September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರಾಷ್ಟ್ರೀಯ ಸಾಂಸ್ಕ ತಿಕ ಪ್ರತಿಭಾಶೋಧ ವಿದ್ಯಾರ್ಥಿ ವೇತನಕ್ಕೆ ಶಿರ್ಲಾಲುವಿನ ಸಾನ್ವಿ ಸಾಲಿಯಾನ್ ಆಯ್ಕೆ

ಬೆಳ್ತಂಗಡಿ: ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದಡಿ ಬರುವ ಸಾಂಸ್ಕೃತಿಕ ಸಂಪನ್ಮೂಲಗಳು ಮತ್ತು ತರಬೇತಿ ಕೇಂದ್ರ (ಸಿಸಿಆರ್‌ಟಿ) ನೀಡುವ ೨೦೨೫-೨೬ನೇ ಸಾಲಿನ ರಾಷ್ಟ್ರಮಟ್ಟದ ಸಾಂಸ್ಕೃತಿಕ ಪ್ರತಿಭಾ ಶೋಧ ವಿದ್ಯಾರ್ಥಿವೇತನ (ಸಿಟಿಎಸ್‌ಎಸ್)ಕ್ಕೆ ಬೆಳ್ತಂಗಡಿ ಅಂಡಿಂಜೆ ನಿವಾಸಿ, ಶಿವಮೊಗ್ಗದ ಗೀತ ನೃತ್ಯ ಕಲಾ ಕುಟೀರದ ವಿದ್ಯಾರ್ಥಿನಿ ಸಾನ್ವಿ ಸಾಲಿಯಾನ್ ಆಯ್ಕೆಯಾಗಿದ್ದಾರೆ.

ಈ ವರ್ಷ ಆಯ್ಕೆಯಾದ 634 ವಿದ್ಯಾರ್ಥಿಗಳಲ್ಲಿ ಸಾನ್ವಿ ಸಾಲಿಯಾನ್ ಒಬ್ಬಳಾಗಿದ್ದು, ಭರತನಾಟ್ಯದಲ್ಲಿ ವಿಶೇಷ ತರಬೇತಿಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಶಿವಮೊಗ್ಗದ ಪೊದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ಇವರು ಪ್ರಸ್ತುತ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾಗಿರುವ ಅಂಡಿಂಜೆ ‘ವನಸಿರಿ’ಯ ಡಾ. ಸತೀಶ್ ಕುಮಾರ್ ಅಂಡಿಂಜೆ ಮತ್ತು ವಿನಯಾ ದಂಪತಿ ಪುತ್ರಿ.

Related posts

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆಗಳ ಪರಿಹಾರಕ್ಕೆ ಆರೋಗ್ಯ ಸಚಿವರಿಗೆ ಎಸ್‌ಡಿಪಿಐ ಮನವಿ

Suddi Udaya

ಶ್ರೀ ಧ.ಮಂ.ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಪುಟ್ ಬಾಲ್ ಪಂದ್ಯಾಟದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ರಾಮಚಂದ್ರ ಕಾಮತ್ ನಿಧನ

Suddi Udaya

ಪ.ರಾ.ಶಾಸ್ತ್ರಿ ಅಭಿನಂದನೆ: ಆಹ್ವಾನ ಪತ್ರಿಕೆ ಅನಾವರಣ

Suddi Udaya

ಧರ್ಮಸ್ಥಳದಲ್ಲಿ ಗೀತ ನೃತ್ಯಾಲಯ ವಾರ್ಷಿಕೋತ್ಸವ

Suddi Udaya

ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ರವರ ನೂತನ ಕಚೇರಿ ಉದ್ಘಾಟನೆ

Suddi Udaya
error: Content is protected !!