July 23, 2026
ಗ್ರಾಮಾಂತರ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬೆಳಾಲು ಪೆರಿಯಡ್ಕ ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯ ಅವರಿಗೆ ಬೀಳ್ಕೊಡುಗೆ ಸಮಾರಂಭ: ಶಾಲೆಯ ಪ್ರಗತಿಗೆ ಶಿಕ್ಷಕಿ ವಿಜಯರವರ ಕೊಡುಗೆ ಅಪಾರ: ಮೋಹನ್ ಕುಮಾರ್

ಬೆಳಾಲು: ಶಿಕ್ಷಕರು ಎಂದರೆ ಕೇವಲ ಪಾಠ ಹೇಳಿಕೊಡುವವರಲ್ಲ, ನಮ್ಮ ಜೀವನದ ದಾರಿ ದೀಪ. ಅವರು ನಮಗೆ ಕೇವಲ ವಿಷಯಗಳನ್ನು ಬೋಧಿಸಲಿಲ್ಲ,ಬದಲಾಗಿ ಜೀವನದ ಮೌಲ್ಯಗಳನ್ನು,ಶಿಸ್ತನ್ನು ಮತ್ತು ಸವಾಲುಗಳನ್ನು ಎದುರಿಸುವ ಧೈರ್ಯವನ್ನು ಕಲಿಸಿದ್ದಾರೆ.‌ಶಿಕ್ಷಕಿ ವಿಜಯ ಅವರಿಗೆ ಬೆಳಾಲು ಪೆರಿಯಡ್ಕ ಶಾಲೆ ಮತ್ತು ವಿದ್ಯಾರ್ಥಿಗಳ ಮೇಲಿದ್ದ ಪ್ರೀತಿ,ಕಾಳಜಿ ಸ್ಮರಣೀಯವಾದುದು ಎಂದು ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ‌.ಮೋಹನ್ ಕುಮಾರ್ ಹೇಳಿದರು.

ಅವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೆರಿಯಡ್ಕ ಇಲ್ಲಿ ಸುಮಾರು 19 ವರ್ಷಗಳ ಕಾಲ ಮುಖ್ಯ ಶಿಕ್ಷಕಿಯಾಗಿ ಅಮೂಲ್ಯ ಸೇವೆಯನ್ನು ಸಲ್ಲಿಸಿ ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕನ್ಯಾಡಿ II ವರ್ಗಾವಣೆಗೊಂಡ ಶ್ರೀಮತಿ ವಿಜಯ ಅವರ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬಿಳ್ಕೊಡುಗೆ ಸಮಾರಂಭದ ಸಂಚಾಲಕರಾದ ಜಗದೀಶ್ ಜೈನ್ ವಹಿಸಿ ವಿದ್ಯಾದೇಗುಲಕ್ಕೆ ಶಿಕ್ಷಕಿ ವಿಜಯ ಅವರು ನೀಡಿದ ಸೇವೆ ಮೆಚ್ಚುವಂತದ್ದು.ಅವರು ಮಾದರಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಶಾಲೆಯ ಸರ್ವತೋಮುಖ ಬೆಳವಣಿಗೆ ಅವರ ಕೊಡುಗೆ ಅಪಾರವಾಗಿದೆ ಎಂಬ ಮೆಚ್ಚುಗೆಯ ಮಾತುಗಳನ್ನಾಡಿ ಶುಭ ಕೋರಿದರು.

ವರ್ಗಾವಣೆಗೊಂಡ ಶಿಕ್ಷಕಿ ವಿಜಯ ಅವರು ಮಾತನಾಡಿ ನಾನು ಈ ವಿದ್ಯಾದೇಗುಲಕ್ಕೆ ಶಿಕ್ಷಕಿಯಾಗಿ ಬಂದು, ಸೇವೆ ನೀಡಲು ಅವಕಾಶ ನೀಡುವುದರೊಂದಿಗೆ ಶಾಲೆಯ ಬೆಳವಣಿಗೆಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ವಂದನೆಗಳು.ಸಿಹಿ ನೆನಪುಗಳು ಎಂದಿಗೂ ಶಾಶ್ವತವಾಗಿರಲಿ ಎಂದರು.

ವೇದಿಕೆಯಲ್ಲಿ ಬೆಳಾಲು ಗ್ರಾ.ಪಂ ಮಾಜಿ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ ಗೌಡ, ಪ್ರಮೋದ್ ಕುಮಾರ್ ಆರ್ಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗದೀಶ್,ಉದ್ಯಮಿ ಜಯಣ್ಣ ಗೌಡ ಮಿನಂದೇಲ್,ಸಿ.ಆರ್.ಪಿ ಪ್ರತಿಮಾ ವೆಂಕಟೇಶ್, ಕಾವಟೆ ಡೊಂಬಯ್ಯಾ ಗೌಡ ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್, ಚಿತ್ತಾರ ಯುವಶಕ್ತಿ ಗೆಳೆಯರ ಬಳಗದ ಅಧ್ಯಕ್ಷ ಮಾದವ ಗೌಡ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಸಾದ್ ಗೌಡ,ಮುಖ್ಯ ಶಿಕ್ಷಕಿ ಜಯಶ್ರೀ ಬಿ ಕೆ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಿಎಂ ಶ್ರೀ ಶಾಲೆ ಬೆಳ್ತಂಗಡಿ ಇಲ್ಲಿಯ ಸಹಶಿಕ್ಷಕರಾದ ಸೀತಾರಾಮ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯೂರು ಶಾಲೆಯ ಸಹ ಶಿಕ್ಷಕರಾದ ದೇವಪ್ಪ ಕಾರ್ಯಕ್ರಮ ನಿರೂಪಿಸಿ,ಶಿಕ್ಷಕಿ ಶ್ರೀಮತಿ ಜಯಶ್ರೀ ಬಿಕೆ ಸ್ವಾಗತಿಸಿದರು. ಜ್ಞಾನ ದೀಪ ಶಿಕ್ಷಕಿ ಕುಮಾರಿ ಪ್ರವಲ್ಲಿಕ ಧನ್ಯವಾದಗಳು ಸಮರ್ಪಿಸಿದರು.

Related posts

ನಿಡಿಗಲ್: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ – ಶಾಂಭವಿ ವಿಲಾಸ ಯಕ್ಷಗಾನ ಪ್ರದರ್ಶನ

Suddi Udaya

ದೇವಿ ಭಗವತಿ ಅಮ್ಮನವರ ಬ್ರಹ್ಮಕಲಶೋತ್ಸವತಂತ್ರಿಗಳಿಗೆ ಪೂರ್ಣಕುಂಭದ ಸ್ವಾಗತ

Suddi Udaya

ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತ್ರ್

Suddi Udaya

ಓಡೀಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕ್ಯಾಂಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಆರ್ಥಿಕ ನೆರವು

Suddi Udaya

ಕಡಿರುದ್ಯಾವರ: ಕಾನರ್ಪ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!