September 6, 2026
ಅಭಿನಂದನೆಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಎಕೆಎಮ್ಎಸ್ಎಸ್ ಬೆಳ್ತಂಗಡಿ ‌ಘಟಕದ ಪ್ರಥಮ ವರ್ಷದ ಕುಟುಂಬ ಮಿಲನ ಕಾರ್ಯಕ್ರಮ

ಬೆಳ್ತಂಗಡಿ: ಎಕೆಎಮ್ಎಸ್ಎಸ್ (ರಿ) ದ.ಕ ಜಿಲ್ಲಾ ಬೆಳ್ತಂಗಡಿ ‌ಘಟಕದ ಪ್ರಥಮ ವರ್ಷದ ಕುಟುಂಬ ಮಿಲನ ಕಾರ್ಯಕ್ರಮ ಏ.14ರಂದು ಬಲಿಪ ರೆಸಾರ್ಟ್ ನಲ್ಲಿ ನಡೆಯಿತು.

ಎಕೆಎಮ್ಎಸ್ಎಸ್ ತಾಲೂಕು ಘಟಕದ ಅಧ್ಯಕ್ಷ ಎನ್.ಪಿ ತಂಗಚ್ಚನ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವು ಬಲಿಪ ರೆಸಾರ್ಟ್‌ ಮಾಲಕರು ಬೆಳ್ತಂಗಡಿ ತಾಲೂಕಿನ ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಲಯನ್ ಮುರಳಿ ಬಲಿಪ ಎಮ್.ಜೆ.ಎಫ್ ದಂಪತಿಗಳಿಂದ ದೀಪ ಬೆಳಗಿಸುವ ಮೂಲಕ ಚಾಲನೆಗೊಂಡಿತು.

ವೇದಿಕೆಯಲ್ಲಿ ಇತ್ತೀಚಿಗೆ ರಾಷ್ಟ್ರ ಪ್ರಶಸ್ತಿ ಪಡೆದ ದ.ಕ ಜಿಲ್ಲಾ ಎಕೆಎಮ್ಎಸ್ಎಸ್ ಗೌರವಾಧ್ಯಕ್ಷರು ಲಯನ್ ಡಾ. ಗೋಪಾಲಕೃಷ್ಣ ಕಾಂಚೋಡು ದಂಪತಿಗಳನ್ನು ಮತ್ತು ಲಯನ್ ಮುರಳ ಬಲಿಪ ದಂಪತಿಗಳನ್ನು ಸನ್ಮಾನಿಸಲಾಯಿತು.

‌ತಾಲೂಕು ಘಟಕದ ಗೌರವಾಧ್ಯಕ್ಷರಾದ ಎಮ್.ಕೆ ಮಣಿ ಕಾರ್ಯದರ್ಶಿ ಸುರೇಶ್ ಗೌಡ ಅಧ್ಯಕ್ಷ ತಂಗಚ್ಚನ್ ದಂಪತಿಗಳು ಉಪಸ್ಥಿತರಿದ್ದರು.ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಸದಸ್ಯರು ಕುಟುಂಬದ ಸದಸ್ಯರು ಭಾಗವಹಿಸಿದರು. ಮಹಿಳೆಯರಿಗೆ, ಮಕ್ಕಳಿಗೆ ಆಟೋಟ ಸ್ಪರ್ಧೆಗಳು ನಡೆದವು. ಮಧ್ಯಾಹ್ನದ ಭೋಜನದ ನಂತರ ಮಕ್ಕಳು ಈಜು ಕೊಳದಲ್ಲಿ ಈಜಾಡಿ ಪೂರ್ಣ ಪ್ರಮಾಣದ ರಜೆಯ ಮಜಾ ಅನುಭವಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.ವಿಕ್ರಂ ಗೌಡ ನಿರೂಪಿಸಿ, ಸುರೇಶ್ ಗೌಡ ಸ್ವಾಗತಿಸಿ, ಹರೀಶ್ ಶೆಟ್ಟಿ ವಂದಿಸಿದರು.

Related posts

ಉಜಿರೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಬೆಂಕಿ ರಹಿತ ಪೌಷ್ಟಿಕ ಆಹಾರ ತಯಾರಿ ಸ್ಪರ್ಧೆ

Suddi Udaya

ಬೆಳ್ತಂಗಡಿ: ತಾ| ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮ

Suddi Udaya

ಕೊಕ್ಕಡ ಹಿಂದೂ ಸಂಗಮ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಲ್ಮಂಜ: ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಗಾಲಿಕುರ್ಚಿ ಹಸ್ತಾಂತರ

Suddi Udaya

ಆ. 7 -8: “ಆಳ್ವಾಸ್ ಪ್ರಗತಿ” ಬೃಹತ್ ಉದ್ಯೋಗ ಮೇಳ: ಭಾಗವಹಿಸುವ ಅಭ್ಯರ್ಥಿಗಳಿಗೆ “ಶ್ರಮಿಕ ಶಾಸಕರ ಕಚೇರಿ” ಯಿಂದ ಬಸ್ ವ್ಯವಸ್ಥೆ

Suddi Udaya

ಬಿಜೆಪಿ ದ.ಕ. ಜಿಲ್ಲೆ, ಬೆಳ್ತಂಗಡಿ ಮಂಡಲ ರೈತ ಮೋರ್ಚಾದ ವತಿಯಿಂದ ಪೆಟ್ರೋಲ್, ಡಿಸೇಲ್ ಮತ್ತು ಹಾಲಿನ ದರ ಏರಿಕೆ ಖಂಡಿಸಿ ಹಾಗೂ ಹಾಲಿನ ಪ್ರೋತ್ಸಾಹಧನ ಬಿಡುಗಡೆಗೊಳಿಸದಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ

Suddi Udaya
error: Content is protected !!