್ತಂಗಡಿ ಯುವ ವೇದಿಕೆ ಕೋಶಾಧಿಕಾರಿ ರಂಜಿತ್ ಕಳೆಂಜ, ಶಿಶಿಲ ಗ್ರಾಮ ಗೌಡರಾದ ರಮೇಶ್ ಗೌಡ ಸತ್ತಿಕಲ್ಲು, ಶಿಶಿಲ ಮಹಿಳಾ ಗ್ರಾಮ ಸಮಿತಿ ಅಧ್ಯಕ್ಷೆ ಉಮಾವತಿ ಗೌಡ ವಟ್ಲ, ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಅನಿತಾ, ಪ್ರತೀಕ್. ಸ್ನೇಹ, ಅಂಕಿತಾ, ಸ್ವಸ್ತಿಕ್, ಅನುಪ್, ಧನ್ಯಶ್ರೀ, ಲಾವಣ್ಯ ಮುಚ್ಚಿರಡ್ಕ ಇವರನ್ನು ಸನ್ಮಾನಿಸಲಾಯಿತು. ತೆಂಗಿನ ಗೆರಟೆಯಲ್ಲಿ ಕರಕುಶಲ ವಸ್ತುಗಳ ವಿಭಿನ್ನ ರಿತೀಯಲ್ಲಿ ಮಾಡಿರುವ ಅಶೋಕ ಹೊಸಕಟ್ಟ, ಶಿಶಿಲ ಗ್ರಾಮದಲ್ಲಿ ಗದ್ದೆ ನಾಟಿಮಾಡುವ ಮನೆತನದ ಗಣೇಶ್ ಕೆಳಗಿನ ವಟ್ಲ ಹಾಗೂ ಧರ್ಣಪ್ಪ ದೇವಸ ಹಾಗೂ ನಾಟಿ ವೈದ್ಯರಾದ ಗಿರಿಜ ಜಿನ್ನಪ್ಪ ಗೌಡ, ಕಾರ್ಯಕ್ರಮಕ್ಕೆ ಸ್ಥಳ ಒದಗಿಸಿ ಸಹಕರಿಸಿದ ಕೊರಗಪ್ಪ ಗೌಡ ಪಡ್ಪು ಇವರನ್ನು ಸನ್ಮಾನಿಸಲಾಯಿತು.

ಜಯಶ್ರೀ ಮತ್ತು ಬಳಗ ಪ್ರಾರ್ಥಿಸಿದರು. ಭವ್ಯಶ್ರೀ ಶಾಲೆಗುಡ್ಡೆ ಸ್ವಾಗತಿಸಿದರು.
ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಭುವನ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಮೋನಿಕ ಗುತ್ತು ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ ಅಡ್ಡಹಳ್ಳ ವಂದಿಸಿದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ ಉಪಸ್ಥಿತರಿದ್ದರು.
ಬೆಳಗ್ಗೆ ಪಡ್ಪು ಮನೆಯವರಿಂದ ಶ್ರೀ ಸತ್ಯನಾರಾಯಣ ಪೂಜೆ ಜರುಗಿತು.

Related posts

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿ ಪೂರ್ವ ಕಾಲೇಜು ರಾಷ್ಟ್ರ ಮಟ್ಟದ ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ

Suddi Udaya

ಉಜಿರೆ: ಶ್ರೀ ಧ. ಮಂ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ನಾರಾವಿ: ಶ್ರೀ ಸೂರ್ಯ ಫ್ರೆಂಡ್ಸ್ ಮಂಚಕಲ್ಲುಇದರ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬಂದಾರು ಗ್ರಾಮದ ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನ: ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನೆ ಸಭೆ

Suddi Udaya

ಬಾರ್ಯ: ಆನೆಪಲ್ಲ ನಿವಾಸಿ ಇಲ್ಯಾಸ್ ನಿಧನ

Suddi Udaya

ಮದ್ದಡ್ಕ: ಹೆದ್ದಾರಿಯ ಕೆಲಸ ಕಾಮಗಾರಿಯಲ್ಲಿ ಮಾರ್ಗವನ್ನು ಎತ್ತರವಾಗಿಸಿದ್ದರಿಂದ ಪರಿಸರದ ಜನರಿಗೆ ತೊoದರೆ: ಮಾರ್ಗವನ್ನು ತಗ್ಗಿಸಿ ಕಾಮಗಾರಿ ನಡೆಸುವoತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ರವರಿಗೆ ಮನವಿ

Suddi Udaya
error: Content is protected !!