September 6, 2026
ಚಿತ್ರ ವರದಿವರದಿಶಿಕ್ಷಣ ಸಂಸ್ಥೆ

ಆಳ್ವಾಸ್ ಪತ್ರಿಕೋದ್ಯಮ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ಡಿ ರಾಂಪುರ್

ಮೂಡುಬಿದಿರೆ: ಆಳ್ವಾಸ್ ಸ್ವಾಯತ್ತ ಕಾಲೇಜಿನ ದಶಮಾನ ಸಂಭ್ರಮದಲ್ಲಿರುವ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯಿತು. ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಿರಿಯ ವಿದ್ಯಾರ್ಥಿಗಳ ಸಂಘ  (APJAA)ವನ್ನು ರಚಿಸಲಾಗಿದ್ದು, ಟಿವಿ ಹಿರಿಯ ವರದಿಗಾರ ಪ್ರಕಾಶ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ನಾಡಿನ ಪ್ರಮುಖ ಪತ್ರಿಕೆ, ಟಿವಿ, ನವಮಾಧ್ಯಮ, ಶಿಕ್ಷಣ ಮತ್ತಿತರ ಸಂಸ್ಥೆಗಳಲ್ಲಿ ವೃತ್ತಿ ನಿರ್ವಹಿಸುತ್ತಿರುವ ಹಿರಿಯ ವಿದ್ಯಾರ್ಥಿಗಳು ಪದಾಧಿಕಾರಿಗಳಾದರು.
ಇದಕ್ಕೂ ಮೊದಲು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ‘ಯಾವುದೇ ಕ್ಷೇತ್ರದ ಬೆಳವಣಿಗೆಯ ದೃಷ್ಟಿಯಿಂದ ಹಿರಿಯ ಹಾಗೂ ಪ್ರಸ್ತುತ ವಿದ್ಯಾರ್ಥಿಗಳ ಸಂಪರ್ಕವು ಅತೀ ಅವಶ್ಯ’ ಎಂದು ಹೇಳಿದರು.

‘ಪ್ರಸ್ತುತ ಪತ್ರಿಕೋದ್ಯಮದ ಅವಶ್ಯಕತೆ ಸಮಾಜಕ್ಕೆ ಹೆಚ್ಚಿದೆ. ವೃತಿ ಸ್ವರೂಪ ಬದಲಾಗಿದ್ದು, ಸಮರ್ಥ ಅಭ್ಯರ್ಥಿಗಳಿಗೆ ಬೇಡಿಕೆ ಹೆಚ್ಚಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ವೃತ್ತಿ ನಿರತ ಹಿರಿಯ ವಿದ್ಯಾರ್ಥಿಗಳ ಪಾತ್ರವು ಪ್ರಮುಖವಾಗಿದೆ. ಹಿರಿಯ ಹಾಗೂ ಪ್ರಸ್ತುತ ವಿದ್ಯಾರ್ಥಿಗಳೇ ‘ಆಳ್ವಾಸ್ ಆಸ್ತಿ’. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳೇ ನಮ್ಮ ಹೆಮ್ಮೆ’ ಎಂದು ಸಂತಸ ಹಂಚಿಕೊಂಡರು.

ಸಮಾವೇಶ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, `ಮಾಧ್ಯಮ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳು ಬದಲಾಗಿವೆ. ಆದರೆ, ಇಂತಹ ಪರಿಸ್ಥಿತಿಯಲ್ಲೂ ನೈತಿಕ ಜಾಗೃತಿಯಿಂದ ಕಾರ್ಯನಿರ್ವಹಿಸುತ್ತಿರುವ ನಮ್ಮ ಹಿರಿಯ ವಿದ್ಯಾರ್ಥಿಗಳ ಆತ್ಮಬಲದ ಬುನಾದಿ `ಆಳ್ವಾಸ್’ ನಲ್ಲಿದೆ. ಇದರ ರೂವಾರಿ ಡಾ. ಎಂ. ಮೋಹನ ಆಳ್ವ ಎಂದರು. ಪ್ರಾಧ್ಯಾಪಕಿ ಡಾ. ಮೌಲ್ಯ ಬಿ ಶುಭ ಹಾರೈಸಿದರು.

