ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಝೇಂಕಾರ ಬೇಸಿಗೆ ಶಿಬಿರ ಉದ್ಘಾಟನೆ

ಬೆಳ್ತಂಗಡಿ : ಝೇಂಕಾರ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಸಹಭಾಗಿತ್ವದೊಂದಿಗೆ ಪಿಎಂ ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಇಲ್ಲಿ ನೇರವೇರಿತು.

ಜೇಸಿರೆಟ್ ಪೂರ್ವ ಅಧ್ಯಕ್ಷರಾದ ಶಿಕ್ಷಕಿ ಅನುರಾಧ ಸುಭಾಷ್ ಚಂದ್ರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರೇರಣಾತ್ಮಕ ಮಾತುಗಳ ಮೂಲಕ ಸ್ಪೂರ್ತಿ ತುಂಬಿದರು ನಮ್ಮಲ್ಲಿರುವ ಸಕಾರಾತ್ಮಕ ಚಿಂತನೆ ಪ್ರೀತಿ ಭಾಂದವ್ಯಗಳ ಮೂಲಕ ಸಮಾಜದಲ್ಲಿ ಒಳ್ಳೆಯ ವಾತಾವರಣವನ್ನು ನಿರ್ಮಿಸಬಹುದು ಎಂದು ಹೇಳಿದ ಅವರು ಬೇಸಿಗೆ ಶಿಬಿರದ ಯಶಸ್ಸಿಗೆ ಶುಭ ಹಾರೈಸಿದರು. ವೇದಿ ಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವೃತ್ತಿಯಲ್ಲಿ ಶಿಕ್ಷಕರು ಹಾಗೂ ಕಲಾವಿದರಾದ ತೇಜಸ್ವಿ ಅಂಬೆಕಲ್ಲು ಪೋಷಕರು ಬಾಲ್ಯದಲ್ಲಿಯೇ ಮಕ್ಕಳಿಗೆ ಸಕರಾತ್ಮಕ ಚಿಂತನೆ ತುಂಬಿದಾಗ ಅದು ಅವರ ಜೀವನದ ಯಶಸ್ವಿಗೆ ಬುನಾದಿ ಯಾಗುತ್ತದೆ ಎಂದು ಹೇಳಿದ ಅವರು ಜೆಸಿಐ ಘಟಕದ ಚಟುವಟಿಕೆಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ ಘಟಕಾಧ್ಯಕ್ಷ ಜಿತೇಶ್ ಕುಮಾರ್ ವಹಿಸಿದ್ದು ಪ್ರಾಸ್ತಾವಿಕ ಮಾತಿನೊಂದಿಗೆ ಸರ್ವರನ್ನು ಸ್ವಾಗತಿಸಿದರು. ಜೆಜೆಸಿ ಅಧ್ಯಕ್ಷ ತೇಜಸ್ ಉಪಸ್ಥಿತರಿದ್ದರು. ಜೇಸಿರೆಟ್ ಪೂರ್ವಾಧ್ಯಕ್ಷೆ ನಮಿತಾ ನಿರ್ಮಲ್ ಕುಮಾರ್ ರವರು ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು.

ನವ್ಯರವರು ಉದ್ಘಾಟಕರ ಪರಿಚಯ ಮಾಡಿದರು.ವೈಷ್ಣವಿ ಭಟ್ ರವರ ಜೆಸಿ ವಾಣಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಬಿರದ ಆಯೋಜಕರಾದ ಜೆಸಿ ಹೇಮಾವತಿ ಕೆ ಇವರು ಶಿಬಿರದ ರೂಪುರೇಷೆಯನ್ನು ವಿವರಿಸಿ ಧನ್ಯವಾದವಿತ್ತರು.

ಕಾರ್ಯಕ್ರಮದಲ್ಲಿ ಜೆಸಿ ಪೂರ್ವ ಅಧ್ಯಕ್ಷರಾದ ಸುಭಾಶ್ಚಂದ್ರ ಎಂ ಪಿ ಚಿದಾನಂದ ಇಡ್ಯಾ,ನಾರಾಯಣಶೆಟ್ಟಿ ಪೂರ್ವಾಧ್ಯಕ್ಷೆಯರಾದ ಪವಿತ್ರ ಚಿದಾನಂದ್, ದೀಪ ಕಿರಣ್ ಹಾಗೂ ಶಿಬಿರಾರ್ಥಿಗಳ ಪೋಷಕ ಬಂಧುಗಳು,ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Related posts

ಹೊಸಂಗಡಿ ಪಂಚಾಯತ್ ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆನಂದ ಕೊಡಂಗೇರಿ ನಾಮಪತ್ರ ಸಲ್ಲಿಕೆ

Suddi Udaya

ಮೇಲಂತಬೆಟ್ಟು: 13ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆ

Suddi Udaya

ಶಿಲ್ಪಾ ಆಚಾರ್ಯ ಮನೆಗೆ ಭೇಟಿ ನೀಡಿದ ಡಿವೈಎಫ್ಐ ನಿಯೋಗ

Suddi Udaya

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ನಾವೂರು ಗ್ರಾಮ ಪಂಚಾಯತ್ ನಲ್ಲಿ ಪ್ರತಿಭಟನೆ

Suddi Udaya

ಲಾಯಿಲ: ಕುಂಟಿನಿಯಲ್ಲಿ ಮರ್ಹೂಂ ಸಾಹುಲ್ ಹಮೀದ್ ಉಜಿರೆ ರವರಿಗೆ ಮನೆ ಹಸ್ತಾಂತರ

Suddi Udaya

ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಇದರ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya
error: Content is protected !!