September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗಿರೀಶ್ ಮಟ್ಟಣ್ಣವರ್ ವಿರುದ್ಧ ಪ್ರಕರಣ ದಾಖಲು: ತನಿಖೆಗೆ ಹಾಜರಾಗಲು ನೋಟೀಸ್ ಜಾರಿ ಮಾಡಿದ ಧರ್ಮಸ್ಥಳ ಪೊಲೀಸರು

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲ ಮಾನಿಹಾನಿಕರ ಪೋಸ್ಟ್ ಗಳನ್ನು ಹಾಕಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಈ ಬಗ್ಗೆ ತನಿಖೆಗಾಗಿ ಹಾಜರಾಗಲು ಧರ್ಮಸ್ಥಳ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮ ಇನ್ಟ್ರಾ ಗ್ರಾಂ ನಲ್ಲಿ ಸತ್ಯಕ್ಕೆ ದೂರವಾದ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಡಾ.ಹೆಗ್ಗಡೆಯವರ ವ್ಯಕ್ತಿತ್ವಕ್ಕೆ ಕುಂದುತರುವ ಪ್ರಯತ್ನ ನಡೆಸಿ ಸಮಾಜದಲ್ಲಿ ಅವರ ಸ್ಥಾನಮಾನಕ್ಕೆ ಹಾನಿಯುಂಟು ಮಾಡುವ ಪ್ರಯತ್ನ ನಡೆಸಿದ್ದಲ್ಲದೆ ಸಮಾಜದಲ್ಲಿ ವೈರತ್ವ ದ್ವೇಷ ವೈಮನಸ್ಸು ಉಂಟುಮಾಡಲು ಪ್ರಯತ್ನಿಸಿದ ಬಗ್ಗೆ ಧರ್ಮಸ್ಥಳ ನಿವಾಸಿ ಸುಬ್ರಹ್ಮಣ್ಯ ಪ್ರಸಾದ್ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎ.18 ರಂದು BNS-2023 (u/s-353(2))ಅಂತೆ ಪ್ರಕರಣ‌ ದಾಖಲಿಸಿ ತನಿಖೆ ನಡೆಯುತ್ತಿದೆ.

ತನಿಖೆಗೆ ಹಾಜರಾಗಲು ನೋಟೀಸ್ ಜಾರಿ: ಪ್ರಕರಣ ದಾಖಲಾದ ಬಳಿಕ ಗಿರೀಶ್ ಮಟ್ಟಣ್ಣವರ್ ಅವರ ಬೆಂಗಳೂರು ನಿವಾಸಕ್ಕೆ ಧರ್ಮಸ್ಥಳ ಪೊಲೀಸರು ತೆರಳಿದಾಗ ಮೊಬೈಲ್ ಫೋನ್ ಸ್ವೀಕರಿಸದೆ ಮನೆಯ ಬಾಗಿಲು ತೆರೆಯದೆ ಇದ್ದಾಗ ಪೊಲೀಸರು ವಾಪಸ್ ಬಂದಿದ್ದರು. ಬುರುಡೆ ಪ್ರಕರಣ ಸಂಬಂಧ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಮೇ.7 ರಂದು ಗಿರೀಶ್ ಮಟ್ಟಣ್ಣವರ್ ಹಾಜರಾಗಿರುವ ಬಗ್ಗೆ ಮಾಹಿತಿ ಪಡೆದ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಆರ್ ಗಾಣಿಗೇರ ನೇರವಾಗಿ ಎಸ್ಐಟಿ ಕಚೇರಿಗೆ ತೆರಳಿ ನೋಟೀಸ್ ಸ್ವೀಕರಿಸಿದ ಒಂದು ವಾರದೊಳಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರಾಗುವಂತೆ ಗಿರೀಶ್ ಮಟ್ಟಣ್ಣವರ್ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಿದೆ.

Related posts

ಮಚ್ಚಿನ ಬೂತ್ ಸಂಖ್ಯೆ 181, 182, 183ರ ಮತಗಟ್ಟೆಗೆ ಆರ್‌ಎಸ್‌ಎಸ್ ಮುಖಂಡ ಪ್ರಭಾಕರ್ ಭಟ್ ಕಲ್ಲಡ್ಕ ಭೇಟಿ

Suddi Udaya

ನಾಳೆ(ಜು.6): ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ : ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ: ದಿತಿ ಸಾಂತ್ವನ ನಿಧಿ ವಿತರಣೆ

Suddi Udaya

ಧಮ೯ಸ್ಥಳ ಮಹಾದ್ವಾರದ ಬಳಿ ಪಾದಯಾತ್ರಿಗಳಿಗೆ ಸ್ವಾಗತ

Suddi Udaya

ಇಂದಬೆಟ್ಟು: ಭಾರಿ ಗಾಳಿ ಮಳೆಗೆ ವಾಸ್ತವ್ಯದ ಮನೆಯ ಮೇಲ್ಛಾವಣಿ ಕುಸಿತ, ಪ್ರಾಣಾಪಾಯದಿಂದ ಪಾರು

Suddi Udaya

ಉಜಿರೆ ಎಸ್‌.ಡಿ.ಎಂ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳ ಪೋಷಕರಿಗೆ “ಔಷಧವಾಗಿ ಆಹಾರ” ಕಾರ್ಯಾಗಾರ

Suddi Udaya

ದೇಹದಾನ ನೋಂದಣಿ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದ ವಸಂತ ಪೂಜಾರಿ ಮತ್ತು ಸುಶೀಲ ಹೆಗ್ಡೆ

Suddi Udaya
error: Content is protected !!