23.5 C
ಪುತ್ತೂರು, ಬೆಳ್ತಂಗಡಿ
August 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸಲೆಂಟ್ ಸಂಸ್ಕೃತಿ ಸಂಭ್ರಮ-2026: ಪ್ರತಿಭೆಗೆ ವೇದಿಕೆ, ಸಂಸ್ಕಾರಕ್ಕೆ ಬೆಳಕು

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ “ಎಕ್ಸಲೆಂಟ್ ಸಂಸ್ಕೃತಿ ಸಂಭ್ರಮ-೨೦೨೬” ಪ್ರತಿಭೋತ್ಸವದ ಅಂಗವಾಗಿ ಆಯೋಜಿಸಲಾದ ಸಂಸ್ಕçತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಸಂಭ್ರಮ, ಸಾಂಸ್ಕೃತಿಕ ಮತ್ತು ಕಲಾ ವೈಭವದ ನಡುವೆ ಅದ್ದೂರಿಯಾಗಿ ನಡೆಯಿತು. ಖ್ಯಾತ ಯಕ್ಷಗಾನ ಕಲಾವಿದ ಹಾಗೂ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರು ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಹಾಗೂ ಸಾಂಸ್ಕçತಿಕ ತೇರನ್ನು ಎಳೆಯುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಪಟ್ಲ ಸತೀಶ್ ಶೆಟ್ಟಿ ಅವರು, “ಇಂತಹ ಸಾಂಸ್ಕçತಿಕ ವಾತವರಣದಲ್ಲಿ ಬೆಳೆದು ಬರುತ್ತಿರುವ ವಿದ್ಯಾರ್ಥಿಗಳೇ ನಿಜವಾಗಿಯೂ ಧನ್ಯರು. ಶಿಕ್ಷಣದೊಂದಿಗೆ ಸಾಂಸ್ಕçತಿಕ ಸಂಸ್ಕಾರ ಮತ್ತು ಉತ್ತಮ ಪರಿಸರವು ಅತ್ಯಂತ ಮುಖ್ಯ. ಶಾಲೆಯು ಕೇವಲ ಶಿಕ್ಷಣ ನೀಡುವ ಕೇಂದ್ರವಲ್ಲ; ಉತ್ತಮ ಸಂಸ್ಕಾರವನ್ನು ರೂಪಿಸುವ ಪವಿತ್ರ ಕ್ಷೇತ್ರವಾಗಿದೆ,” ಎಂದು ಹೇಳಿದರು.

“ಭಗವಂತನು ಕೊಟ್ಟರುವ ಈ ದೇಹವನ್ನು ಸಮಾಜದ. ವಿಶೇಷವಾಗಿ ಬಡವರ ಮತ್ತು ನೊಂದವರ ಒಳಿತಿಗಾಗಿ ಮೀಸಲಿಡಬೇಕು. ಜೀವನದಲ್ಲಿ ತಂದೆ, ತಾಯಿ ಮತ್ತು ಗುರುಗಳಿಗೆ ಸದಾ ಋಣಿಗಳಾಗಿರಬೇಕು. ಅವರ ಆರ್ಶೀವಾದವೇ ನಮ್ಮ ಬದುಕಿನ ನಿಜವಾದ ಸಂಪತ್ತು,” ಎಂದು ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳ ಕುರಿತು ಕಿವಿಮಾತು ಹೇಳಿದರು.

