September 6, 2026
ಅಭಿನಂದನೆತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ, ವಿದ್ವತ್ ಪಿಯು ಕಾಲೇಜಿಗೆ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ತನುಶ್ರೀ ಶೇ.98.83

ಬೆಳ್ತಂಗಡಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜು ಪ್ರಥಮ ಪ್ರಯತ್ನದಲ್ಲೇ ಅತ್ಯುತ್ತಮ ಫಲಿತಾಂಶ ದಾಖಲಿಸುವ ಮೂಲಕ ವಿದ್ಯಾರ್ಥಿಗಳು ಅಮೋಘ ಸಾಧನೆ ತೋರಿದ್ದಾರೆ.

ಪರೀಕ್ಷೆಗೆ ಹಾಜರಾದ ಒಟ್ಟು 154 ವಿದ್ಯಾರ್ಥಿಗಳ ಪೈಕಿ ವಿಜ್ಞಾನ ವಿಭಾಗದಲ್ಲಿ ತನುಶ್ರೀ (593) ಅಂಕ ಗಳಿಸಿ (ರಸಾಯನಶಾಸ್ತ್ರ-100, ಭೌತಶಾಸ್ತ್ರ-100 ಗಣಿತಶಾಸ್ತ್ರ-100, ಜೀವಶಾಸ್ತ್ರ-100), ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಉಳಿದಂತೆ ಚಿನ್ಮಯ್ ಜಿ.ಕೆ.(589) ಅಂಕ(ಭೌತಶಾಸ್ತ್ರ-100, ರಸಾಯನಶಾಸ್ತ್ರ-100, ಗಣಿತ-100 ಮತ್ತು ಗಣಕ ವಿಜ್ಞಾನ-100) ಪಡೆದು ದ್ವಿತೀಯ, ದೇವಿಪ್ರಸಾದ್ ಶೆಣೈ (586) ಅಂಕ ಭೌತಶಾಸ್ತ್ರ-100, ಗಣಿತ-100, ಜೀವಶಾಸ್ತ್ರ-100 ಪಡೆದು ತೃತೀಯ ಸ್ಥಾನಿಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಧ್ಯಾನ (590) ಅಂಕ (ಕನ್ನಡ-100, ಲೆಕ್ಕಶಾಸ್ತ್ರ ಅಧ್ಯಯನ-100) ಪಡೆಯುವ ಮೂಲಕ ಪ್ರಥಮ ಸ್ಥಾನಿಯಾಗಿದ್ದು, ರಿಷಾಂತ್ ವೈ.ಪಿ. (581), ದ್ವಿತೀಯ ಸ್ಥಾನಿಯಾಗಿದ್ದು, ಶಾನ್ ಹರ್ವಿನ್ ಫೆರ್ನಾಂಡಿಸ್ (580) ತೃತೀಯ ಸ್ಥಾನ ಪಡೆದಿದ್ದಾರೆ. ಕಾಲೇಜು ಮೊದಲ ಪ್ರಯತ್ನದಲ್ಲಿಯೇ ಅದ್ವಿತೀಯ ಸಾಧನೆ ತೋರಿದ್ದಾರೆ.

ಈ ಎಲ್ಲ ವಿದ್ಯಾರ್ಥಿಗಳು ಜೆಇಇ ಮೇನ್ಸ್ -2026 ಪ್ರಥಮ ಹಂತದಲ್ಲಿ 99 ಪರ್ಸೆಂಟೈಲ್ ಪಡೆದಿದ್ದು, ಇದೀಗ ಬೋರ್ಡ್ ಪರೀಕ್ಷೆಯಲ್ಲೂ ಉತ್ತಮ ಸಾಧನೆ ತೋರಿದ್ದಾರೆ.ಸಾಧಕ ವಿದ್ಯಾರ್ಥಿಗಳನ್ನು ವಿದ್ವತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಪ್ರಶಂಸಿದ್ದಾರೆ.

Related posts

ನಿವೃತ್ತ ಯೋಧ ಸುವರ್ಣ ವಿ ವರಕಬೆಯವರಿಗೆ ಸೇವಾ ಸಿಂಧೂರ ಗೌರವಾರ್ಪಣೆ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಿಂದ ವರ್ಗಾವಣೆಗೊಂಡ ಪ್ರಾಂಶುಪಾಲರು ಬಾಲಕೃಷ್ಣ ಬೇರಿಕೆಯವರಿಗೆ ಬೀಳ್ಕೊಡುಗೆ

Suddi Udaya

ಬಿಜೆಪಿ ಮಂಡಲದ ವತಿಯಿಂದ ಲಾಯಿಲ ಶಕ್ತಿಕೇಂದ್ರದ ಕಾರ್ಯಕರ್ತರ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಝಿಯವರನ್ನು ಭೇಟಿಯಾದ ಎಸ್‌ಡಿಪಿಐಯ ಜಿಲ್ಲಾ ನಾಯಕರು

Suddi Udaya

ಬ್ರಾಂಡೆಡ್ ಬಟ್ಟೆ ಖರೀದಿಗೆ ಸುವರ್ಣಾವಕಾಶ! ಶೇ.80 ರವರೆಗೆ ಬ್ರಾಂಡೆಡ್ ಬಟ್ಟೆಗಳ ಮೇಲೆ ಭಾರೀ ರಿಯಾಯಿತಿ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಭೇಟಿ

Suddi Udaya
error: Content is protected !!