September 17, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳರು: ನಾಲ್ಕು ಕಾಣಿಕೆ ಡಬ್ಬಿಗಳ ಕಳವು

ಬೆಳ್ತಂಗಡಿ: ಕನ್ಯಾಡಿ | ಗ್ರಾಮದ ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಎದುರಿನ ಬೀಗವನ್ನು ಮುರಿದು ಕಳ್ಳರು ದೇವರ ನಾಲ್ಕು ಕಾಣಿಕೆ ಡಬ್ಬಿಗಳನ್ನು ಕಳವುಗೈದ ಘಟನೆ ಎ.೨೨ರಂದು ವರದಿಯಾಗಿದೆ.

ಎ.21ರಂದು ರಾತ್ರಿ ಸುಮಾರು ೨ ಗಂಟೆಯ ವೇಳೆಗೆ ದೇವಸ್ಥಾನದ ಎದುರಿನ ಬಾಗಿಲ ಬೀಗವನ್ನು ಯಾವುದೇ ಆಯುಧರಿಂದ ಮೀಟಿ ಮುರಿದು ಒಳನುಗ್ಗಿದ ಕಳ್ಳರು ದೇವಸ್ಥಾನದ ಒಳಗೆ ಇದ್ದ ಒಂದು ದೊಡ್ಡ ಕಾಣಿಕೆ ಡಬ್ಬಿ ಹಾಗೂ ಮೂರು ಸಣ್ಣ ಕಾಣಿಕೆ ಡಬ್ಬಿಯನ್ನು ಕಳವುಗೈದು ಪರಾರಿಯಾಗಿದ್ದಾರೆ. ಕಳ್ಳರು ದೇವಸ್ಥಾನ ಬೀಗ ಮುರಿದು ಒಳನುಗ್ಗಿ ಕಾಣಿಕೆ ಡಬ್ಬಿ ಕಳವು ಗೈದಿರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಕಳವಾದ ನಾಲ್ಕು ಕಾಣಿಕೆ ಡಬ್ಬಿಯಲ್ಲಿ ಭಕ್ತರು ಕಾಣಿಕೆ ಹಾಕಿದ ರೂ.೩೦ ಸಾವಿರದಷ್ಟು ಹಣ ಇತ್ತೆಂದು ಅಂದಾಜಿಸಲಾಗಿದೆ. ನಿಡಿಗಲ್ ಶ್ರೀ ಲೋಕನಥೇಶ್ವರ ದೇವಸ್ಥಾನದ ಸಿರಿ ಜಾತ್ರೋತ್ಸವ ಇತ್ತಿಚೇಗೆ ಆದ್ದೂರಿಯಾಗಿ ಜರುಗಿತ್ತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಹಾಗೂ ಸಮಿತಿ ಸದಸ್ಯರು, ಊರವರು ದೇವಸ್ಥಾನಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

Related posts

ಕೊಕ್ಕಡ: ಕಾಡಾನೆಗಳ ಹಾವಳಿ : ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಬೀದಿ ಬದಿಯ ಅಂಗಡಿಗಳ ತೆರವು ಕಾರ್ಯ

Suddi Udaya

ಬೆದ್ರಬೆಟ್ಟು ಮರಿಯಾoಬಿಕ ಆಂ.ಮಾ. ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಸ್ಪಾರ್ಕ್ -2024

Suddi Udaya

ಕೊಕ್ಕಡ: ಸೌತಡ್ಕದಲ್ಲಿ ಬೆಳ್ಳಂಬೆಳ್ಳಗೆ ಎರಡು ಕಾಡಾನೆಗಳು ಪ್ರತ್ಯಕ್ಷ: ನಡೆದು ಕೊಂಡು ಹೋಗುವ ಸಂದರ್ಭದಲ್ಲಿ ಆನೆ ತಿವಿದು; ಬಾಲಕೃಷ್ಣ ಶೆಟ್ಟಿ ಸ್ಥಳದಲ್ಲೇ ಸಾವು

Suddi Udaya

ಉಜಿರೆ: ಹೆದ್ದಾರಿ ಬದಿ ಕೊಳಚೆ ನೀರು ಸಂಗ್ರಹ: ಸಾಂಕ್ರಾಮಿಕ ರೋಗದ ಭೀತಿ

Suddi Udaya

ಉಜಿರೆ: ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಹಲವು ಸ್ಪರ್ಧೆಗಳಲ್ಲಿ ಎಸ್.ಡಿ.ಎಮ್ ಅನುದಾನಿತ ಸೆಕೆಂಡರಿ ಶಾಲೆಗೆ ಪ್ರಶಸ್ತಿ

Suddi Udaya

ಮುಗೇರಡ್ಕ ಶಿರಾಡಿ ದೈವದ ಹುಲಿಬಂಡಿಯ ಮತ್ತು ಪಲ್ಲಕ್ಕಿಯ ಪುರಪ್ರವೇಶ: ಪೆರ್ಲ -ಬೈಪಾಡಿಯಿಂದ ಮುಗೇರಡ್ಕದವರೆಗೆ ವಾಹನ ಜಾಥಾ

Suddi Udaya
error: Content is protected !!