27.6 C
ಪುತ್ತೂರು, ಬೆಳ್ತಂಗಡಿ
September 24, 2026
ತಾಲೂಕು ಸುದ್ದಿಧಾರ್ಮಿಕಶುಭಾರಂಭ

ಕೋಟಿಕಟ್ಟೆಯಲ್ಲಿ ಶ್ರೀ ಮಹಮ್ಮಾಯಿ ಅಮ್ಮನ ನೂತನ ಮೂರ್ತಿ ಮೆರವಣಿಗೆ,ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರೆವಣಿಗೆ- ತೋರಣ ಮುಹೂರ್ತ, ಭಜನಾ ಕಾರ್ಯಕ್ರಮಕ್ಕೆ ಚಾಲನೆ-ಸಹಸ್ರಾರು ಭಕ್ತರು ಭಾಗಿ

ಬೆಳ್ತಂಗಡಿ: ಮುಂಡೂರು ಗ್ರಾಮದ ಕೋಟಿಕಟ್ಟಿ ಎಂಬಲ್ಲಿ ಅನೇಕ ವರ್ಷಗಳಿಂದ ಪೂಜಿಸಿಕೊಂಡು ಬರುತ್ತಿರುವ ಶ್ರೀ ಮಹಮ್ಮಾಯಿ ಸಾನಿಧ್ಯದಲ್ಲಿ ವರ್ಷಪ್ರತಿ ಶ್ರೀ ಮಾರಿಪೂಜೆ ಕಾರ್ಯಕ್ರಮ ನಡೆಯುತ್ತಾ ಬರುತ್ತಿದೆ.

ಶ್ರೀ ಮಹಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕ ಮಹಾಪೂಜೆಯ ಅಂಗವಾಗಿ ಶ್ರೀ ಮಹಮ್ಮಾಯಿ ಅಮ್ಮನ ನೂತನ ಮೂರ್ತಿ ಮೆರವಣಿಗೆ, ಋತ್ವಿಜರ ಆಗಮನ, ಅಲಯ ಪರಿಗ್ರಂತ ಪ್ರಾರ್ಥನೆ ತೋರಣ ಮುಹೂರ್ತ, ಮಹಮ್ಮಾಯಿ ಅಮ್ಮನವರ ನೂತನ ಮೂರ್ತಿಯ ವೈಭವದ ಮೆರವಣಿಗೆ ಹಾಗೂ ಹಸಿರುವಾಣಿ ಹೊರೆಕಾಣಿಕೆಯ ಮೆರವಣಿಗೆ ಬದ್ಯಾರು ಶಾಲಾ ಬಳಿಯಿಂದ ಕೋಟಿಕಟ್ಟೆ ಶ್ರೀ ಮಹಮ್ಮಾಯಿ ಸನ್ನಿದಿಯ ತನಕ ನಡೆಯಿತು.

ಸಂಜೆ ವೈದಿಕ ವಿಧಿ ವಿಧಾನಗಳು ಪ್ರಾರಂಭಗೊಂಡು, ಶಾರದಾಂಬ ಭಜನಾ ಮಂಡಳಿ ಮುಂಡೂರು ಮತ್ತು ಶ್ರೀ ನಾಗಾಂಬಿಕ ಭಜನಾ ಮಂಡಳಿ ಮಂಗಳಗಿರಿ ಮುಂಡೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ಕೆ.ಎಸ್ ಮತ್ತು ಬೆಳ್ತಂಗಡಿ ಶ್ರೀ ಗುರುನಾರಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ನವಮಿ ಅವರು ಭಜನಾ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಮಿತಿ ಗೌರವ ಅಧ್ಯಕ್ಷರಾಗಿ ಕೆ. ಗುರುವಪ್ಪ ಸಾಲಿಯಾನ್ ಕೇರಿಮಾರ್, ಗೌರವ ಮಾರ್ಗದರ್ಶಕರಾದ ರಂಗನಾಥ ನೂರಿತ್ತಾಯ ಗೋಪಾಲಕೃಷ್ಣ ದೇವಸ್ಥಾನ ಖಂಡಿಗ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಕಡಂಬು, ಪ್ರಕಾರ್ಯದರ್ಶಿ ಸಂತೋಷ್ ಕುಮಾರ್ ಮೇಗಿನಕಿನಿಂಜೆ, ಕೋಶಾಧಿಕಾರಿ ಬೋಜ ಪೂಜಾರಿ ಮಜಲು, ಶ್ರೀ ಮಹಮ್ಮಾಯಿ ಸೇವಾ ಸಮಿತಿ ಅಧ್ಯಕ್ಷ ರಾಜೇಂದ್ರ ಪೂಜಾರಿ, ಪ್ರಕಾರ್ಯದರ್ಶಿ ಅಶೋಕ್ ಕುಮಾರ್ ಕೊಡಕ್ಕಾಲು, ಕೋಶಾಧಿಕಾರಿ ಪ್ರಕಾಶ್ ಪೂಜಾರಿ ಕೋಡೈಲ್, ಪ್ರಮುಖರಾದ ರಮಾನಂದ ಸಾಲಿಯಾನ್ ಮುಂಡೂರು, ರಾಜೀವ ಸಾಲಿಯಾನ್ ಮುಂಡೂರು ಹಾಗೂ ಭಕ್ತರು ಉಪಸ್ಥಿತರಿದ್ದರು.

