26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯವರದಿ

ಪಶ್ಚಿಮ ಬಂಗಾಳದ ಚಾರಿತ್ರಿಕ ಗೆಲುವು ಬಿಜೆಪಿಯ ಸೈದಾಂತಿಕ ನಿಲುವು ಮತ್ತು ಪ್ರಧಾನಿ ಮೋದಿಯವರ ‘ವಿಕಸಿತ ಭಾರತ’ದ ಸಂಕಲ್ಪಕ್ಕೆ ಸಂದ ಜಯ: ಸಂಸದ ಕ್ಯಾ. ಚೌಟ

ಮಂಗಳೂರು: ಪಂಚರಾಜ್ಯ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವುದು ಹಾಗೂ ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿರುವುದು ಹಾಗೂ ಕೇರಳದಲ್ಲಿ ಉತ್ತಮ ಸಾಧನೆ ಮಾಡಿರುವುದು ಪ್ರಧಾನಮಂತ್ರಿ ಮೋದಿ ಅವರ ಸರ್ಕಾರದ ಮೇಲಿರುವ ಜನರ ವಿಶ್ವಾಸಕ್ಕೆ ಹಾಗೂ ‘ವಿಕಸಿತ ಭಾರತ’ದ ಸಂಕಲ್ಪಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಿದೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಪಶ್ಚಿಮ ಬಂಗಾಲದಲ್ಲಿ ಬಿಜೆಪಿಯ ಗೆಲುವು ಇಡೀ ದೇಶದಲ್ಲಿರುವ ಬಿಜೆಪಿ ಕಾರ್ಯಕರ್ತರಿಗೆ ಸಂದ ಗೆಲುವು. ಏಕೆಂದರೆ, ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಗೂಂಡಾ ರಾಜ್ಯದಲ್ಲಿ ಕಮಲವನ್ನು ಅರಳಿಸುವುದು ಅಷ್ಟೊಂದು ಸುಲಭವಿರಲಿಲ್ಲ. ಈ ಗೆಲುವಿನ ಹಿಂದೆ ಬಿಜೆಪಿಯ ಕಾರ್ಯಕರ್ತರ ತ್ಯಾಗ-ಬಲಿದಾನ ಅಡಗಿದೆ. ಬಿಜೆಪಿಯ ಕಾರ್ಯಕರ್ತರ ಮೇಲೆ ಸಾಕಷ್ಟು ದೌರ್ಜನ್ಯ ನಡೆದರೂ ಎದೆಗುಂದದೆ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂಬ ಬಿಜೆಪಿ ಕಾರ್ಯಕರ್ತರ ಕಠಿಣ ಪರಿಶ್ರಮ, ಹೋರಾಟಕ್ಕೆ ಹಾಗೂ ಬಿಜೆಪಿ ಸೈದಾಂತಿಕ ನಿಲುವಿಗೆ ಸಿಕ್ಕ ಐತಿಹಾಸಿಕ ಜಯ ಇದು ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ.

ಐದು ರಾಜ್ಯಗಳಲ್ಲಿನ ಬಿಜೆಪಿಯ ಅದ್ಭುತ ಸಾಧನೆಯ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಪ್ರತಿಮ ಕಾರ್ಯತಂತ್ರ ಹಾಗೂ ರಾಷ್ಟ್ರೀಯ ಏಕತೆಗೆ ಅವರ ಅಚಲ ಬದ್ಧತೆಯಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಚೈತನ್ಯದಾಯಕ ಸಂಘಟನಾ ಶಕ್ತಿಯು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದ್ದು, ಬಂಗಾಳದಿಂದ ಪುದುಚೇರಿಯವರೆಗೆ ಬಿಜೆಪಿಯ ಸಾಂಸ್ಥಿಕ ಬಲವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಒಟ್ಟಾರೆಯಾಗಿ ಪಂಚರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶವು ಎನ್‌ಡಿಎ ಮೈತ್ರಿಕೂಟದ ವಿಶ್ವಾಸಾರ್ಹತೆ ಹಾಗೂ ಪಾರದರ್ಶಕ ಆಡಳಿತದ ವಿಜಯವಾಗಿದೆ. ದೇಶಾದ್ಯಂತ ಬಿಜೆಪಿಯ ವ್ಯಾಪ್ತಿಯನ್ನು ಈ ಜಯವು ಮತ್ತಷ್ಟು ವಿಸ್ತರಿಸಿದ್ದು, ರಾಷ್ಟ್ರದ ಪ್ರಗತಿಯ ಹಾದಿಯಲ್ಲಿ ಜನರು ಮೋದಿಯವರ ನಾಯಕತ್ವವನ್ನು ಸಂಪೂರ್ಣವಾಗಿ ಕಾಯ-ವಾಚಾ-ಮನಸಾ ಒಪ್ಪಿಕೊಂಡಿರುವುದಕ್ಕೆ ಸಾಕ್ಷಿಯಿದು. ಈ ಐತಿಹಾಸಿಕ ಜನಾದೇಶ ನೀಡಿರುವ ಮತದಾರರಿಗೆ ಹಾಗೂ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಸಮರ್ಪಿತ ಬಿಜೆಪಿ ಕಾರ್ಯಕರ್ತರಿಗೆ ಕ್ಯಾ. ಬ್ರಿಜೇಶ್ ಚೌಟ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Related posts

ಸುದ್ದಿ ಉದಯ ವಾರಪತ್ರಿಕೆ’ ನೇತೃತ್ವ ‘ಮುಳಿಯ ಸಂಸ್ಥೆ’ಯ ಪ್ರಾಯೋಜಕತ್ವ – ‘ರಾಧೆ-ಕೃಷ್ಣ’ ಫೋಟೋ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ

Suddi Udaya

ಸಂಬೋಳ್ಯ ಮೃತ ಬಾಲಕ ಸುಮಂತ್ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya

ಕೊಕ್ಕಡ : ನಿವೃತ್ತ ಅಂಚೆ ಪಾಲಕ  ಬಾಲಕೃಷ್ಣ ನಿಧನ

Suddi Udaya

ಮಾ.8, ಗುರುವಾಯನಕೆರೆ ಸನ್ಯಾಸಿ ಗುಳಿಗ ದೈವದ ಸನ್ನಿಧಿಯಲ್ಲಿ ದೈವರಾಜ ಗುಳಿಗ ನೇಮೋತ್ಸವ

Suddi Udaya

ಸುದ್ದಿ ಉದಯ ವಾರಪತ್ರಿಕೆ ಲೋಕಾರ್ಪಣೆ ನೂತನ ಕಚೇರಿಯ ಉದ್ಘಾಟನೆ
ಯೂಟ್ಯೂಬ್ ಮತ್ತು ವೆಬ್‌ಸೈಟ್‌ಗೆ ಚಾಲನೆ

Suddi Udaya

ಪಡಿತರ ಚೀಟಿವಿಲ್ಲದೆ ವಂಚಿತಗೊಂಡಿದ್ದ ನೆರಿಯ ಗ್ರಾಮದ ಕೋಲೋಡಿ ನೀಲಮ್ಮ ಕುಟುಂಬಕ್ಕೆ ಲಭಿಸಿದ ರೇಷನ್ ಕಾರ್ಡ್

Suddi Udaya
error: Content is protected !!