26.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆಬೆಳ್ತಂಗಡಿವರದಿ

ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದಿಂದ ಮಹಿಳಾ ಮೀಸಲಾತಿ ಮಸೂದೆಯನ್ನು ತಡೆದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ನಾರಿಶಕ್ತಿ ಮಸೂದೆಯನ್ನು ಹಿಂಪಡೆಯುವ ಮೂಲಕ ಮಹಿಳೆಯರು ಸಬಲೀಕರಣ, ಸದೃಢರಾಗಬಾರದು ಎಂದು ಎಲ್ಲಾ ವಿರೋಧ ಪಕ್ಷಗಳು ತೋರಿಸಿದೆ. ಮಹಿಳೆಯರ
ಸೋಲು ಕಾಂಗ್ರೆಸ್ ಪಕ್ಷದ ಗೆಲುವು ಎಂಬುವುದನ್ನು ಅವರು ಸಂಭ್ರಮಿಸುವ ಮೂಲಕ ತೋರಿಸಿ ಕೊಟ್ಟಿದ್ದಾರೆ. ಇದು ಅವರಿಗೆ ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಹೊಡೆತವನ್ನು ನೀಡುತ್ತದೆ ಎಂದು ಮಹಿಳಾ ಜಿಲ್ಲಾ ಮೋರ್ಚಾದ ಅಧ್ಯಕ್ಷೆ ಡಾ. ಮಂಜುಳಾ ರಾವ್ ಆಕ್ರೋಶ ವ್ಯಕ್ತಪಡಿಸಿದರು.

ಅವರು ಏ.೨೭ರಂದು ಬೆಳ್ತಂಗಡಿ ಪೇಟೆಯಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಮಹಿಳಾ ಮೀಸಲಾತಿಯನ್ನು ಮಸೂದೆಯನ್ನು ಜಾರಿಯಾಗದಂತೆ ತಡೆದ ಕಾಂಗ್ರೆಸ್ ಸರಕಾರದ ವಿರುದ್ಧ ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದರು.

ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇವೆ ಎಂದು ವೇದಿಕೆಗಳಲ್ಲಿ ಮಾತನಾಡುತ್ತಾರೆ. ಆದರೆ ಕಾರ್ಯರೂಪಕ್ಕೆ ತರುವಾಗ ಸಹಿಸುವುದಕ್ಕೆ ಸಾಧ್ಯವಿಲ್ಲ. ನಮ್ಮದು ಎಂದು ಬಿಂಬಿಸಿಕೊAಡ ಪಕ್ಷವನ್ನು ಗಟ್ಟಿಗೊಳಿಸುವುದಕ್ಕೆ ಇರುವಂತಹ ಒಂದಷ್ಟು ಮಹಿಳೆಯರನ್ನು ಹೊರತು ಪಡಿಸಿ, ಇನ್ನುಳಿದಂತಹ ಸಾಮಾನ್ಯ ಕಾರ್ಯಕರ್ತ ಮಹಿಳೆಯರನ್ನು ಆಡಳಿತಾತ್ಮಕವಾಗಿ ನೋಡುವುದಕ್ಕೆ ಇಚ್ಛೆ ಪಡುವುದಿಲ್ಲ ಎಂಬುವುದಕ್ಕೆ ನಾರಿಶಕ್ತಿ ಮಸೂದೆಯನ್ನು ವಿಫಲ ಪಡಿಸಿರುವುದು ಸಾಕ್ಷಿಯಾಗಿ ನಿಂತಿದೆ ಎಂದರು.

