September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಚಾಲನೆ

ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಮೇಷ ಸಂಕ್ರಮಣವಾದ ಇಂದು ಚಾಲನೆ ದೊರೆಯಿತು.

ಬೆಳಿಗ್ಗೆ ತೋರಣ ಮುಹೂರ್ತ ನಡೆದು ಧ್ವಜಾರೋಹಣ ನೆರವೇರುವ ಮೂಲಕ ಒಂಭತ್ತು ದಿನಗಳ ಜಾತ್ರಾ ಮಹೋತ್ಸವ ವಿಧಿ ವಿಧಾನಕ್ಕೆ ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯರವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಮಧ್ಯಾಹ್ನ ಮಹಾಪೂಜೆ ನೆರವೇರಿದ್ದು, ನೂರಾರು ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು. , ಪ್ರಧಾನ ಅರ್ಚಕರಾದ ವಿಷ್ಣುಮೂರ್ತಿ ಭಟ್ ಉಪಸ್ಥಿತರಿದ್ದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ್ ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು. ಸಮಿತಿ ಸದಸ್ಯರು ಸಹಕರಿಸಿದರು.

ಜಾತ್ರಾ ದಿನಗಳಂದು ಶ್ರೀ ದೇವರಿಗೆ ವಿಶೇಷ ಪೂಜೆ, ಭಜನೆ, ಉತ್ಸವ, ಮಹಾಪೂಜೆ, ನಿತ್ಯಬಲಿ ನಡೆಯಲಿದೆ. ಎ. 19ರಂದು ರಾತ್ರಿ ರಕ್ತೇಶ್ವರಿ ದೈವದ ನೇಮ ನಡೆಯಲಿದೆ. ಎ. 20ರಂದು ರಾತ್ರಿ ದರ್ಶನ ಬಲಿ, ಕಲ್ಕುಡ-ಕಲ್ಲುರ್ಟಿ ದೈವಗಳ ನೇಮ ನಡೆಯಲಿದೆ. ಎ.22ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಚೂರ್ಣೋತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

ರಾತ್ರಿ ಶ್ರೀ ಕೊಡಮಣಿತ್ತಾಯ ದೈವದ ನೇಮ, ಉತ್ಸವ ಹಾಗೂ ಮಹಾ ರಥೋತ್ಸವ ನಡೆಯಲಿದೆ. ಎ.23ರಂದು ರಾತ್ರಿ ಅಂಗಣ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ. ಎ. ೨೫ರಂದು ಶ್ರೀ ಭದ್ರಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವ ಜರಗಲಿದೆ.

ಹಸಿರುವಾಣಿ ಹೊರೆಕಾಣಿಕೆ: ಜಾತ್ರಾ ಸಂದರ್ಭದಲ್ಲಿ ಪ್ರತೀ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದ್ದು, ಎ.13ರಿಂದ 21ರವರೆಗೆ ಭಕ್ತರು ಹಸಿರುವಾಣಿ ಹೊರೆಕಾಣಿಕೆಯನ್ನು ಕ್ಷೇತ್ರಕ್ಕೆ ಸಮರ್ಪಿಸಬಹುದಾಗಿದೆ.

Related posts

ಡಾ. ಟಿ. ವಿ. ಜೋಸೆಫ್ ರಸ್ತೆ” ನಾಮಫಲಕ ಅನಾವರಣ – ಕಾರುಣ್ಯ ಸ್ಪರ್ಶಂ ಯೋಜನೆಯಡಿ ಚಿಕಿತ್ಸಾ ಸಹಾಯಧನ

Suddi Udaya

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ: ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Suddi Udaya

ವಾಣಿ ಪದವಿಪೂರ್ವ ಕಾಲೇಜಿನ ಬಾಲಕಿಯರು ಪ್ರತಿನಿಧಿಸಿದ ದಕ್ಷಿಣ ಕನ್ನಡ ಜಿಲ್ಲೆಯ ತ್ರೋಬಾಲ್ ತಂಡಕ್ಕೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ

Suddi Udaya

ಕರಾಯ ಸರ್ಕಾರಿ ಪ್ರೌಢಶಾಲೆಗೆ ಹಿರಿಯ ವಿದ್ಯಾರ್ಥಿಗಳಿಂದ ಕುಡಿಯುವ ನೀರಿನ ಯಂತ್ರ ಕೊಡುಗೆ

Suddi Udaya

ಉಜಿರೆ: ಮಾಚಾರಿನಲ್ಲಿ ಎಸ್‌ವೈಎಸ್ 30 ನೇ ವಾರ್ಷಿಕ ಪ್ರಚಾರಾರ್ಥ ಕಾರ್ಯಕ್ರಮ

Suddi Udaya
error: Content is protected !!