ಹಿರಿಯ ವಿದ್ಯಾರ್ಥಿಗಳು ತಮ್ಮ ಹಳೆ ನೆನಪುಗಳ ಜೊತೆ ಈಗಿನ ವೃತ್ತಿ ಬದುಕಿನ ಸವಾಲುಗಳನ್ನು ಮೆಲುಕು ಹಾಕಿದರು. ವೃತ್ತಿ ಸವಾಲುಗಳನ್ನು ಎದುರಿಸಲು ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿನ ಕಲಿಕೆ ಹೇಗೆ ನೆರವಾಯಿತು ಎಂಬುದನ್ನು ಹಂಚಿಕೊAಡರು. ಬಳಿಕ ವಿವಿಧ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಹಾಗೂ ಪ್ರಾಧ್ಯಪಕರುಗಳಾದ ಡಾ. ಶ್ರೀನಿವಾಸ ಹೊಡೆಯಾಲ, ಹರ್ಷವರ್ಧನ ಪಿ. ಆರ್., ಸುಶ್ಮಿತಾ ಜೆ. ದೀಕ್ಷಿತಾ, ಅಕ್ಷಯ್ ಕುಮಾರ್, ಹನ್ನಾ ಫಾತಿಮಾ, ರಕ್ಷಾ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರೇರಣಾ ಕಾರ್ಯಕ್ರಮ ವನ್ನು ನಿರೂಪಿಸಿ, ಮಿಯಾ ಕೆನಡಿ ವಂದಿಸಿದರು.

ಪದಾಧಿಕಾರಿಗಳು: ಪ್ರಕಾಶ್ (ಅಧ್ಯಕ್ಷ ), ಅಕ್ಷಯ್ ಕುಮಾರ್ (ಕಾರ್ಯದರ್ಶಿ), ಶಿಧರ್, ಯೇಜಾಸ್, ಅಕ್ಷಯ್ ರೈ (ಉಪಾಧ್ಯಕ್ಷರು), ದೀಪ, ವೀರೇಶ್ (ಕೋಶಾಧಿಕಾರಿ) ಕೀರ್ತನ ಶೆಟ್ಟಿ (ಜಂಟಿ ಕಾರ್ಯದರ್ಶಿ), ರಕ್ಷಿತಾ, ಸಂಪ್ರೀಯ, ಸುಶ್ಮಿತಾ, ನಿಶಾನ್, ನರೇಂದ್ರ, ಅಶ್ವಿನಿ ಜೈನ, ರಮ್ಯಾ, ಜಾಫರ್, ಸುಮಲತಾ, ಪ್ರಮೋದ್, ಇಂಚರ, ಸಿಧಾರ್ಥ, ಇಂದೂಧರ್, ವೆನಿಷಾ, ಉಮರ್ ಫಾರೂಕ್, ಆನಂದ, ಮಾಧವಿ, ವೈಶಾಕ್, ಗೌತಮಿ, ವಿನೀತ್ (ಕಾರ್ಯಕಾರಿ ಸಮಿತಿ ಸದಸ್ಯರು), ಡಾ. ಮೌಲ್ಯ ಬಿ., ಪ್ರಸಾದ್ ಶೆಟ್ಟಿ (ಪ್ರಾಧ್ಯಾಪಕ ಸಂಚಾಲಕರು).

Related posts

ಮಚ್ಚಿನದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

Suddi Udaya

ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಆರಂಬೋಡಿ ಜಿ.ಪಂ.ಕಿ.ಪ್ರಾ. ಶಾಲೆಗೆ ಬಟ್ಟಲು ಮತ್ತು ಗ್ಯಾಸ್ ಸ್ಟವ್ ವಿತರಣೆ

Suddi Udaya

ಯಕ್ಷಭಾರತಿ ಕನ್ಯಾಡಿಯಿಂದ ಕೇಶವ ಎಂ. ರವರಿಗೆ ಚಿಕಿತ್ಸಾ ನೆರವು

Suddi Udaya

ಗುರುವಾಯನಕೆರೆ: ಶ್ರೀ ಲಕ್ಷ್ಮಿ ಫ್ಯಾನ್ಸಿಯಲ್ಲಿ ಚಪ್ಪಲ್ ಮೇಲೆ 10-50% ಡಿಸ್ಕೌಂಟ್ ಸೇಲ್

Suddi Udaya

ಕಾಪಿನಡ್ಕ: ಶಿವಗಿರಿ ಕೃಪಾದಲ್ಲಿ ಅಂಧರ ಗೀತಾ ಗಾಯನ ಕಾರ್ಯಕ್ರಮ

Suddi Udaya

ಕನ್ಯಾಡಿ-2 ಅಂಗನವಾಡಿ ಕೇಂದ್ರದಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!