September 6, 2026
Uncategorized

ಅರಿಕೆಗುಡ್ಡೆ ಸಭಾಭವನಕ್ಕೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 5 ಲಕ್ಷ ಅನುದಾನ ಮಂಜೂರು


ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಪ್ರಖ್ಯಾತ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದ ಸಭಾಭವನ ಕಾಮಗಾರಿಗೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ರೂ. 5 ಲಕ್ಷವನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸದಸ್ಯರಾದ ಕ್ಯಾ. ಬ್ರಿಜೇಶ್ ಚೌಟರವರು ಮಂಜೂರು ಮಾಡಿದ್ದಾರೆ.
ಸಭಾಭವನ ನಿರ್ಮಾಣಕ್ಕೆ ಪೂರಕವಾಗಿ ಅನುದಾನ ಮಂಜೂರು ಮಾಡುವಂತೆ ಕೋರಿ ಈ ಹಿಂದೆ ದೇಗುಲದ ಪದಾಧಿಕಾರಿಗಳು ಮತ್ತು ಗ್ರಾಮದ ಸ್ಥಳೀಯ ಮುಖಂಡರು ಸಂಸದರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಈ ಅನುದಾನ ಮಂಜೂರಾತಿಗೆ ವಿಶೇಷವಾಗಿ ಸಹಕಾರ ನೀಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬಿಜೆಪಿ ಬೆಳ್ತಂಗಡಿ ತಾಲೂಕು ಮಂಡಲಾಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಹತ್ಯಡ್ಕ ಗ್ರಾಮದ ಪ್ರಮುಖರಿಗೆ ವನದುರ್ಗಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆಯವರು ಕೃತಜ್ಞತೆಯನ್ನು ತಿಳಿಸಿದ್ದಾರೆ.

Related posts

ಕನಾ೯ಟಕ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಂ.ಡಿ.ಜಿ.ಪಿ) ಅರುಣ್ ಚಕ್ರವರ್ತಿ ಮಣ್ಣಿನ ಹರಕೆ ಖ್ಯಾತಿಯ ಸುಯ೯ ಶ್ರೀ ಸದಾಶಿವ ದೇವಸ್ಥಾನಕ್ಕೆ ಭೇಟಿ

Suddi Udaya

ಮೈಸೂರು ಚಾಮರಾಜನಗರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ಎರಡು ಸಾವಿರ ಮಂದಿಯಿಂದ ಧರ್ಮಸ್ಥಳ ಚಲೋ

Suddi Udaya

ಎರ್ಡೂರು ನಿರಂಜನ್ ರಾವ್ ನಿಧನ

Suddi Udaya

ಬಳಂಜ ಗ್ರಾ.ಪಂ. ನ ನೂತನ ಅಧ್ಯಕ್ಷರಾಗಿ ಶೋಭಾ ಕುಲಾಲ್, ಉಪಾಧ್ಯಕ್ಷರಾಗಿ ಯಶೋಧರ ಶೆಟ್ಟಿ ಅವಿರೋಧವಾಗಿ ಆಯ್ಕೆ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದದಲ್ಲಿ ಜುಬಿಲಿ ವರ್ಷ ಉದ್ಘಾಟನೆ

Suddi Udaya

ಹೊಕ್ಕಡಿಗೋಳಿಯ ನಿವಾಸಿ ಅಬ್ದುಲ್ ರಹಿಮಾನ್ ನಿಧನ

Suddi Udaya
error: Content is protected !!