September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯರಾಜ್ಯ ಸುದ್ದಿವರದಿ

ಮಹಿಳಾ ಮೀಸಲಾತಿಗೆ ತಡೆಯೊಡ್ಡಿದ ಕಾಂಗ್ರೆಸ್ ನ ಕೃತ್ಯ ಪ್ರಜಾಪ್ರಭುತ್ವಕ್ಕೆ ಮಸಿ ಬಳಿದಂತಾಗಿದೆ: ಹರೀಶ್ ಪೂಂಜ

ಬೆಳ್ತಂಗಡಿ: ಬದಲಾಗುತ್ತಿರುವ ಕಾಲಘಟ್ಟದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಸತ್ತಿನಲ್ಲಿ ಶೇ.33 ಮಹಿಳೆಯರಿಗೆ ಮೀಸಲಿಡುವ ಐತಿಹಾಸಿಕ ಮಸೂದೆಯನ್ನು ಲೋಕಸಭೆಯಲ್ಲಿ ಮೂರನೇ ಎರಡು ಬಹುಮತ ಪಡೆಯದಂತೆ ತಡೆಯೊಡ್ಡಿ ಇದೀಗ ವಿಘ್ನ ಸಂತೋಷಿಗಳಂತೆ ಸಂಭ್ರಮ ಆಚರಿಸುತ್ತಿರುವುದು ಮಹಿಳೆಯರಿಗೆ ಮಾಡಿದ ದ್ರೋಹದ ಜೊತೆಗೆ ಪ್ರಜಾಪ್ರಭುತ್ವಕ್ಕೆ ಮಸಿ ಬಳಿದಂತಾಗಿದೆಯೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಟುವಾಗಿ ಟೀಕಿಸಿದ್ದಾರೆ.

ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿರುವುದು ಕಾಂಗ್ರೆಸ್ ಗೆ ರಕ್ತಗತ ಚಾಳಿಯಾಗಿದೆ. ಅನೇಕ ಬಾರಿ 356ನೇ ವಿಧಿ ಪ್ರಯೋಗಿಸಿ ಚುನಾಯಿತ ಸರಕಾರಗಳ ವಜಾ, 1975ರಲ್ಲಿ ಅಲಹಾಬಾದ್ ಉಚ್ಚ ತೀರ್ಪಿಗೆ ವ್ಯತಿರಿಕ್ತವಾಗಿ ತುರ್ತು ಪರಿಸ್ಥಿತಿ ಘೋಷಣೆ, ರಾಜ್ಯಪಾಲರನ್ನು ಕೈಗೊಂಬೆ ಮಾಡಿ ಸಂವಿಧಾನ ಬಾಹಿರ ಕೃತ್ಯ ಎಸಗುವುದು ಕಾಂಗ್ರೆಸ್ ನ ಚರಿತ್ರೆಯ ಕರಾಳ ಮುಖವಾಗಿದೆ. ಇದೀಗ ತಾನೇ ಈ ಹಿಂದೆ ತರಲೆತ್ನಿಸಿದ ಮಹಿಳಾ ಮೀಸಲಾತಿ ಮಸೂದೆಗೆ ನರೇಂದ್ರ ಮೋದಿಯನ್ನು ವಿರೋಧಿಸುವ ಏಕೈಕ ಕಾರಣಕ್ಕೆ ತಡೆಹಿಡಿದಿದ್ದು ಮಹಿಳೆಯರ ಪರ ಕಾಂಗ್ರೆಸ್ ಪಕ್ಷ ನಿಲುವು ಏನೆಂಬುದು ಬಟಾಬಯಲಾಗಿದೆ.

ತಂತ್ರಜ್ಞಾನ ಯುಗದಡೆಗೆ ದಾಪುಗಾಲಿಡುವ ಇಂದಿನ ದಿನದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ (ಇವಿಎಂ) ವಿದ್ಯುನ್ಮಾನ ಮತಯಂತ್ರದಿಂದ ಬ್ಯಾಲೆಟ್ ಪೇಪರ್ ಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಉದ್ದೇಶಿಸಿದೆ. ಇಂತಹ ಮನಸ್ಥಿತಿಯಿರುವ ಕಾಂಗ್ರೆಸ್ ಪಕ್ಷದ ಜನ ಪ್ರತಿನಿಧಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವೆಂದು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

Related posts

ಉಜಿರೆ ಹಳೆಪೇಟೆಯಲ್ಲಿ ಫ್ಯಾಬ್ರಿಕ್ ಲೂಮ್ ರೆಡಿಮೇಡ್ ಶಾಪ್ ಉದ್ಘಾಟನೆ

Suddi Udaya

ಬ್ರಹ್ಮವಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ವಿಚಾರಣೆಗಾಗಿ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರು

Suddi Udaya

ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಒತ್ತಡ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಜೈ ಕರ್ನಾಟಕ ಗಾಯಕರ ಬಳಗದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ: ಗೌರವ ಅಧ್ಯಕ್ಷರಾಗಿ ಮನೋಹರ ಪ್ರಸಾದ್, ಜಿಲ್ಲಾ ಅಧ್ಯಕ್ಷರಾಗಿ ಇಸ್ಮಾಯಿಲ್ ಬಂಗಾಡಿ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈದ್ ಮಿಲಾದ್ ಆಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಭೇಟಿ

Suddi Udaya
error: Content is protected !!