September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೇ 10 : ಸ್ಪಂದನ ಬಂಟರ ಸೇವಾ ತಂಡದಿಂದ 50ನೇ ಸೇವಾ ಕಾರ್ಯಕ್ರಮ: ನೂತನ ಸ್ಪಂದನ ಮನೆ ಹಸ್ತಾಂತರ

ಬೆಳ್ತಂಗಡಿ: ಸ್ಪಂದನ ಬಂಟರ ಸೇವಾ ತಂಡ, ಬೆಳ್ತಂಗಡಿ ಬಂಟರ ವಲಯ ಸಮಿತಿ ಕುವೆಟ್ಟು ಮತ್ತು ಬಂಟರ ಗ್ರಾಮ ಸಮಿತಿ, ಓಡಿಲ್ನಾಳ ಇದರ ಸಹಕಾರದೊಂದಿಗೆ 50ನೇ ಸೇವಾ ಕಾರ್ಯಕ್ರಮ ನೂತನ ಸ್ಪಂದನ ಮನೆ ಹಸ್ತಾಂತರ ಕಾರ್ಯಕ್ರಮವು ಮೇ 10 ರಂದು ಓಡಿಲ್ನಾಳ ಗ್ರಾಮದ ಮಠ – ಕಾಪಿಕಾಡು ಸ್ಪಂದನ ಮನೆಯ ವಠಾರದಲ್ಲಿ ನಡೆಯಲಿದೆ.

ಸ್ಪಂದನ ಬಂಟರ ಸೇವಾ ತಂಡದ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ವಿಜಯ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಗುರುವಾಯನಕೆರೆ ಅಧ್ಯಕ್ಷ ಅಜಿತ್ ಜಿ ಶೆಟ್ಟಿ, ದೇವದಾಸ್ ಶೆಟ್ಟಿ ಹಿಬರೋಡಿ ಬದ್ಯಾರು, ಮಡಂತ್ಯಾರು ಶ್ರೀ ದುರ್ಗಾವುಡ್ ಇಂಡಸ್ಟಿçಯ ಉಮೇಶ್ ಶೆಟ್ಟಿ, ಗೌರವ ಉಪಸ್ಥಿತಿ ಬಂಟರ ವಲಯ ಸಮಿತಿ ಕುವೆಟ್ಟು ಅಧ್ಯಕ್ಷ ಶಶಿರಾಜ್ ಶೆಟ್ಟಿ, ಬಂಟರ ಗ್ರಾಮ ಸಮಿತಿ ಲಾಯಿಲ ಅಧ್ಯಕ್ಷ ಜನಾರ್ಧನ ಶೆಟ್ಟಿ ಪೆರಿಂದಿಲೆ, ಬಂಟರ ಗ್ರಾಮ ಸಮಿತಿ ಓಡಿಲ್ನಾಳ ಅಧ್ಯಕ್ಷ ಉಮೇಶ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಸ್ಪಂದನ ಬಂಟರ ಸೇವಾ ತಂಡ, ಬೆಳ್ತಂಗಡಿ ಅಧ್ಯಕ್ಷ ಸುರೇಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಸ.ಪ್ರ.ದ ಕಾಲೇಜಿನಲ್ಲಿ ಮಾನವಿಕ ಸಂಘದ ಉದ್ಘಾಟನೆ

Suddi Udaya

ಕಾರುಗಳ ನಡುವೆ ಅಪಘಾತ:

Suddi Udaya

ಮರೋಡಿ: ವಿಕಸಿತ ಭಾರತ ಸಂಕಲ್ಪ ಯಾತ್ರೆ-ಸಾಧಕರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ಪರಿಸರ ದಿನಾಚರಣೆ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಮೇ 25ರಂದು ಆಯೋಜಿಸಿರುವ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗುವುದಿಲ್ಲ : ಪಿ ಕುಶಾಲಪ್ಪ ಗೌಡ ಪೂವಾಜೆ

Suddi Udaya

ಪದ್ಮುಂಜದಲ್ಲಿ 12 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿ ಶಿಬಿರದ ಸಮಾರೋಪ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧಕಿ ಕುಮಾರಿ ಅದಿತಿ ಮುಗೆರೋಡಿ ರವರಿಗೆ ಸನ್ಮಾನ

Suddi Udaya
error: Content is protected !!