September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾಭಿವೃದ್ಧಿ ತರಬೇತಿ ಸಮಾರೋಪ

ಉಜಿರೆ : ಉದ್ಯಮದಲ್ಲಿ ಯಶಸ್ಸು ಸಾಧಿಸಲು ನಿಷ್ಠೆ, ಪರಿಶ್ರಮ ಮತ್ತು ಧೈರ್ಯ ಅತ್ಯಂತ ಅಗತ್ಯವೆಂದು ತಿಳಿಸಿದರು. ಡಾ|| ಡಿ ವೀರೇಂದ್ರ ಹೆಗ್ಗಡೆಯವರು ದೂರದರ್ಶಿತ್ವದ ಈ ಸಂಸ್ಥೆಯಲ್ಲಿ ತರಬೇತಿ ಪಡೆದವರು ಸ್ವಉದ್ಯೋಗದತ್ತ ಮುಂದಾಗಿ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಬೇಕು ಜೊತೆಗೆ ಒಂದಷ್ಟು ಜನರಿಗೆ ಉದ್ಯೋಗ ಒದಗಿಸಿ, ಗುಣಮಟ್ಟದ ವ್ಯವಹಾರ ನಡೆಸಿ ಎಂದು ಬೆಳ್ತಂಗಡಿಯ ಉದ್ಯಮಿ, ವಿನಾಯಕ ರೈಸ್ ಮಿಲ್ ಮಾಲಕ ಶ್ರೀಕಾಂತ್ ಕಾಮತ್ ಅಭಿಪ್ರಾಯ ಪಟ್ಟರು

ಅವರು ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ ವತಿಯಿಂದ ಪ್ರಧಾನಮಂತ್ರಿ ಉದ್ಯೋಗ ಸೃಜನಶೀಲ ಕಾರ್ಯಕ್ರಮ (ಪಿ.ಎಂ.ಇ.ಜಿ.ಪಿ) ಅಡಿಯಲ್ಲಿ ಹಮ್ಮಿಕೊಂಡ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭವು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ , ಶುಭ ಹಾರೈಸಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯಕುಮಾರ್, ಮಾತನಾಡಿ, ತರಬೇತಿಯ ಮೂಲಕ ಪಡೆದ ಕೌಶಲ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿ ಉದ್ಯಮದಲ್ಲಿ ಬೆಳೆಯಬೇಕು ಎಂದು ಪ್ರೇರೇಪಿಸಿದರು.

ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು, ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ನಿರೂಪಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಕರುಣಾಕರ್ ಕೆ ಜೈನ್ ವಂದಿಸಿದರು. ಶ್ರೀಮತಿ ನದಿಯ ಮತ್ತು ಬಳಗದವರು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮಹಮ್ಮದ್ ಕುಂಞ್ಜ, ಅಮಿತಾ ಲೋಬೋ, ರಾಜೇಶ್ ರೈ ತರಬೇತಿ ಅನುಭವ ಹಂಚಿಕೊಂಡರು.

Related posts

ಕುಣಿತ ಭಜನಾ ತರಬೇತಿ ಶಿಬಿರಕ್ಕೆ ಭಜನಾ ಪರಿಷತ್ ರಾಜ್ಯಾಧ್ಯಕ್ಷರ ಭೇಟಿ

Suddi Udaya

ಮುಂಡಾಜೆ: ಕೀರ್ತನಾ ಕಲಾತಂಡದ ಮಹಾಸಭೆ: ಅಧ್ಯಕ್ಷರಾಗಿ ಸದಾನಂದ ಬಿ., ಕಾರ್ಯದರ್ಶಿಯಾಗಿ ಉಮೇಶ್ ಆಚಾರ್ಯ ಆಯ್ಕೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಓಣಂ ಆಚರಣೆ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಕೆಎಂಜೆ ಉಜಿರೆ ಸರ್ಕಲ್ ಸಮಿತಿ ರಚನೆ

Suddi Udaya

ಬೆಳ್ತಂಗಡಿ: ತಾಲೂಕು ಆಡಳಿತ ಸೌಧದಲ್ಲಿ ಕುವೆಂಪುರವರ ಜನ್ಮದಿನಾಚರಣೆಯ ಪ್ರಯುಕ್ತ ವಿಶ್ವ ಮಾನವ ದಿನಾಚರಣೆ

Suddi Udaya
error: Content is protected !!