28.1 C
ಪುತ್ತೂರು, ಬೆಳ್ತಂಗಡಿ
September 15, 2026
Uncategorized

ಮೇ 15: ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿದೈವಸ್ಥಾನದಲ್ಲಿ ಸಂಕ್ರಮಣ ಪೂಜೆ : ಉಚಿತ ಬರೆಯುವ ಪುಸ್ತಕ ವಿತರಣೆಯ ಅರ್ಜಿ ಫಾರ್ಮ್‌ಗಳ ವಿತರಣೆ

ಅಳದಂಗಡಿ: ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿದೈವಸ್ಥಾನದಲ್ಲಿ ಮೇ.15 ಶುಕ್ರವಾರ ನಡೆಯಲಿರುವ ಸಂಕ್ರಾಮಣ ಪೂಜೆಯ ದಿನದಂದು 2026ನೇ ಸಾಲಿಗೆ ಮಕ್ಕಳಿಗೆ ಬರೆಯುವ ಪುಸ್ತಕ ವಿತರಣೆಯ ಅರ್ಜಿ ಫಾರಂಗಳನ್ನು ವಿತರಿಸಲಾಗುವುದು ಎಂದು ದೈವಸ್ಥಾನದ ಆಡಳಿತದಾರ ಶಿವಪ್ರಸಾದ ಅಜಿಲ ಅವರು ತಿಳಿಸಿದ್ದಾರೆ.
ದೈವಸ್ಥಾನದ ಆದಾಯದಿಂದ ಬಡ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷ ಅಳದಂಗಡಿ ಅರಮನೆ ವ್ಯಾಪ್ತಿಯ ಹಾಗೂ ತಾಲೂಕು ಹೊರ ತಾಲೂಕಿನ ಮಕ್ಕಳಿಗೆ ಉಚಿತವಾಗಿ ಬರೆಯುವ ಪುಸ್ತಕವನ್ನು ನೀಡಲಾಗುತ್ತಿದೆ. ಅದರಂತೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಕಾರ್ಯಕ್ರಮವಿದ್ದು, ಇದರ ಅರ್ಜಿ ಫಾರಂಗಳನ್ನು ಮೇ 15ರಂದು ಶುಕ್ರವಾರ ದೈವಸ್ಥಾನದಲ್ಲಿ ನಡೆಯುವ ಸಂಕ್ರಮಣ ಪೂಜೆಯಂದು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

Related posts

ಸುದ್ದಿ ಉದಯ ಫಲಶ್ರುತಿ: ಬಂದಾರು ಬೋಲೋಡಿ ಎಂಬಲ್ಲಿ ಗುಡ್ಡ ಕುಸಿತ ವರದಿ ಬೆನ್ನಲ್ಲೇ ಗ್ರಾ.ಪಂ. ನಿಂದ ತಕ್ಷಣ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ

Suddi Udaya

ದೀಪಾವಳಿ ಪ್ರಯುಕ್ತ ಆಹಾರ ಸಾಮಾಗ್ರಿ ವಿತರಣೆ

Suddi Udaya

ಮಡಂತ್ಯಾರು ವಲಯದ ಮಚ್ಚಿನ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya

ಕಿಂಡಿ ಅಣೆಕಟ್ಟುಗಳಲ್ಲಿ ಸಿಲುಕಿದ ಕಸಕಡ್ಡಿಗಳ ಸ್ವಚ್ಛತಾ ಕಾರ್ಯ

Suddi Udaya

ಮಡಂತ್ಯಾರು : ಕುಂಜತ್ತೂಡಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ ಕಾರ್ಯಕ್ರಮ

Suddi Udaya

ಡಿ.17: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ, ಬಿರುಸಿನ ಪೈಪೋಟಿ: ಬಿಜೆಪಿ-ಕಾಂಗ್ರೆಸ್ ಬಿಗ್ ಫೈಟ್, 12 ಸ್ಥಾನಕ್ಕೆ 24 ನಾಮಪತ್ರ ಸಲ್ಲಿಕೆ

Suddi Udaya
error: Content is protected !!