September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಧರ್ಮ ಸ್ಥಳ ಎಸ್‌ಡಿಎಂ ಆಂ.ಮಾ. ಶಾಲಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಿದಾಯ ಕೂಟ

ಧರ್ಮಸ್ಥಳ: ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಿದಾಯ ಕೂಟ ಸಮಾರಂಭ ನಡೆಯಿತು.

ಮುಖ್ಯ ಅತಿಥಿ ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕಷ್ಟಗಳು ಬಂದಾಗ ಹೆದರದೆ ಧೈರ್ಯದಿಂದ ಮುನ್ನಡೆಯಿರಿ, ಶ್ರಮಕ್ಕೆ ತಕ್ಕದಾದ ಪ್ರತಿಫಲ ಇದ್ದೇ ಇರುತ್ತದೆ, ಮುಂದಿನ ದಾರಿಯಲ್ಲಿ ನಾಜೂಕಾದ ಪಯಣವನ್ನು ಮುನ್ನಡೆಸಿ, ಸತ್ಪ್ರಜೆಗಳಾಗಿ ಬಾಳಿ ಮನೆಗೆ ಶಾಲೆಗೆ ಹಾಗೂ ದೇಶಕ್ಕೆ ಕೀರ್ತಿ ತರುವ ಕೆಲಸವನ್ನು ಮಾಡಿ ಎಂದು ಶುಭ ಹಾರೈಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಮಾತನಾಡಿ ದೊಡ್ಡದಾದ ಕನಸು ಕಾಣಿ, ಪ್ರಾಮಾಣಿಕ ಪ್ರಯತ್ನ ಮಾಡಿ ಹಾಗೆ ಮಾಡಿದಾಗ ಯಶಸ್ಸು ನಿಮ್ಮನ್ನು ಹುಡುಕಿ ಬರುತ್ತದೆ.ಮೌಲ್ಯಗಳ ಬೆಳಕಿನಲ್ಲಿ ಹೆಜ್ಜೆ ಇಡಿ ಎಂದು ನುಡಿದು ಶುಭ ಹಾರೈಸಿದರು.

ವಿದ್ಯಾರ್ಥಿಗಳ ಇಷ್ಟು ವರ್ಷಗಳ ವಿದ್ಯಾರ್ಥಿ ಜೀವನ ಕ್ಯಾಮರಾ ಕಣ್ಣಲ್ಲಿ ಕಂಡಂತೆ, ಭಾವಚಿತ್ರಗಳ ಕಿರು ವಿಡಿಯೋ ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಶಿಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳು ನೆನಪಿನ ಕಾಣಿಕೆಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ಶಾಲಾ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಶಾಲಾ ಶಿಕ್ಷಕರಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿದಾಯ ಗೀತೆಗಳನ್ನು ಹಾಡಿ ಶುಭ ಹಾರೈಸಿದರು.

ಸಹಶಿಕ್ಷಕಯರಾದ ಸತ್ಯವತಿ ನಿರೂಪಿಸಿ, ರಮಾ ರಾಜೇಶ್ ವಂದಿಸಿದರು.

Related posts

ನವ ವಿವಾಹಿತ, ಕಂಪನಿ ಉದ್ಯೋಗಿ, ನಾಲ್ಕೂರಿನ ಯುವಕ ಮೈಸೂರಲ್ಲಿ ಆತ್ಮಹತ್ಯೆ

Suddi Udaya

ವಿಶ್ವಹಿಂದೂ ಪರಿಷತ್ ಭಜರಂಗದಳ ವೇಣೂರು ಪ್ರಖಂಡದಿಂದ ವೇಣೂರು ಪೋಲೀಸ್ ಠಾಣೆಗೆ ದೂರು

Suddi Udaya

ಹತ್ಯಡ್ಕ: ನೆಕ್ಕರಡ್ಕ ನಿವಾಸಿ ಅನಸೂಯ ನಿಧನ

Suddi Udaya

ಮೊಗ್ರು ಸ.ಕಿ.ಪ್ರಾ. ಶಾಲೆಯಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ

Suddi Udaya

ಹತ್ಯಡ್ಕ: ಹೊಸ್ತೋಟ ನಿವಾಸಿ, ಯಕ್ಷಗಾನ ಕಲಾವಿದ ಅಂತರ ದಿನೇಶ್ ಭಟ್ ನಿಧನ

Suddi Udaya

ವಾಲಿಬಾಲ್ ಪಂದ್ಯಾಟ: ಮುಂಡಾಜೆ ಪ್ರೌಢಶಾಲಾ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!