September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿ ನಾವರ ವತಿಯಿಂದ ನಾಗಾರತಿ ಯಕ್ಷಗಾನ ಪ್ರದರ್ಶನ

ಬೆಳ್ತಂಗಡಿ:ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿ ನಾವರ ಬೆಳ್ತಂಗಡಿ ತಾಲೂಕು ಇದರ ಉದ್ಘಾಟನಾ ಸಮಾರಂಭ ಹಾಗೂ ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ನಾಗರತಿ ಎಂಬ ಪುಣ್ಯ ಕಥಾ ಭಾಗ ಎ 9 ರಂದು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಜರಗಿತು.

ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿಯನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರದ ಗೌರವಾಧ್ಯಕ್ಷರಾದ ಪೀತಾಂಬರ ಹೇರಾಜೆ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿ ನಾವರ ಇದರ ಅಧ್ಯಕ್ಷರಾದ ಬೇಬಿ ಪೂಜಾರಿ ಫುಣ್ಕೆತ್ಯಾರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದ ಪ್ರಧಾನ ಸಂಚಾಲಕರಾದ ಪ್ರಮಲ್ ಕುಮಾರ್,ಅಳದಂಗಡಿ ಅರಮನೆಯ ಶಿವಪ್ರಸಾದ ಅಜಿಲ,ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ,ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ನಾವರ ಸಮಿತಿ ಗೌರವಾಧ್ಯಕ್ಷ ಪಿ ಎಚ್ ಪ್ರಕಾಶ್ ಶೆಟ್ಟಿ ನೊಚ್ಚ,ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ,ಪ್ರಗತಿಪರ ಕೃಷಿಕರಾದ ಗಂಗಾಧರ ಮಿತ್ತಮಾರು ಉಪಸ್ಥಿತರಿದ್ದರು.

ಪ್ರಮುಖರಾದ ಜಗದೀಶ್ ಹೆಗ್ಡೆ ನಾವರ ಗುತ್ತು, ಜಯಾನಂದ ಪೂಜಾರಿ ಕೊರಲ್ಲ,ಎನ್ ವೀರೇಂದ್ರ ಕುಮಾರ್ ರಾಜಪಾದೆ,ರತ್ನಾಕರ ಪೂಜಾರಿ ಹಿರಂತೊಟ್ಟು,ರವಿ ಪೂಜಾರಿ ಹಾರಡ್ಡೆ, ಪ್ರಶಾಂತ ಹಿಮಮರಡ್ಡ,ಶ್ರೀ ಹರೀಶ್ ಕುಲಾಲ್ ದೇವರಗುಡ್ಡೆ,ಸದಾನಂದ ಬಿ ಕುಧ್ಯಾಡಿ,ವಿಶ್ವನಾಥ್ ಬಂಗೇರ ಆಳದಂಗಡಿ, ಕೊರಗಪ್ಪ ಪೂಜಾರಿ ನೀರಲ್ಕೆ,ಶೇಖರ ಪೂಜಾರಿ ಬರಮೇಲು,ಪುಷ್ಪಾವತಿ ಎನ್ ನಾವರ,ಹರಿಣಾಕ್ಷಿ ಲತೇಶ್ ಪಿಲ್ಯ, ಲ.ವಸಂತ ಸುವರ್ಣ,ದೇಜಪ್ಪ ಪೂಜಾರಿ ಸುಧಾಮ ಬಳಂಜ, ಸಂತೋಷ್ ಪಿ ಕೋಟ್ಯಾನ್ ಬಳಂಜ, ಲ.ಪ್ರವೀಣ್ ಕುಮಾರ್ ಹೆಚ್ ಎಸ್, ಯುವರಾಜ ಕೆಲ್ಲ ಮೊರಂಕಜೆ, ವಿಶ್ವನಾಥ ಪೂಜಾರಿ ಕುದ್ಯಾಡಿಗುತ್ತು, ಸಂಜೀವ ಪೂಜಾರಿ ಕೊಡಂಗೆ, ಪ್ರದೀಪ್ ಶೆಟ್ಟಿ ಕನಸು ಪಿಲ್ಯ, ಸುಧೀರ್ ಎಸ್ ಪಿ ಸುಲ್ಕೇರಿ, ನಿತ್ಯಾನಂದ ಶೆಟ್ಟಿ ನೊಚ್ಚ,ಡಾ ಶಶಿಧರ ಡೊಂಗ್ರೆ, ವಿಶ್ವನಾಥ ಶೆಟ್ಟಿ ಸುಲ್ಕೇರಿ,ಲ. ಸುಂದರ ಶೆಟ್ಟಿ ಪರಾರಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,

ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿ ನಾವರ ಇದರ ಪ್ರಧಾನ ಸಂಚಾಲಕರಾದ ನಿತ್ಯಾನಂದ ನಾವರ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ವೇದಿಕೆಯಲ್ಲಿದ್ದ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಯಕ್ಷಗಾನ ಸವಿಯಲು ಬಂದಂತಹ ಎಲ್ಲ ಸಭಿಕರಿಗೆ ಫಲಹಾರದ ವ್ಯವಸ್ಥೆಯನ್ನು ಯಕ್ಷಗಾನ ಬಯಲಾಟ ಸಮಿತಿಯ ಪದಾಧಿಕಾರಿ ರವಿಚಂದ್ರ ಭಟ್ ಗುರುನಿಲಯ ನಾವರ ಮಾಡಿದ್ದರು. ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿ ನಾವರ ಇದರ ಪ್ರಧಾನ ಕಾರ್ಯದರ್ಶಿಯಾದ ವಿಜಯಕುಮಾರ್ ಜೈನ್ ನಿರೂಪಿಸಿ, ವಂದಿಸಿದರು.

ಗೌರವಾರ್ಪಣೆ: ಕಾರ್ಯಕ್ರಮದಲ್ಲಿ ಗೆಜ್ಜೆಗಿರಿ ಮೇಳದ ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣಗೌಡ, ಯಕ್ಷ ಸೇವೆಯಲ್ಲಿ 25 ಸಂವತ್ಸರವನ್ನು ಪೂರೈಸಿದ ಶ್ರೀ ತೆಲಿಕೆದ ಬೊಳ್ಳಿ ದಿನೇಶ್ ರೈ ಕಡಬ,ಮುಖ್ಯ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದ ಅಶ್ವಥ್ ಆಚಾರ್ಯ ಕೈಕಂಬ ಇವರನ್ನು ಗೌರವಿಸಲಾಯಿತು.

Related posts

ಬೆಳ್ತಂಗಡಿ ಸಾರ್ವಜನಿಕ ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಪೈ , ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ ಪಟವರ್ಧನ್ ಆಯ್ಕೆ

Suddi Udaya

ಕಜಕೆ ಸ. ಹಿ ಪ್ರಾ. ಶಾಲೆಗೆ ಬೆಸ್ಟ್ ಫೌಂಡೇಶನ್ ವತಿಯಿಂದ ಪೀಠೋಪಕರಣ ವಿತರಣೆ

Suddi Udaya

ಸುಲ್ಕೇರಿ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾಸಿಕ ಸಭೆ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರರ 79ನೇ ಹುಟ್ಟು ಹಬ್ಬದ ಆಚರಣೆ, ಬೃಹತ್ ರಕ್ತದಾನ ಶಿಬಿರ ಹಾಗೂ ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವಲ್ಲಿ ಸಹಕರಿಸಿದ ದಾನಿಗಳಿಗೆ ಅಭಿನಂದನೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ಜೀವ ಬೆದರಿಕೆ ಆರೋಪದ ತನಿಖೆಗೆ ಹೈಕೋರ್ಟ್‌ ಆದೇಶ; ಸುಳ್ಳು ಸಾಕ್ಷ್ಯ ಒತ್ತಾಯ ಆರೋಪಕ್ಕೆ ತಡೆ

Suddi Udaya
error: Content is protected !!