ನಾಳೆ ಮಹಮ್ಮಾಯಿ ಅಮ್ಮನವರ ಪ್ರತಿಷ್ಠಾ ಮಹಾಕುಂಭಾಭಿಷೇಕ: ಮೇ.8ರಂದು ಬೆಳಿಗ್ಗೆ ಗಂಟೆ 6:30ಕ್ಕೆ ಗಣಹೋಮ, ಪ್ರತಿಷ್ಠಾ ಹೋಮ, ಪ್ರತಿಷ್ಟಾ ಕಲಶ ಪೂಜೆ, ಬೆಳಿಗ್ಗೆ ಗಂಟೆ 9:51ಕ್ಕೆ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಪ್ರತಿಷ್ಠಾ ಮಹಾಕುಂಭಾಭಿಷೇಕ, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮೇ.9ರಂದು ಶ್ರೀ ಮಹಮ್ಮಾಯಿ ಅಮ್ಮನವರ ಪುನಃ ಪ್ರತಿಷ್ಠೆಯ ಅಂಗವಾಗಿ ವಿಶೇಷ ಮಾರಿಪೂಜೆ ನಡೆಯಲಿದ್ದು, ಕ್ಷೇತ್ರದಲ್ಲಿ ಅಪರಾಹ್ನ ಗಂಟೆ 3 ಕ್ಕೆ ಗದ್ದಿಗೆ ಪೂಜೆ, ರಾತ್ರಿ ಗಂಟೆ 9.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

Related posts

ಧರ್ಮಸ್ಥಳವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಅನುಷ್ಠಾನಗೊಳಿಸುವ ಬಗ್ಗೆ ಸಮಾಲೋಚನ ಸಭೆ

Suddi Udaya

ಶಿರ್ತಾಡಿ : ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ: ಆಕ್ಟಿವಾ ಸವಾರೆ, ಶಿಕ್ಷಕಿ ಮೃತ್ಯು

Suddi Udaya

ಆನೆದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಗೌಡರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ಕುಟುಂಬಸ್ಥರಿಗೆ ಸಾಂತ್ವನ – ಪರಿಹಾರ ಧನದ ಚೆಕ್ ಹಸ್ತಾಂತರ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ: ವಿವಿಧ ಡೊಳ್ಳು ಕುಣಿತ, ಕುಣಿತಾ ಭಜನೆ ಹಾಗೂ ಸಾವಿರಾರು ಭಕ್ತರ ಕೂಡುವಿಕೆಯೊಂದಿಗೆ ವೈಭವದ ಹಸಿರುವಾಣಿ ಮೆರವಣಿಗೆ

Suddi Udaya

ಬಂದಾರು : ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ , ದರ್ಶನ ಬಲಿ , ಬಟ್ಟಲು ಕಾಣಿಕೆ, ಮಹಾಪೂಜೆ

Suddi Udaya

ಉಜಿರೆ: ಹರೀಶ್ ಭಂಡಾರಿ ನಿಧನ

Suddi Udaya
error: Content is protected !!