ನಂತರ “ಯಕ್ಷಗಾನಂ ವಿಶ್ವಗಾನಂ” ಎಂಬ ಘೋಷಣೆಯೊಂದಿಗೆ ತಮ್ಮ ಸುಮಧುರ ಕಂಠಸಿರಿಯ ಮೂಲಕ ಯಕ್ಷÀಗಾನದ ಗಾನಸುಧೆಯನ್ನು ಹರಿಸಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು. ಅವರ ಭಾವಪೂರ್ಣ ಗಾಯನಕ್ಕೆ ಸಭಾಂಗಣ ಕರತಾಡನದಿಂದ ಮೊಳಗಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಪಟ್ಲ ಸತೀಶ್ ಶೆಟ್ಟಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಯಕ್ಷಗಾನ ಕಲಾವಿದ ಮಹವೀರ ಪಾಂಡಿ ಅವರು ಮಾತನಾಡಿ, “ಅವಕಾಶವನ್ನು ಗುರುತಿಸಿ ಶ್ರಮದಿಂದ ಸದುಪಯೋಗಪಡಿಸಿಕೊಡವರಿಗೆ ದೇವರ ಆರ್ಶೀವಾದ ಸದಾ ಜೊತೆಯಾಗಿರುತ್ತದೆ,” ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, “ಯಕ್ಷಗಾನದ ಮೂಲಕ ಕರಾವಳಿಯ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ ಪಟ್ಲ ಸತೀಶ್ ಶೆಟ್ಟಿ ಯವರ ಸಾಧನೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ಪೂರ್ತಿದಾಯಕವಾಗಿದೆ. ಅವರನ್ನು ಆದರ್ಶವಾಗಿಟ್ಟುಕೊಂಡು ತಮ್ಮ ಪ್ರತಿಭೆಯನ್ನು ಬೆಳಸಿಕೊಂಡು ಸಾಧನೆಯ ಶಿಖರವನ್ನು ತಲುಪಬೇಕು, “ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ “ಯಕ್ಷಗಾನವನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿ ಕರಾವಳಿಯ ಕೀರ್ತಿಯನ್ನು ಪಸರಿಸುವಲ್ಲಿ ಪಟ್ಲ ಸತೀಶ್ ಶೆಟ್ಟಿಯವರ ಕೊಡುಗೆ ಅಪಾರವಾಗಿದೆ. ಕಲೆಗೆ ಸಮಾಜವನ್ನು ಜಾಗೃತಗೊಳೊಸುವ ಅದ್ಭುತ ಶಕ್ತಿಯಿದೆ. ನಾವು ನಮ್ಮೊಂದಿಗೆ ಇತರರನ್ನೂ ಬೆಳೆಸುವ ಮನೋಭಾವವನ್ನು ಹೊಂದಿದಾಗ ಸಮಾಜವೂ ಅಭಿವೃದ್ಧಿಯಾಗುತ್ತದೆ. ಭಗವಂತ ಪ್ರತಿಯೊಬ್ಬರಿಗೂ ಯೋಗ ಮತ್ತು ಯೋಗ್ಯತೆಯನ್ನು ನೀಡುತ್ತಾನೆ. ಅದನ್ನು ಸಾರ್ಥಕಗೊಳಿಸುವ ರೀತಿಯಲ್ಲಿ ಜೀವನವನ್ನು ರೂಪಿಸಿಕೊಳ್ಳಬೇಕು,” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್ ಜೈನ್, ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮೂಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್, ಸಿಬಿಎಸ್‌ಸಿ ಪ್ರಾಂಶುಪಾಲ ಶ್ರೀಪ್ರಸಾದ್, ಕೀಬೋರ್ಡ್ ಪರಿಣಿತ ಸದಾಶಿವ ಭಟ್ ಶಿವಗಿರಿ. ತಬಲಾ ಪರಿಣಿತ ಗೌರಿಪ್ರಸಾದ್ ಗುರುವಾಯನಕೆರೆ, ಭರತನಾಟ್ಯ ಕಲಾವಿದೆ ರಶ್ಮಿತಾ ಅರವಿಂದ್ ಕರಾಟೆ ತರಬೇತುದಾರ ಸರ್ಫರಾಜ್ ಎ.ಕೆ, ಚಿತ್ರಕಲೆ ಶಿಕ್ಷಕ ಭಾಸ್ಕರ ನೆಲ್ಯಾಡಿ, ಕೊಳಲು ವಾದಕ ಲೋಕೇಶ್ ಸಂಪಿಗೆ, ಚೆಂಡೆ ವಾದಕ ಚÀಂದ್ರಶೇಖರ ಆಚಾರ್, ಪಾಶ್ಚಾತ್ಯ ನೃತ್ಯ ತರಬೇತುದಾರ ರೂಪೇಶ್ ಕುಮಾರ್ ಹಾಗೂ ಕರಕುಶಲ ಕಲೆ ಶಿಕ್ಷಕಿ ಚೇತನಾ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ವಿವಿಧ ಸಾಂಸ್ಕçತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿ ಪ್ರತಿಭೆಯ ಅನಾವರಣ ಮಾಡುವ ಮೂಲಕ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದರು.

ಶಿಕ್ಷಕಿ ಹರ್ಷಿತಾ ಸ್ವಾಗತಿಸಿದರು. ಮೌಲ್ಯ ವೈ.ಆರ್. ಜೈನ್ ಪಟ್ಲ ಸತೀಶ್ ಶೆಟ್ಟಿಯವರ ವ್ಯಕ್ತಿ ಪರಿಚಯ ಮಾಡಿಕೊಟ್ಟರು. ವಿಜೇತ ಹಾಗೂ ಶರ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ವನಿತಾ ವಂದಿಸಿದರು.

Related posts

ಕಡಿರುದ್ಯಾವರ ಗ್ರಾ.ಪಂ. ಗ್ರಾಮ ಸಭೆ

Suddi Udaya

ಧರ್ಮಸ್ಥಳ ಮೇಳದ ತಿರುಗಾಟ ಪ್ರಾರಂಭ

Suddi Udaya

ಯಕ್ಷಧ್ರುವ ಪಟ್ಣ ಫೌಂಡೇಶನ್ ಬೆಳ್ತಂಗಡಿ ಘಟಕದ ನೇತೃತ್ವ ಡಿ.2: ಉಜಿರೆ ರಥಬೀದಿಯಲ್ಲಿ ” ಯಕ್ಷ ಸಂಭ್ರಮ-2023″

Suddi Udaya

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ಸಂಭ್ರಮದ ಮೊಂತಿ (ತೆನೆ ) ಹಬ್ಬ

Suddi Udaya

ದ.ಕ. ಸಹಕಾರಿ ಹಾಲು ಒಕ್ಕೂಟದಿಂದ ನಂದಿನಿ ಪ್ರಿಮಿಯಮ್ ಪ್ರೊಬಯಾಟಿಕ್ ಮೊಸರು ಬಿಡುಗಡೆ

Suddi Udaya

ಕನ್ಯಾಡಿ: ಕುರ್ಮಾಣಿಯ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!