30.4 C
ಪುತ್ತೂರು, ಬೆಳ್ತಂಗಡಿ
September 18, 2026
ಪ್ರಮುಖ ಸುದ್ದಿ

ಮೇ. 17: ಶಾಸಕ ಹರೀಶ್ ಪೂಂಜರವರ ಸಹಕಾರದಲ್ಲಿ ಉಜಿರೆಯಲ್ಲಿ ಸಂಭ್ರಮದ ಕೇರಳ ಸಾಂಪ್ರದಾಯಿಕ “ವಿಷುಕಣಿ” ಆಚರಣೆಕೇರಳದ ಸಾಂಪ್ರದಾಯಿಕ ಶೈಲಿಯ ಊಟೋಪಚಾರ, ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಅಂತರರಾಜ್ಯ ಕಲಾವಿದರಿಂದ ಸಾಂಸ್ಕೃತಿಕ ವೈಭವ

ಬೆಳ್ತಂಗಡಿ: ವಿಷುಕಣಿ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ 5ನೇ ವರ್ಷದ ವಿಷುಕಣಿ 5.0 ಕಾರ್ಯಕ್ರಮವು ಮೇ 17, ರವಿವಾರ ಕೃಷ್ಣಾನುಗ್ರಹ ಸಭಾಭವನ ಉಜಿರೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.

ವಿಷುಕಣಿ ಸಮಾರಂಭದ ಪೂರ್ವಭಾವಿ ಸಭೆಯು ಶಾಸಕರಾದ ಹರೀಶ್ ಪೂಂಜರವರ ನೇತೃತ್ವದಲ್ಲಿ,ಸಮಿತಿ ಪ್ರಮುಖರ ಮುಂದಾಳತ್ವದಲ್ಲಿ ಗುರುವಾಯನಕೆರೆ ಹವ್ಯಕ ಸಭಾಭವನದಲ್ಲಿ ಮೇ.2ರಂದು ನಡೆಯಿತು.

ವಿಶೇಷವಾಗಿ ವಿಷುಕಣಿ ಆಚರಣೆಯನ್ನು ಕಳೆದ ಐದು ವರ್ಷಗಳಿಂದ ಅತ್ಯಂತ ಅಚ್ಚುಕಟ್ಟಾಗಿ ಆಚರಿಸುತ್ತಿದ್ದು ಈ ಬಾರಿಯು ಸಂತೋಷ, ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಶಾಸಕ ಹರೀಶ್ ಪೂಂಜರವರ ಸಹಕಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ
ಕೇರಳದ ಸಾಂಪ್ರದಾಯಿಕ ಶೈಲಿಯ 32 ಬಗೆಯ ಊಟೋಪಚಾರ, ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಅಂತರರಾಜ್ಯ ಕಲಾವಿದರಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.

ಈಗಾಗಲೇ ಕಾರ್ಯಕ್ರಮದ ಯಶಸ್ವಿಗೆ ಪೂರಕವಾಗಿ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂದು ಸಮಿತಿ ಪ್ರಮುಖರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿ ಪ್ರಮುಖರಾದ ಉಜಿರೆ ರಮ್ಯ ಫ್ಯಾನ್ಸಿ ಮಾಲಕ ಪ್ರಸಾದ್ ಬಿ.ಎಸ್, ಅಕ್ಷರ ಪ್ರಿಂಟರ್ಸ್ ಮಾಲಕ ಅನಿಲ್ ಕುಮಾರ್ ಶಿಬಾಜೆ, ಉದ್ಯಮಿ ಬಾಲಕೃಷ್ಣ ನೈಮಿಷ, ಉದ್ಯಮಿ ದಿವಿನೇಶ್ ಚಾರ್ಮಾಡಿ ಹಾಗೂ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.

Related posts

ನೀಟ್ ಪರೀಕ್ಷೆ ಅಕ್ರಮ, ರಾಷ್ಟ್ರೀಯ ಯುವ ಕಾಂಗ್ರೆಸ್ ನಿಂದ ದೆಹಲಿಯಲ್ಲಿ ಸಂಸತ್ ಮುತ್ತಿಗೆ : ದೆಹಲಿ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

Suddi Udaya

ಫೆ.8-12: ಕೊಯ್ಯೂರು ಬದಿನಡೆ ಶ್ರೀ ವನದುರ್ಗಾ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ದಸರಾ ಕವಿಗೋಷ್ಠಿ-2025ರಲ್ಲಿ ವಸಂತಿ ಟಿ. ನಿಡ್ಲೆ

Suddi Udaya

ಬೆಳ್ತಂಗಡಿ: ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ; ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಮಚ್ಚಿನದಲ್ಲಿ ಗ್ರಾಮಮಟ್ಟದ ಬಾಲ ಮೇಳ ಕಾರ್ಯಕ್ರಮ

Suddi Udaya

ಲಾಯಿಲ: ಪುತ್ರಬೈಲಿ‌ನಲ್ಲಿ ಸರಕಾರದ ಕುಡಿಯುವ ನೀರಿನ ಬಾವಿ ಕಲುಷಿತಗೊಳಿಸಿ ಜಾಗ ಒತ್ತುವರಿ

Suddi Udaya
error: Content is protected !!