30.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹೊಸಂಗಡಿ: ಸೂರ್ಯನಾರಾಯಣ ದೇವಸ್ಥಾನದ ಬಳಿಯ ಫಲ್ಗುಣಿ ನದಿಯ ಬಲದಂಡೆ ಸಂರಕ್ಷಣಾ ಕಾಮಗಾರಿಗೆ ರೂ.50 ಲಕ್ಷ ಅನುದಾನ– ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಹೊಸಂಗಡಿ ಗ್ರಾಮದ ಅಂಗಾರಕರಿಯ ಸೂರ್ಯನಾರಾಯಣ ದೇವಸ್ಥಾನದ ಸಮೀಪ ಫಲ್ಗುಣಿ ನದಿಯ ಬಲದಂಡೆ ಸಂರಕ್ಷಣಾ ರಚನೆ ಕಾಮಗಾರಿಗೆ ರಾಜ್ಯ ಸರ್ಕಾರವು ರೂ.50 ಲಕ್ಷ ಅನುದಾನವನ್ನು ಮಂಜೂರು ಮಾಡಿದೆ ಎಂದು ಶಾಸಕ ಹರೀಶ್ ಪೂಂಜರವರು ತಿಳಿಸಿದ್ದಾರೆ.

ನದಿ ತೀರದ ಭೂಕ್ಷಯ ತಡೆಗಟ್ಟುವುದು ಹಾಗೂ ಸುತ್ತಮುತ್ತಲಿನ ಕೃಷಿ ಭೂಮಿಗಳು ಮತ್ತು ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಉದ್ದೇಶದಿಂದ ಈ ಕಾಮಗಾರಿಯ ಅಗತ್ಯತೆ ಬಗ್ಗೆ ಮಾನ್ಯ ಸಣ್ಣ ನೀರಾವರಿ ಸಚಿವರ ಗಮನಕ್ಕೆ ತಂದು ಮನವರಿಕೆ ಮಾಡಲಾಗಿದ್ದು, ಅದರ ಫಲವಾಗಿ ಅನುದಾನ ಮಂಜೂರಾಗಿದೆ.

ಈ ಕಾಮಗಾರಿಯಿಂದ ನದಿ ತೀರದ ಪ್ರದೇಶಗಳಲ್ಲಿ ಭೂಸರಣಿ ಸಮಸ್ಯೆ ನಿಯಂತ್ರಣಕ್ಕೆ ಬಂದು, ಸ್ಥಳೀಯ ನಿವಾಸಿಗಳು ಹಾಗೂ ರೈತಾಪಿ ವರ್ಗಕ್ಕೆ ಬಹಳ ಪ್ರಯೋಜನವಾಗಲಿದೆ. ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಿದ ರಾಜ್ಯ ಸರ್ಕಾರಕ್ಕೆ ಹಾಗೂ ವಿಶೇಷ ಸಹಕಾರ ನೀಡಿದ ಮಾನ್ಯ ಸಣ್ಣ ನೀರಾವರಿ ಸಚಿವರಿಗೆ ಶಾಸಕ ಹರೀಶ್ ಪೂಂಜ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Related posts

ಸೆ.11: ಬೆಳ್ತಂಗಡಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಡಿ.17: ನಾರಾವಿ ಎನ್ ಎಸ್ ಎಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

Suddi Udaya

ಪಡ್ಡಂದಡ್ಕ: ಶ್ರೀ ವೆಂಕಟೇಶ್ವರ ಪ್ಯೂಲ್ ಸರ್ವಿಸ್ ಶುಭಾರಂಭ

Suddi Udaya

ಎ.22-ಮೇ.20: ಮುಳಿಯ ಮಳಿಗೆಗಳಲ್ಲಿ ‘ಮುಳಿಯ ಚಿನ್ನೋತ್ಸವ ಸಂಭ್ರಮ’ ಗ್ರಾಹಕರ ನೆಚ್ಚಿನ ಚಿನ್ನಾಭರಣಗಳನ್ನು ಆಕರ್ಷಕ ಬೆಲೆಗೆ ಖರೀದಿಸಲು ಸುವರ್ಣವಕಾಶ

Suddi Udaya

ಹುಣ್ಸೆಕಟ್ಟೆ ಪಲ್ಕೆ ನಿವಾಸಿ ನಾರಾಯಣ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಉಜಿರೆ ಅನುಗ್ರಹದಲ್ಲಿ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಸಮಾರಂಭ

Suddi Udaya
error: Content is protected !!