ಬಳಿಕ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ,
ಮಹಿಳೆಯರಿಗೆ ಮಸೂದೆಯನ್ನು ಆಗದಂತೆ ತಡೆಯೊಡ್ಡಿ ಅವರ ಸ್ವಾಭಿಮಾನಕ್ಕೆ, ಗೌರವಕ್ಕೆ ಅವಮಾನವನ್ನು ಮಾಡಿದೆ. ಬಾಹ್ಯಕಾಶದಿಂದ ಹಿಡಿದು ಸೈನಿಕರಾಗಿ, ವೈಜ್ಞಾನಿಕ ಸಂಶೊಧನೆಯಲ್ಲಿಯೂ ಸಹ ತನ್ನದೆಯಾದಂತಹ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿರುವಂತಹ ನಾರಿ ಶಕ್ತಿಗೆ ಈ ಮಸೂದೆಯನ್ನು ತಡೆಯೊಡ್ಡುವುದರ ಮೂಲಕ ಕಾಂಗ್ರೆಸ್ ತನ್ನ ಸಣ್ಣತನವನ್ನು ತೋರಿಸಿದೆ. ೪೦ ವರ್ಷಗಳಿಂದಲೂ ಇದೇ ಕಾಂಗ್ರೆಸ್ ಈ ಮೀಸಲಾತಿಯ ಬಗ್ಗೆ ಮಾತನಾಡುತ್ತಿದೆ, ಆದರೆ ಅವರಿಗೆ ಕೊಡುವಂತಹ ಸಂದರ್ಭ ಬಂದಾಗ ಮಾತ್ರ ಸುಳ್ಳು ಕಾರಣಗಳನ್ನು ಹೇಳಿ ನುರುಚಿಕೊಳ್ಳುತ್ತಾರೆ. ನರೇಂದ್ರ ಮೋದಿ ಹಾಗೂ ಬಿಜೆಪಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮುಂದಿನ ದಿನಗಳಲ್ಲಿ ಈ ಮಸೂದೆಯನ್ನು ಖಂಡಿತವಾಗಿಯೂ ಜಾರಿಗೊಳಿಸುತ್ತದೆ ಎಂದರು.

ಪ್ರತಿಭಟನೆಯಲ್ಲಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಗೌಡ ಪ್ರಜ್ವಲ್, ಪ್ರಶಾಂತ್ ಪಾರೆಂಕಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಪೂರ್ಣಿಮಾ, ತುಳಸಿ ಮಾಲಾಡಿ, ಬಿಜೆಪಿ ಜಿಲ್ಲಾ ಸಹ ಪ್ರಭಾರಿ ಜಯಂತ್ ಕೋಟ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಹಾಗೂ ಪದಾಧಿಕಾರಿಗಳು, ಮಂಡಲದ ಎಲ್ಲಾ ಪದಾಧಿಕಾರಿಗಳು, ಮಹಾ ಶಕ್ತಿ ಕೇಂದ್ರದ ಪದಾಧಿಕಾರಿಗಳು, ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಎಸ್.ಸಿ ಮೋರ್ಚಾದ ಅಧ್ಯಕ್ಷರು, ರೈತ ಮೋರ್ಚಾದ ಅಧ್ಯಕ್ಷರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ವಸಂತಿ ಪ್ರಸ್ತಾವಿಸಿದರು. ಬೆಳ್ತಂಗಡಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ವಂದಿಸಿದರು.

Related posts

ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖೋ ಖೋ ಪಂದ್ಯಾಟ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್‍ನಿಂದ ಸಿಹಿತಿಂಡಿ ವಿತರಣೆ

Suddi Udaya

ಉಜಿರೆ : ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಕಾರು ಕಳವು : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲು

Suddi Udaya

ಮಲೆಬೆಟ್ಟು ಹಾಲು ಉತ್ಪಾದಕರ ಸಂಘದ ಹಳೆಯ ಆಡಳಿತ ಮಂಡಳಿ ರದ್ದು, ನೂತನ ವಿಶೇಷಾಧಿಕಾರಿಯಾಗಿ ಯಮುನ ನೇಮಕ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಜನ್ಮ ದಿನಾಚರಣೆ

Suddi Udaya

ಮುಳಿಯ ಜುವೆಲ್ಸ್ ನಲ್ಲಿ ಕರಿಮಣಿ ಮತ್ತು ಬಳೆಗಳ ಉತ್ಸವ

Suddi Udaya
error: Content is protected !!