July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಏ.24-26: ಕುಂಡದಬೆಟ್ಟು ಮಖಾಂ ಶರೀಫ್ ಉರೂಸ್

ಬೆಳ್ತಂಗಡಿ: ಕುಂಡದಬಿಟ್ಟು ಮುಹಿಯುದ್ದೀನ್ ಜುಮ್ಮಾ ಮಸ್ಟಿದ್ ನಿಟ್ಟಡೆ, ಕುಂಡದಬೆಟ್ಟು ದರ್ಗಾ ವಠಾರದಲ್ಲಿ ಮರ್‌ಹೂಮ್ ಇಬ್ರಾಹಿಂ ಉಸ್ತಾದ್ ಇವರ ಹೆಸರಿನಲ್ಲಿ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ಕುಂಡದಬೆಟ್ಟು ಮಖಾಂ ಊರೂಸ್ ಎ.24 ರಿಂದ 26ರ ವರೆಗೆ ನಡೆಯಲಿದೆ ಎಂದು ಕುಂಡದಬೆಟ್ಟು ಎಂಜೆಎA ಖತೀಬ್ ಮುಹಮ್ಮದ್ ಹನೀಫ್ ಸಖಾಫಿ ಹೇಳಿದರು.
ಅವರು ಎ.22ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಎ.24ರಂದು ರಾತ್ರಿ ಉರೂಸ್ ಸಮಿತಿ ಅಧ್ಯಕ್ಷ ಅಬುಸಾಲಿ ಜಿ. ಧ್ವಜಾರೋಹಣ ಮಾಡಲಿದ್ದಾರೆ. ಕಾವಳಕಟ್ಟೆ ಡಾ. ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ದುಆ ಆಶೀರ್ವಚನ ಮಾಡುವರು. ಕೇರಳದ ಖಾಸಿಂ ಕಾಮಿಲ್ ಸಖಾಫಿ ಸಂಗಡಿಗರಿAದ ಗ್ರ‍್ಯಾಂಡ್ ಇಶಲ್ ನೈಟ್ ನಡೆಯಲಿದೆ.

ಎ.25ರಂದು ಕರ್ನಾಟಕ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಎನ್.ಕೆ.ಎಂ. ಶಾಫಿ ಸಅದಿ ಉದ್ಘಾಟನೆ ಮಾಡುವರು. ಕಾಸರಗೋಡು ಊಜಂಪಾಡಿ ಖತೀಬ್ ಪಿ.ಎಸ್. ಮುಹಮ್ಮದ್ ಹಾಶಿರ್ ಸಖಾಫಿ ಆಲ್ ಸುರೈಜಿ ಪ್ರಧಾನ ಭಾಷಣ ಮಾಡಲಿದ್ದಾರೆ.

ಎ.26ರಂದು ಸಂಜೆ ಸೌಹಾರ್ದ ಸ್ನೇಹ ಸಂಗಮ ನಡೆಯಲಿದೆ. ಅಧ್ಯಕ್ಷತೆಯನ್ನು ಕುಂಡದಬೆಟ್ಟು ಎಂಜೆಎA ಅಧ್ಯಕ್ಷ ಮುತ್ತಲಿಬ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.

ರಾತ್ರಿ ಉರೂಸ್ ಸಮಾರೋಪದಲ್ಲಿ ತೃಶೂರಿನ ಮುಳ್ಳೂರುಕೆರೆ ಮುಹಮ್ಮದಲಿ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಅಬುಸಾಲಿ ಜಿ., ಕುಂಡದಬೆಟ್ಟು ಎಂಜೆಎಂ ಅಧ್ಯಕ್ಷ ಮುತ್ತಲಿಬ್, ಕುಂಡದಬೆಟ್ಟು ಮದರಸದ ಸಹ ಅಧ್ಯಾಪಕ ಬಿ. ಹೆಚ್. ಹಾರಿಸ್ ಸಖಾಫಿ ಉಪಸ್ಥಿತರಿದ್ದರು.

Related posts

ಉಜಿರೆಯ ಎಸ್. ಡಿ. ಎಂ. ಡಿ. ಎಡ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಮತ್ತು ವಿಷಯವಾರು ಸಂಘಗಳ ಉದ್ಘಾಟನಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಬೆಳ್ಳಿಹಬ್ಬ ಸಂಭ್ರಮ: ರಜತ ಸಂಚಿಕೆ ಲೋಕಾರ್ಪಣೆ – ಸಾಧಕರಿಗೆ ಸನ್ಮಾನ

Suddi Udaya

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಸ್ಪತ್ರೆ ಮೇಲ್ದರ್ಜೆಗಾಗಿ ಧಾರ್ಮಿಕ ಆಯುಕ್ತರಿಗೆ ಮನವಿ

Suddi Udaya

ಭೀಕರ ರಸ್ತೆ ಅಪಘಾತ: ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತ್ಯು

Suddi Udaya

ತುಳು ಹಾಗೂ ಜವಾರಿ ಭಾಷೆಯಲ್ಲಿ ಹಾಲಿವುಡ್‌ ಸಿನಿಮಾಗಳ ವೈಭವ:ಕನ್ನಡಿಗರ ‘ಟಾಕೀಸ್’ ಆ್ಯಪ್ ಓಟಿಟಿಯಿಂದ ಹೊಸ ಇತಿಹಾಸ

Suddi Udaya

ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟ ಬಳಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!