September 6, 2026
ಚಿತ್ರ ವರದಿವರದಿಸಂಘ-ಸಂಸ್ಥೆಗಳು

ಅಬ್ಬಕ್ಕ ರಾಣಿ ಕುರಿತು ವಿಶೇಷ ಸರಣಿ ಉಪನ್ಯಾಸ ಕಾರ್ಯಾಕ್ರಮ ಸಮಾರೋಪ ಹಾಗೂ ಸಂಶೋಧನಾ ಗ್ರಂಥ ಬಿಡುಗಡೆ

ಮಂಗಳೂರು: ಉಳ್ಳಾಲದ ಅಬ್ಬಕ್ಕ ರಾಣಿ ಆಳ್ವಿಕೆಯ 500ನೇ ವರ್ಷಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಉಪನ್ಯಾಸಕರ ಹಾಗೂ ಶಿಕ್ಷಕರ ಸಂಘ ಮಂಗಳೂರು ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಬ್ಬಕ್ಕ ರಾಣಿಯ ಕುರಿತ 100 ಸರಣಿ ಉಪನ್ಯಾಸ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ನಾಡಿನ ಹಲವು ಖ್ಯಾತ ಉಪನ್ಯಾಸಕರು, ಸಾಹಿತಿಗಳು,ಸಂಶೋಧಕರು ಅಬ್ಬಕ್ಕ ರಾಣಿಯ ಕುರಿತಾಗಿ ಸಂಶೋಧನೆ ನಡೆಸಿ ಸಿದ್ಧಪಡಿಸಿದ ಸಂಶೋಧನಾತ್ಮಕ ಪ್ರಬಂಧಗಳನ್ನೊಳಗೊಂಡ ವಿಶೇಷ ಬೃಹತ್ ಗ್ರಂಥ ಸಂಚಿಕೆಯ ಲೋಕಾರ್ಪಣಾ ಕಾರ್ಯಕ್ರಮವು ಮಂಗಳೂರಿನ ನಿರ್ಮಲ ಭಾರತ್ ಚಾರಿಟೇಬಲ್ ಟ್ರಸ್ಟ್ ಇದರ ಸಹಯೋಗದೊಂದಿಗೆ ಎ.18ರಂದು ಉಳ್ಳಾಲದ ಶಾರದಾ ನಿಕೇತನ ಸಭಾಂಗಣದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಉಪನ್ಯಾಸಕರ ಹಾಗೂ ಶಿಕ್ಷಕರ ಸಂಘ, ಮಂಗಳೂರು ವಿಭಾಗ ಆಯೋಜಿಸಿಕೊಂಡಿದ್ದ ಅಬ್ಬಕ್ಕ ರಾಣಿಯ ನೂರು ಉಪನ್ಯಾಸ ಸರಣಿ ಕಾರ್ಯಕ್ರಮಗಳಲ್ಲಿ ಉಪನ್ಯಾಸಕರು, ಸಾಹಿತಿ, ಸಂಶೋಧಕರು ಹಾಗೂ ಚಲನಚಿತ್ರ ನಿರ್ದೇಶಕರೂ ಆಗಿರುವ ಬಿ.ಎ.ಲೋಕಯ್ಯ ಶಿಶಿಲರು ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಸರಣಿ ಉಪನ್ಯಾಸವನ್ನು ನಡೆಸಿಕೊಟ್ಟಿದರಲ್ಲದೆ ಅಬ್ಬಕ್ಕ ರಾಣಿಯ ಕುರಿತಾಗಿ ವಿಶೇಷ ಸಂಶೋಧನೆ ನಡೆಸಿ ಅಬ್ಬಕ್ಕ ರಾಣಿಯ ಕುರಿತಾಗಿ ಈ ವರೆಗೆ ಯಾರೂ ಕಂಡು ಕೇಳರಿಯದ ಬಹಳಷ್ಟು ವಿಚಾರಗಳನ್ನು ತಮ್ಮ ಸಂಶೋಧನಾ ಪ್ರಬಂಧದಲ್ಲಿ ತಿಳಿಯಪಡಿಸಿದ್ದಾರೆ. ಇದರಂತೆ ನಾಡಿನ ಹಲವು ವಿದ್ವಾಂಸರು ಸಂಶೋಧಿಸಿದ ಸಂಶೋಧನಾ ಪ್ರಬಂಧಗಳು ಕೂಡ ಈ ಗ್ರಂಥ ಸಂಚಿಕೆಯಲ್ಲಿ ಪ್ರಕಟವಾಗಿರುತ್ತವೆ.

