25.5 C
ಪುತ್ತೂರು, ಬೆಳ್ತಂಗಡಿ
August 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ: ವಿದ್ವತ್ ಪಿಯು ಕಾಲೇಜಿಗೆ ಮತ್ತೊಂದು ಗರಿ

ಬೆಳ್ತಂಗಡಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜು ಪ್ರಥಮ ಪ್ರಯತ್ನದಲ್ಲೇ ಅತ್ಯುತ್ತಮ ಫಲಿತಾಂಶ ದಾಖಲಿಸಿರುವ ನಡುವೆ ಮರು ಮೌಲ್ಯಮಾಪನದಲ್ಲಿ ಇದೀಗ ಚಿನ್ಮಯ್ ಜಿ.ಕೆ. (595) ಶೇ.99.16 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ 5ನೇ ಸ್ಥಾನಕ್ಕೆ ಜಿಗಿದು ಕಾಲೇಜಿನಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ.

ವಿಜ್ಞಾನ ವಿಭಾಗದ ಪ್ರಥಮ ಫಲಿತಾಂಶದಲ್ಲಿ ತನುಶ್ರೀ (593) ಶೇ.98.83 ಅಂಕ ಗಳಿಸಿ ರಾಜ್ಯದಲ್ಲಿ 7 ಸ್ಥಾನ ಪಡೆದಿದ್ದರು. ಈ ವೇಳೆ ಚಿನ್ಮಯ್ ಜಿ.ಕೆ. ಅವರು ಮರು ಮೌಲ್ಯಮಾಪನಕ್ಕೆ ಒಳಪಡಿಸಿದಂತೆ ಏಪ್ರಿಲ್ 29 ರಂದು ಹೊರಬಂದ ಮರು ಮೌಲ್ಯಮಾಪನ ಫಲಿತಾಂಶದಲ್ಲಿ (595) ಶೇ.99.16 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ೫ ನೇ ರ‍್ಯಾಂಕ್ (ಭೌತಶಾಸ್ತ್ರ-೧೦೦, ರಸಾಯನಶಾಸ್ತ್ರ-100, ಗಣಿತ-100 ಮತ್ತು ಗಣಕ ವಿಜ್ಞಾನ-100) ಪಡೆದು ಕಾಲೇಜಿಗೆ ಕರ‍್ತಿ ತಂದಿದ್ದಾರೆ.

ತನುಶ್ರೀ (593) ಶೇ.98.83% (ರಸಾಯನಶಾಸ್ತ್ರ-100, ಭೌತಶಾಸ್ತ್ರ-100 ಗಣಿತಶಾಸ್ತ್ರ-100, ಜೀವಶಾಸ್ತ್ರ-100) ನಾಲ್ಕು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದು ರಾಜ್ಯಕ್ಕೆ 7ನೇ ರ‍್ಯಾಂಕ್ ಹಾಗೂ ಕಾಲೇಜಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಧ್ಯಾನ ಈ ಹಿಂದೆ (590) ಅಂಕ (ಕನ್ನಡ-100, ವ್ಯವಹಾರ ಅಧ್ಯಯನ-100, ಲೆಕ್ಕಶಾಸ್ತ್ರ-100) ಪಡೆದಿದ್ದು ಮರು ಮೌಲ್ಯಮಾಪನ ನಡೆಸಿದಾಗ ಭಾಷಾ ವಿಷಯದಲ್ಲಿ ಹೆಚ್ಚುವರಿ 1 ಅಂಕ ಪಡೆದು (591) ಶೇ.98.50 ಅಂಕ ಪಡೆದು ರಾಜ್ಯಕ್ಕೆ 9ನೇ ರ‍್ಯಾಂಕ್, ಕಾಲೇಜಿಗೆ ತೃತೀಯ ಸ್ಥಾನಿಯಾಗಿದ್ದಾರೆ.

