26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಶಿಬಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದ್ವಿತೀಯ ಹಂತದ ಕಾಮಗಾರಿಗೆ ಚಾಲನೆ

ಶಿಬಾಜೆ : ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನ ಶಿಬಾಜೆಯಲ್ಲಿ ರಾಜಾಂಗಣದ ಛಾವಣಿ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದೀಗ ದೇವಸ್ಥಾನದ ಪೂರ್ವ ಭಾಗದ ಅಂಗಣಕ್ಕೆ ಛಾವಣಿ ನಿರ್ಮಾಣ ಮಾಡುವ ದ್ವಿತೀಯ ಹಂತದ ಕಾಮಗಾರಿಗೆ ಇಂದು (ಮೇ 6) ಚಾಲನೆ ನೀಡಲಾಯಿತು.

ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಂಡಿರುವ ಸಮಿತಿ, ಭಕ್ತರಿಗೆ ಉತ್ತಮ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಈ ಕಾಮಗಾರಿಯನ್ನು ಆರಂಭಿಸಿದೆ. ಪೂರ್ವ ಅಂಗಣದ ಛಾವಣಿ ನಿರ್ಮಾಣದಿಂದ ಮಳೆ ಹಾಗೂ ಬಿಸಿಲಿನ ತೊಂದರೆ ನಿವಾರಣೆಯಾಗಲಿದ್ದು, ಜಾತ್ರೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀಧರ್ ರಾವ್ ಅಜಿರಡ್ಕ, ಸಮಿತಿ ಸದಸ್ಯರು, ಮೊಂಟೆತ್ತಡ್ಕ ಸಮಿತಿಯ ಅಧ್ಯಕ್ಷ ಜಿನ್ನಪ್ಪ ಗೌಡ ಮೊಂಟೆತ್ತಡ್ಕ ಮತ್ತು ಸದಸ್ಯರು, ದೀಪಕಾನಂದ, ಪುರುಷೋತ್ತಮ ಕುರುಂಬು, ಮೋನಪ್ಪ ಗೌಡ, ಚೆನ್ನಪ್ಪ ಹೆಚ್.ಎಸ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ದೇವಸ್ಥಾನದ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಭಕ್ತಾದಿಗಳಿಂದ ಸಹಕಾರ ದೊರೆಯಲಿ ಎಂದು ಸಮಿತಿಯವರು ತಿಳಿಸಿದ್ದಾರೆ.

Related posts

ಮೇ 17: ಶಾಸಕ ಹರೀಶ್ ಪೂಂಜರ ಸಹಕಾರದಲ್ಲಿ ಉಜಿರೆಯಲ್ಲಿ ಸಂಭ್ರಮದ ಕೇರಳ ಸಾಂಪ್ರದಾಯಿಕ “ವಿಷುಕಣಿ” ಆಚರಣೆ:ಕೇರಳದ ಸಾಂಪ್ರದಾಯಿಕ ಶೈಲಿಯ ಊಟೋಪಚಾರ,ಕೇರಳ ಚೆಂಡೆ ಪ್ರದರ್ಶನ,ಪೂಕಳಂ, ಅಂತರರಾಜ್ಯ ಕಲಾವಿದರಿಂದ ಸಾಂಸ್ಕೃತಿಕ ವೈಭವ

Suddi Udaya

ಇಂದಬೆಟ್ಟು ಮಸೀದಿಯಲ್ಲಿ ಬಕ್ರೀದ್ ಹಬ್ಬ ಆಚರಣೆ

Suddi Udaya

ಬಳಂಜ: ನಾಲ್ಕೂರು ನಿವಾಸಿ ಮನೋಹರ ಪೂಜಾರಿ ಸೇನೆಗೆ ಆಯ್ಕೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್‌ಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ

Suddi Udaya

ಬಂದಾರು: ಸ.ಹಿ.ಪ್ರಾ. ಶಾಲಾ ಶಿಕ್ಷಕಿ ಕು. ದೇವಿಕಾ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಎಪ್ರಿಲ್ 30: ಹೊಕ್ಕಾಡಿಗೋಳಿ ಶ್ರೀಮತಿ ಜಿನ್ನಮ್ಮ ಮೂಲ್ಯರ ಉತ್ತರಕ್ರಿಯೆ

Suddi Udaya
error: Content is protected !!