ಸಮಾರಂಭದ ದೀಪ ಪ್ರಜ್ವಲನೆಯನ್ನು ಅಬ್ಬಕ್ಕ ರಾಣಿಯ ವಂಶಸ್ಥರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ನೆರವೇರಿಸಿದರು.

ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವೇಣೂರು ಬಾಹುಬಲಿ ಮಸ್ತಕಾಭಿಷೇಕ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ರಾಷ್ಟ್ರೀಯ ಸ್ವಯಂಸೇವಕ ಸಂಘ ದಕ್ಷಿಣ ಪ್ರಾಂತ ಇದರ ಪ್ರಾಂತ ಸಹ ಕಾರ್ಯವಾಹಕರಾದ ಪಿ.ಎಸ್. ಪ್ರಕಾಶ್, ರಾಜ್ಯ ಕೆ.ಆರ್.ಎಂ ಎಸ್ ನ ರಾಜ್ಯಾಧ್ಯಕ್ಷ ಗುರುನಾಥ್ ಬಡಿಗೇರ್, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಸಂದೀಪ್ ಬೂದಿಹಾಳ್, ನಿರ್ಮಲ್ ಭಾರತ್ ಚಾರಿಟೇಬಲ್ ಟ್ರಸ್ಟ್ ಇದರ ವಿಶ್ವಸ್ಥ ಕೆ. ರಮೇಶ್ ಮುಂತಾದವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖರಾದ ಸುಧೀರ್ ಸಮಾರೋಪ ಭಾಷಣ ನೆರವೇರಿಸಿದರು. ಇದೇ ವೇಳೆ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಬಂಟ್ವಾಳ ಇದರ ಸಂಸ್ಥಾಪಕ ತುಕಾರಾಂ ಪೂಜಾರಿ ಹಾಗೂ ಡಾ ಆಶಾಲತಾ ಸುವರ್ಣ ಇವರನ್ನು ಸನ್ಮಾನಿಸಲಾಯಿತು.

Related posts

ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಇದರ ವಾರ್ಷಿಕ ಮಹಾಸಭೆ

Suddi Udaya

ಭೂಸೇನೆಯಲ್ಲಿ 20ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಾರ್ಯ ಪಿಲಿಗೂಡು ನಿವಾಸಿ ಹವಾಲ್ದಾರ್ ಜಯಾನಂದ ಪೂಜಾರಿ ಮಾ.31 ರಂದು ಸೇವಾ ನಿವೃತ್ತಿ

Suddi Udaya

ದ.ಕ ಜಿಲ್ಲೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಆಯ್ಕೆ

Suddi Udaya

ಮುಂಡ್ರುಪ್ಪಾಡಿ ಸ. ಕಿ. ಪ್ರಾ. ಶಾಲೆಗೆ ಹರೀಶ್ ರಾವ್ ಮುಂಡ್ರುಪ್ಪಾಡಿಯವರಿಂದ 5 ಡೆಸ್ಕ್ ಕೊಡುಗೆ

Suddi Udaya

ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ಉಜಿರೆ ಎಸ್.ಡಿ.ಎಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ “ದೀಕ್ಷಾವಿಧಿ” ತರಗತಿ ಪ್ರಾರಂಭೋತ್ಸವ

Suddi Udaya
error: Content is protected !!