ಉಳಿದಂತೆ ವಿಜ್ಞಾನ ವಿಭಾಗದಲ್ಲಿ ಈ ಹಿಂದೆ ಜಿ.ಎಸ್.ರಾಹುಲ್ (584) -ಶೇ.97.33% ಪಡೆದಿದ್ದು ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ 4 ಅಂಕಪಡೆದು (588)- ಶೇ.98, ಆಶ್ಲೇಷ್ ಜೆ.ಎಸ್. ಹೆಚ್ಚುವರಿ ೬ ಅಂಕ ಪಡೆದು (573) ಶೇ.95., ಸಮ್ಯಕ್ ತೇಜಸ್ವಿ ಹೆಚ್ಚುವರಿ 4 ಅಂಕ ಪಡೆದು (576) ಶೇ.96 ಹಾಗೂ ಮೈತಿಲಿ ಗೋರೆ, ಮೋಕ್ಷಾ, ನಿನಾದ ಎಸ್.ಎ., ಪ್ರಣವ್ ದೇವ್, ವೆನಿಕಾ ಬಿ.ವೈ., ವಿಕಾಸ್ ಜಿ.ಎನ್., ಯಶಸ್ವಿ ಆರ್.ಸಾಲ್ಯಾನ್, ಯಶಸ್ವಿನಿ ಜಯೇಂದ್ರ ಬಂಗೇರ ಹೆಚ್ಚುವರಿ ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ನೇಹಾ ಭಟ್ ಈ ಹಿಂದೆ ೫೭೩ ಅಂಕ ಪಡೆದಿದ್ದು ಹೆಚ್ಚುವರಿ 11 ಅಂಕ ಪಡೆದು (584) ಶೇ.97.33, ಒಟ್ಟು 17 ಮಂದಿ ವಿದ್ಯರ‍್ಥಿಗಳು ಮರು ಮೌಲ್ಯಮಾಪನಕ್ಕಾಗಿ ಪ್ರಯತ್ನಿಸಿದ್ದು ಈ ಪೈಕಿ ಬಹುತೇಕ ಮಂದಿ ಅತ್ಯುತ್ತಮ ಅಂಕದೊಂದಿಗೆ ಕಾಲೇಜಿಗೆ ಮತ್ತೊಂದುವ ಗರಿ ತಂದಿದ್ದಾರೆ. ಈ ಫಲಿತಾಂಶದಿಂದ ಕಾಲೇಜಿನ ಶೈಕ್ಷಣಿಕ ಮಂಡಳಿಯನ್ನು ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ, ಕರ‍್ಯರ‍್ಶಿ ಪ್ರಜ್ವಲ್ ರೈ, ಖಜಾಂಚಿ ಎಂ.ಕೆ.ಕಾಶಿನಾಥ್., ಶೈಕ್ಷಣಿಕ ನರ‍್ದೇಶಕ ಗಂಗಾಧರ್ ಇ.ಮಂಡಳಲೆ ಪ್ರಶಂಸಿದ್ದಾರೆ.

Related posts

ರಾಜ್ಯ ಪುರಸ್ಕಾರ ಪರೀಕ್ಷೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳು ತೇರ್ಗಡೆ

Suddi Udaya

ಕರಂಬಾರು: ಬೂಟ್ಟೆಲ್ಮಾರ್ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಸೇವಾ ಟ್ರಸ್ಟ್ ಅಭಿವೃದ್ಧಿಗೆ ರೂ.1 ಲಕ್ಷ ಡಿ.ಡಿ. ವಿತರಣೆ

Suddi Udaya

ಕೊಕ್ರಾಡಿಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ

Suddi Udaya

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ: ಪೆರಿಂಜೆ ಶ್ರೀ ಧ.ಮಂ.ಅ. ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಕೊಕ್ಕಡ ಕಪಿಲಾ ಜೇಸಿಗೆ ವಲಯ ಉಪಾಧ್ಯಕ್ಷರ ಭೇಟಿ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ವಿದ್ಯಾರ್ಥಿ ಸಂಘ ರಚನೆ

Suddi Udaya
error: Content is protected !!