September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿಕ್ಷಣ ಸಂಸ್ಥೆ

ಜೆಇಇ ಫಲಿತಾಂಶ: ಎಕ್ಸೆಲ್ ಕಾಲೇಜಿಗೆ ಅಖಿಲ ಭಾರತ ರ‍್ಯಾಂಕ್ 57

ಬೆಳ್ತಂಗಡಿ: ಜೆಇಇ (JEE) ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಮತ್ತು ಸ್ಪರ್ಧಾತ್ಮಕ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ 10-12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುವ ಈ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆಗೈದ ವಿದ್ಯಾರ್ಥಿಗಳು ಮಾತ್ರ ಐಐಟಿ (IIT), ಎನ್‌ಐಟಿ (NIT) ಗಳಲ್ಲಿ ಸೀಟು ಪಡೆದುಕೊಳ್ಳಲು ಸಫಲರಾಗುತ್ತಾರೆ.

ಜೆಇಇ ಮೈನ್‌ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಅಗ್ರಗಣ್ಯ ಸಾಧನೆ ಮಾಡಿದ್ದಾರೆ.

ಅಗ್ರಸ್ಥಾನಿಯಾಗಿ ಹೊರಹೊಮ್ಮಿದ ಎಕ್ಸೆಲ್‌ ಕಾಲೇಜಿನ ವಿದ್ಯಾರ್ಥಿ ವಿನಯ ಕಿಡಿಯಪ್ಪ ಜೆಇಇ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 57 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಸಮ್ಯಕ್‌ ವಿನಯ್‌ 375 ರ‍್ಯಾಂಕ್ (99.10percentile) ಪಡೆದರೆ, ರೋಹಿತ್‌ ಆರ್‌ ಎಲ್‌ 279ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ಮೌರ್ಯ ವೈ ಡಿ – 99.66, ಸ್ವಸ್ಥಿಕ್‌ ಎಂ ಜೈನ್‌ 99.51, ಅಕ್ಷಯ್‌ ಎ 99.31, ಶಶಾಂಕ್ ಗೌಡ -98.92, ಅಭಿನವ್ ಕೆ ಮಯ್ಯ – 98.64, ತೇಜಲ್ ವಿ ವಾಂಟಕರ್ – 98.55, ಶಮಿತ್ ಗೌಡ ಎ ಎಸ್ – 98.41, ಗಗನ್ ದೀಪ್ – 98.37, ಕೆ.ಕೆ ಸಾರ್ವಿಕ – 98.3, ಯಶಸ್ ಗೌಡ ಎನ್ – 98.16, ಯಶಸ್ ಜಿ ಎಸ್ – 98.11, ಹರ್ಷಿತ್ ಪಿ ಗೌಡ- 97.76, ಉಲ್ಲಾಸ್ ಎಂ ವಿ – 97.61, ಶಿಲ್ಪಿತಾ ಹೆಚ್ ಎಸ್ – 97.89, ಆನಂದ್ ರೆಡ್ಡಿ ಬಿ.ಸಿ – 97.59, ಹರ್ಷಿತಾ ಎಸ್ – 97.36, ಲೋಕೇಶ್ ಶೆಟ್ಟಿ – 97.14 ಪರ್ಸಂಟೈಲ್ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ.

ಇವರ ಈ ಸಾಧನೆಗೆ ಎಕ್ಸೆಲ್‌ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್‌ ಕುಮಾರ್‌ ಜೈನ್‌ ಅಭಿನಂದನೆ ಸಲ್ಲಿಸಿದ್ದಾರೆ. ಕಾಲೇಜಿನಲ್ಲಿ ಮೇ 5 ರಿಂದ ಕಾಲೇಜಿನಲ್ಲಿ ಲಾಂಗ್‌ ಟರ್ಮ್‌ ನೀಟ್‌ ಪ್ರೋಗ್ರಾಮ್‌ ಕೋರ್ಸ್‌ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಬಂಟರ ಸಂಘದ ವಲಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬಂದಾರು: ಮೈರೋಳ್ತಡ್ಕ ಶಿವ ಗೆಳಯರ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಡಾ| ಡಿ.ವೀರೇಂದ್ರ ಹೆಗ್ಗಡೆಯವರಿಗೆ ಕೊಕ್ಕಡ ನಗರ ಭಜನಾ ಸಪ್ತಾಹದ ಅಂಗವಾಗಿ ಪಿಲಿ ನಲಿಕೆ -2025 ರ ಆಮಂತ್ರಣ ಪತ್ರಿಕೆ ನೀಡಿ, ಆಹ್ವಾನ

Suddi Udaya

ಗಂಡಿಬಾಗಿಲು: ಸಿಯೋನ್ ಆಶ್ರಮದಲ್ಲಿ ಓಣಂ ಹಬ್ಬ ಆಚರಣೆ

Suddi Udaya

ಸುರತ್ಕಲ್: ಶ್ರೀನಿವಾಸ ಆಸ್ಪತ್ರೆಯಲ್ಲಿ ಪತ್ರಕರ್ತರಿಗೆ ಹಾಗೂ ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ

Suddi Udaya

ಮಾ14-15 ಎಸ್.ಡಿ.ಎಂ ಝೇಂಕಾರ ಉತ್ಸವ: ಖ್ಯಾತ ನಟ ರಮೇಶ್ ಅರವಿಂದ್ ವಿಶೇಷ ಆಕರ್ಷಣೆ

Suddi Udaya
error: Content is protected !!