September 17, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್ಸೆಸ್ಸೆಲ್ಸಿ ಫಲಿತಾಂಶ: ಕನ್ನಡ ಮಾಧ್ಯಮ ಶಾಲೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮಹಮ್ಮದ್ ಶಹಝಾದ್ ಗೆ ಅಭಿನಂದನೆ

ಬೆಳ್ತಂಗಡಿ; ಗುರುವಾಯನಕೆರೆ ಪ್ರೌಢ ಶಾಲೆಯ ವಿದ್ಯಾರ್ಥಿ ಪಿಲಿಚಂಡಿಕಲ್ಲು ಸರಕಾರಿ ಶಾಲಾ ಎಸ್‌.ಡಿ.ಎಂ.ಸಿ ಮಾಜಿ ಅಧ್ಯಕ್ಷ ಅಬ್ದುಲ್ ಹಕೀಂ ಶಾಫಿ ಮತ್ತು ಝೀನತ್ ದಂಪತಿ ಪುತ್ರ. ಮಹಮ್ಮದ್ ಶಹಝಾದ್ 625 ರಲ್ಲಿ 616 ಅಂಕಗಳನ್ನು ಪಡೆಯುವ ಮೂಲಕ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದ. ವಿದ್ಯಾರ್ಥಿಯ ಮನೆಗೆ ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಬಿ.ಕೆ ಆಲಿಹಬ್ಬ, ರಿಯಾಜ್ ಎಸ್ ಕೆ., ಉದ್ಯಮಿಗಳಾದ ಶಂಸುದ್ದೀನ್ ಐಜಿ ಸೌದಿ ಅರೇಬಿಯಾ, ಪ್ರಮುಖರಾದ ಹೈದರ್ ಸುನ್ನತ್ಗೆರೆ, ಅಬ್ಬಾಸ್, ಅಬ್ದುಲ್ ರೆಹಮಾನ್, ಅಬ್ಬಾಸ್ ಬೆಳ್ತಂಗಡಿ, ಹನೀಫ್ ಸಿಎಂ, ಯುನಸ್ ಆಲಿ, ಅಶ್ರಫ್ ಎಸ್ ಕೆ ಗುರುವಾಯನಕೆರೆ ಉಪಸ್ಥಿತರಿದ್ದರು.

Related posts

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಶಾಸಕ ಹರೀಶ್ ಪೂಂಜರವರಿಂದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿರವರ ಭೇಟಿ

Suddi Udaya

ಕುಂಟಾಲಪಳಿಕೆ ಶಾಲೆಯಲ್ಲಿ ತುಂಬೆತ್ತಡ್ಕ ರಾಣೆಯಾರ್ ಸಮಾಜ ಸೇವಾ ಸಂಘದಿಂದ ಶ್ರಮದಾನ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ನಿಡ್ಲೆ: 24 ನೇ ವರ್ಷದ ಕರುಂಬಿತ್ತಿಲು ಸಂಗೀತ ಶಿಬಿರ ಸಮಾರೋಪ

Suddi Udaya
error: Content is protected !!