26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬಳಂಜ ಶ್ರೀ ಪಂಚಲಿಂಗೇಶ್ವರ- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಸತ್ಸಂಗ”

ಬೆಳ್ತಂಗಡಿ: ಬಳಂಜ ಶ್ರೀ ಪಂಚಲಿಂಗೇಶ್ವರ -ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ದುಬೈಯಲ್ಲಿ ಸಾವಿರಾರು ಭಾರತೀಯರಿಗೆ ಉದ್ಯೋಗದಾತರಾಗಿದ್ದುಕೊಂಡು, ದುಬಾಯಿಯಂತಹ ಹೊರದೇಶದಲ್ಲಿ ತಮಿಳ್ ರೇಡಿಯೋವನ್ನು ಕಳೆದ ಒಂದು ದಶಕಗಳಿಂದ ನಡೆಸಿಕೊಂಡು ಬರುತ್ತಿದ್ದು ತಮಿಳುನಾಡಿನ ಶಿವಕಾಶಿ, ಮದುರೈ ಮೀನಾಕ್ಷಿ ದೇವಸ್ಥಾನ ಸೇರಿದಂತೆ ಅನೇಕ ಧಾರ್ಮಿಕ ಸಂಸ್ಥೆಗಳಿಗೆ ಪೋಷಕರಾಗಿರುವ ಡಾ.ಸೋನಾ ರಾಮ್ ಮತ್ತು ಶಕ್ತಿ ರಾಮ್ ರವರು ತಮ್ಮ ಭಕ್ತಾದಿಗಳ ತಂಡದೊಂದಿಗೆ ಬಳಂಜ ದೇವಸ್ಥಾನಕ್ಕೆ ಸೋಮವಾರ ಸುಮಾರು 50 ಜನರ ತಂಡದೊಂದಿಗೆ ಆಗಮಿಸಿ ಸತ್ಸಂಗ ನೆರವೇರಿಸಿದರು.

ಕ್ಷೇತ್ರದ ವತಿಯಿಂದ ಆಡಳಿತ ಮೊಕ್ತೇಸರ ಶೀತಲ್ ಪಡಿವಾಳ್ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಬಾರ್ದಡ್ಕ, ಪ್ರಮುಖರಾದ ಗುರುಪ್ರಸಾದ್ ಹೆಗ್ಡೆ, ಪ್ರಭಾಕರ ಹೆಗ್ಡೆ ಕೋಡಿ, ಚಂದ್ರಶೇಖರ ಪಿ.ಕೆ, ದಿನೇಶ್ ಪಿ.ಕೆ, ಜಗದೀಶ್ ರೈ, ವಿನು ಬಳಂಜ, ಸಂತೋಷ್ ಸಾಲಿಯಾನ್ ಕಾಪಿನಡ್ಕ, ಚಿತ್ತರಂಜನ್ ಹೆಗ್ಡೆ, ರತ್ನರಾಜ್ ಜೈನ್ ಪೇರಂದಬೈಲ್, ಗಣೇಶ್ ಬಿ ಬೊಂಟ್ರೊಟ್ಟು, ಸದಾನಂದ ಪೂಜಾರಿ ಬೊಂಟ್ರೊಟ್ಟು, ಮನೋಹರ್ ಬಳಂಜ, ಸುನಂದ ಕುಳೆಂಜಿರೋಡಿ ಗುತ್ತು, ಸತೀಶ್ ಶೆಟ್ಟಿ ಕುರೆಲ್ಯ, ಅರ್ಚಕರಾದ ಸುರೇಶ್ ಭಟ್, ಮಂಜುನಾಥ್ ಭಟ್, ವಿಕ್ರಮ್ ಭಟ್, ಮತ್ತು ಊರವರು ಸ್ವಾಗತಿಸಿದರು.

ಕ್ಷೇತ್ರದ ವತಿಯಿಂದ ಭಜನಾ ತಂಡವನ್ನು ಗೌರವಿಸಲಾಯಿತು. ಉದ್ಯಮಿ ಅಶ್ವಥ್ ಹೆಗ್ಡೆ ಇದರ ನೇತೃತ್ವ ವಹಿಸಿದ್ದರು.

Related posts

ಚೆನ್ನೈನಲ್ಲಿ ಧೂಳೆಬ್ಬಿಸಿದ ದಕ್ಷಿಣ ಕನ್ನಡದ ಹುಡುಗಿಯರು,ಆಲ್ ಇಂಡಿಯಾ ಥ್ರೋಬಾಲ್ ಕೂಟದಲ್ಲಿ ಪ್ರಚಂಡ ಸಾಧನೆ ಮುಳಿಯ ಜ್ಯುವೆಲ್ಸ್ ನಿಂದ ಸಮವಸ್ತ್ರ ಕೊಡುಗೆ

Suddi Udaya

ಶರತ್ ಮಡಿವಾಳ ಸ್ಮಾರಕಕ್ಕೆ ಪುಷ್ಪ ನಮನ

Suddi Udaya

ಪಾರೆoಕಿ: ಹಾರಬೆ ಶ್ರೀ ದುಗಲಾಯ ಮತ್ತು ಗುಳಿಗ ದೈವಗಳ ವಾರ್ಷಿಕ ನೇಮೋತ್ಸವ-ನಾಗದೇವರಿಗೆ ತಂಬಿಲ ಸೇವೆ

Suddi Udaya

ಬೆಳಾಲು : ಅನೈತಿಕ ಸಂಬಂಧದಿಂದ ಪತ್ನಿಯನ್ನು ಬಾವಿಗೆ ತಳ್ಳಿದ ಪತಿ: ಧರ್ಮಸ್ಥಳ ಪೊಲೀಸರ ಲಾಠಿ ರುಚಿಗೆ ಸತ್ಯಾಂಶ ಬಯಲು

Suddi Udaya

ಧರ್ಮಸ್ಥಳ ಕುಡುಮಶ್ರೀ ಟೈಗರ್ಸ್ ವತಿಯಿಂದ ಅದ್ದೂರಿ ಪಿಲಿಏಸ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸಹಾಯಕ ಆಯುಕ್ತರ ಕಚೇರಿಗೆ ಹಾಜರಾಗುವ ಮುನ್ನ ಮಹೇಶ್ ಶೆಟ್ಟಿ ತಿಮರೋಡಿಯವರಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ

Suddi Udaya
error: Content is protected !!