August 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಉಜಿರೆ ರುಡ್‌ಸೆಟ್‌ ಸಂಸ್ಥೆಯ ವಾರ್ಷಿಕ ವರದಿ ಬಿಡುಗಡೆ

ಉಜಿರೆ: ಸಿದ್ಧವನ ರುಡ್ ಸೆಟ್ ಸಂಸ್ಥೆಯ 2025–26ನೇ ಸಾಲಿನ ವಾರ್ಷಿಕ ವರದಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳು ಹಾಗೂ ರುಡ್ ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದರು.

ವಾರ್ಷಿಕ ವರದಿ ಬಿಡುಗಡೆ ಬಳಿಕ ಮಾತನಾಡಿದ ಅವರು, ಗ್ರಾಮೀಣ ಯುವಕರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವಲ್ಲಿ ರುಡ್ ಸೆಟ್ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು. 2025–26ನೇ ಸಾಲಿನಲ್ಲಿ ಸಂಸ್ಥೆಯು ಕೈಗೊಂಡಿರುವ ವಿವಿಧ ತರಬೇತಿ ಕಾರ್ಯಕ್ರಮಗಳು, ಸ್ವಉದ್ಯೋಗ ಪ್ರೋತ್ಸಾಹ ಚಟುವಟಿಕೆಗಳು ಹಾಗೂ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ, ಸಂಸ್ಥೆಯ ಪ್ರಗತಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಯೋಜನೆಗಳ ಮೂಲಕ ಹೆಚ್ಚಿನ ಯುವಕರಿಗೆ ತರಬೇತಿ ನೀಡುವಂತೆ ಸಲಹೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ. ಪಿ. ವಿಜಯಕುಮಾರ್, ಸಂಸ್ಥೆಯ ನಿರ್ದೇಶಕ ಅಜೇಯ, ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಮತ್ತು ಕೆ. ಕರುಣಾಕರ ಜೈನ್ ಉಪಸ್ಥಿತರಿದ್ದರು. ಜೊತೆಗೆ ಸಹೋದ್ಯೋಗಿಗಳಾದ ರಶ್ಮಿ, ಪ್ರವೀಣ ಕುಮಾರ್, ಕಾಶ್ಮೀರ ಡಿ’ಸೋಜ ಹಾಗೂ ಸುರೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂಸ್ಥೆಯ ವರದಿಯ ಪ್ರಕಾರ, 2025–26ನೇ ಸಾಲಿನಲ್ಲಿ ಸುಮಾರು 1006 ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ವೃತ್ತಿಪರ ಹಾಗೂ ಸ್ವಉದ್ಯೋಗಾಧಾರಿತ ತರಬೇತಿಗಳನ್ನು ನೀಡಲಾಗಿದೆ. ಈ ತರಬೇತಿಗಳಲ್ಲಿ ಉದ್ಯಮ ಸ್ಥಾಪನೆ, ಆರ್ಥಿಕ ನಿರ್ವಹಣೆ, ಮಾರುಕಟ್ಟೆ ಅರಿವು, ತಾಂತ್ರಿಕ ಕೌಶಲ್ಯಗಳ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಿತ್ತು. ತರಬೇತಿ ಪಡೆದವರಲ್ಲಿ ಸುಮಾರು 732 ಮಂದಿ ತಮ್ಮ ಸ್ವಂತ ಉದ್ಯೋಗವನ್ನು ಯಶಸ್ವಿಯಾಗಿ ಆರಂಭಿಸಿರುವುದು ಸಂಸ್ಥೆಯ ಮಹತ್ವದ ಸಾಧನೆಯಾಗಿದೆ.

ಈ ಸಾಧನೆ ಸಂಸ್ಥೆಯ ಸಮರ್ಪಿತ ತರಬೇತಿ ವಿಧಾನ, ಅನುಭವಸಂಪನ್ನ ತರಬೇತುದಾರರು ಮತ್ತು ಸಮಗ್ರ ಮಾರ್ಗದರ್ಶನದ ಫಲವಾಗಿದೆ ಎಂದು ಸಂಸ್ಥೆ ತಿಳಿಸಿದೆ. ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳ ಯುವಕರಿಗೆ ಆತ್ಮವಿಶ್ವಾಸ ಬೆಳೆಸಿ, ಸ್ವಾವಲಂಬನೆಯತ್ತ ಮುನ್ನಡೆಸುವಲ್ಲಿ ರುಡ್ ಸೆಟ್ ಸಂಸ್ಥೆ ಪ್ರಮುಖ ಪಾತ್ರವಹಿಸುತ್ತಿದೆ ಎಂಬುದು ಈ ವರದಿ ಮೂಲಕ ಮತ್ತೊಮ್ಮೆ ಸ್ಪಷ್ಟವಾಗಿದೆ.

Related posts

ಬಿಜೆಪಿ ಪಿಲ್ಯ ಬೂತ್ ಸಮಿತಿಯ ಅಧ್ಯಕ್ಷರಾಗಿ ಆನಂದ ಪಿ ., ಕಾರ್ಯದರ್ಶಿಯಾಗಿ ಉಮೇಶ್

Suddi Udaya

ಪಾರೆಂಕಿ ಶ್ರೀ ಮಹಿಷಮರ್ದಿನಿ ಯಕ್ಷಗಾನ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಶಷ್ಟಬ್ಧಿ ಪೂರೈಸಿದ ಸುಣ್ಣೆಂಬಳ ವಿಶೇಶ್ವರ ಭಟ್ ರಿಗೆ ಗೌರವಾರ್ಪಣೆ

Suddi Udaya

ಕಿಲ್ಲೂರು ದರ್ಖಾಸು ನಿವಾಸಿ ರಾಧಾಕೃಷ್ಣ ಆಚಾರ್ಯ ನೇಣು ಬಿಗಿದು ಆತ್ಮಹತ್ಯೆ

Suddi Udaya

ಲಾಯಿಲ ಬಿಜೆಪಿ ಬೆಂಬಲಿತ ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ಕಾಂಗ್ರೆಸ್ ಪಕ್ಷ ಸೇರ್ಪಡೆ

Suddi Udaya

ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿಂದ ಕೆಳಗೆ ಬಿದ್ದ ಒಂದೇ ಮನೆಯ ಇಬ್ಬರು ವಿದ್ಯಾರ್ಥಿನಿಯರು: ಗೇರುಕಟ್ಟೆ ರೇಷ್ಮೆ ರೋಡ್ ಬಳಿ ನಡೆದ ಘಟನೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಯು ಶೇಪ್ ವಾಕರ್, ವಿತರಣೆ

Suddi Udaya
error: Content is protected !!