ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ಮಳೆಗಾಲದ ವಿಪತ್ತು ಎದುರಿಸಲು ತಂಡ ರಚನೆ

bಬೆಳ್ತಂಗಡಿ: ಮಳೆಗಾಲದಲ್ಲಿ ಸಂಭವಿಸುವ ವಿಪತ್ತುಗಳಿಂದ ವಿದ್ಯುತ್ ಕಡಿತದ ಸಮಸ್ಯೆ ಕಡಿಮೆ ಮಾಡಲು ಲೈನ್‌ ಮ್ಯಾನ್‌ಗಳ ಜೊತೆ ಸಿಬ್ಬಂದಿ ನೇಮಿಸಲಾಗಿದ್ದು, ಆಯಾ ವಿಭಾಗಕ್ಕೆ ಎಇಇ ಉಸ್ತುವಾರಿಯಲ್ಲಿ ಐವರ ತಂಡ ಕಾರ್ಯಾಚರಿಸಲಿದೆ ಎಂದು ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾ‌ರ್ ಹೇಳಿದರು.

ಬಿಜೈಯ ಮೆಸ್ಕಾಂ ಕಚೇರಿಯಲ್ಲಿ ಎ.15ರಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಈ ತಂಡವನ್ನು ಈಗಾಗಲೇ ರಚಿಸಲಾಗಿದ್ದು, ಅವರಿಗೆ ಒಂದು ವಾಹನವನ್ನೂ ಒದಗಿಸಲಾಗಿದೆ. ಸೆಪ್ಟೆಂಬರ್‌ವರೆಗೆ ಅವರ ಕಾರ್ಯಾಚರಣೆ ನಡೆಯುತ್ತಿರುತ್ತವೆ. ಟ್ರಾನ್ಸ್ ಫಾರ್ಮರ್ ದುರಸ್ತಿ, ಮರ, ಗೆಲ್ಲುಗಳು ಬಿದ್ದು ತಂತಿ, ಕಂಬಗಳಿಗೆ ಹಾನಿಯಾದರೆ ತುರ್ತಾಗಿ ಸರಿಪಡಿಸುವುದು ತಂಡದ ಕೆಲಸವಾಗಿರುತ್ತದೆ. 63 ಸಬ್ ಡಿವಿಷನ್‌ ನ 245 ವಿಭಾಗಗಳಲ್ಲಿ ತಂಡ ರಚನೆಯಾಗಿದೆ. ತಿಂಗಳಿಗೆ 2 ಕೋಟಿ ರೂ. ಹೆಚ್ಚುವರಿ ಖರ್ಚು ಬರಲಿದೆ. ಆದರೆ ಜನರಿಗೆ ಸೇವೆ ಸಿಗಲಿದೆ ಎಂದರು.

ಲೈನ್‌ಮ್ಯಾನ್‌ಗಳ ನೇಮಕ: ಮೆಸ್ಕಾಂಗೆ ನೂತನವಾಗಿ 465 ಮಂದಿ ಲೈನ್ ಮನ್‌ಗಳ ನೇಮಕ ಮಾಡಲಾಗುತ್ತಿದೆ. 9,248 ಲೈನ್‌ಮ್ಯಾನ್‌ ಹುದ್ದೆಗಳ ಪೈಕಿ 5,283 ಹುದ್ದೆ ಭರ್ತಿಯಾಗಿದೆ. ಉಳಿದ 4145 ಮಂದಿಯನ್ನು ಇನ್ನು ನೇಮಕ ಮಾಡಬೇಕಿದೆ. ಪ್ರತಿ ತಾಲೂಕು ಕೇಂದ್ರಗಳಲ್ಲೂ ಇ-ಚಾರ್ಜಿಂಗ್ ಸೆಂಟರ್ ಅಳವಡಿಸುವ ಬಗ್ಗೆ ಸರ್ವೇ ಕಾರ್ಯ ನಡೆಸಲಾಗುತ್ತಿದ್ದು, ಶೀಘ್ರವಾಗಿ ಕೆಲಸ ನಡೆಸಲಾಗುವುದು ಎಂದು ಹರೀಶ್ ಕುಮಾರ್ ಹೇಳಿದರು.

Related posts

ಬೆಳ್ತಂಗಡಿ ಕೋಟಿ- ಚೆನ್ನಯ ಕ್ರೀಡಾಕೂಟ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುಕ್ಕೇಡಿ ನಿಟ್ಟಡೆ ಸಮಗ್ರ ಚಾಂಪಿಯನ್

Suddi Udaya

ಗುರುವಾಯನಕೆರೆ ಗೆಳೆಯರ ಬಳಗದ ಪದಾಧಿಕಾರಿಗಳ ಆಯ್ಕೆ

Suddi Udaya

ಕಳೆಂಜ ನಡುಜಾರು ಸ.ಕಿ.ಪ್ರಾ. ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಫೆ. 01: ಬೆಳಾಲು ಡಿಪಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ಪುರುಷರ ವಾಲಿಬಾಲ್‌ ಪಂದ್ಯಾಟ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ಪುರುಷರ ತ್ರೋಬಾಲ್ ಪಂದ್ಯಾಟದಲ್ಲಿ ಬಂದಾರು ಗ್ರಾಮ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Suddi Udaya
error: Content is protected !!