September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ 26 ನಾಗರಹಾವಿನ ಮರಿಗಳ ರಕ್ಷಣೆ

ಬೆಳ್ತಂಗಡಿ: ನೆರಿಯ ಗ್ರಾಮದ ಕುಡುಮಡ್ಕದ ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ 26 ನಾಗರಹಾವಿನ ಮರಿ ಹಾಗೂ ತಾಯಿ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.


ಮನೆಯ ಗೋಡೆಯಲ್ಲಿ ಕಳೆದ ಕೆಲವು ದಿನಗಳಿಂದ ನಾಗರಹಾವು ಸುಳಿದಾಡುವುದನ್ನು ಕಂಡ ಶ್ರೀನಿವಾಸಗೌಡ ಎಂಬವರು ಕಕ್ಕಿಂಜೆಯ ಉರಗಮಿತ್ರ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯ ಸ್ನೇಕ್ ಅನಿಲ್ ಅವರಿಗೆ ಮೇ 6ರಂದು ಮಾಹಿತಿ ನೀಡಿದರು. ಈ ವೇಳೆ ಆಗಮಿಸಿದ ಅವರು ತಾಯಿ ನಾಗರಹಾವನ್ನು ಹಿಡಿದಿದ್ದು ಈ ವೇಳೆ ಗೋಡೆಯಲ್ಲಿ ಮರಿಗಳು ಕಂಡು ಬಂದವು. ಗೋಡೆಯಲ್ಲಿದ್ದ 26 ಮರಿಗಳನ್ನು ಹಿಡಿದು ಅವುಗಳನ್ನು ತಾಯಿ ಸಹಿತ ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶದ ಸುರಕ್ಷಿತ ಜಾಗದಲ್ಲಿ ಮೇ 7ರಂದು ಬಿಡಲಾಗಿದೆ.

ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸಹಕರಿಸಿದರು. ಈ ಮರಿಗಳು ಸುಮಾರು 10 ದಿನಗಳ ಹಿಂದೆ ಮೊಟ್ಟೆಯಿಂದ ಹೊರಬಂದಿರಬಹುದು ಎಂದು ಅಂದಾಜಿಸಲಾಗಿದ್ದು ಎಲ್ಲವೂ ಆರೋಗ್ಯ ಪೂರ್ಣವಾಗಿ ಇರುವುದಾಗಿ ಅನಿಲ್ ಅವರು ತಿಳಿಸಿದ್ದಾರೆ.


ಕಳೆದ ಕೆಲವು ದಿನಗಳ ಹಿಂದೆ ನೆರಿಯ ಗ್ರಾಮದ ಗುಂಡಿಕಂಡ ಎಂಬಲ್ಲಿ ಮನೆಯ ಗೋಡೆಯೊಂದರಲ್ಲಿ ಪತ್ತೆಯಾಗಿದ್ದ ನಾಗರಹಾವಿನ 16 ಮೊಟ್ಟೆಗಳನ್ನು ಅನಿಲ್ ಅವರು ರಕ್ಷಿಸಿ ಅವುಗಳಿಗೆ ಕೃತಕ ಕಾವು ನೀಡಿ ಮರಿಗಳು ಹೊರಬಂದ ಬಳಿಕ ಭಾನುವಾರ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು. ಈ ಮೊಟ್ಟೆಗಳನ್ನು ಇರುವೆಗಳ ದಾಳಿಯಿಂದ ರಕ್ಷಿಸಲಾಗಿತ್ತು.

Related posts

ಗೋಳಿಯಂಗಡಿ ಬದ್ರಿಯಾ ಜುಮಾ ಮಸ್ಜಿದ್ ಯಲ್ಲಿ ಈದ್ ಹಬ್ಬ ಆಚರಣೆ

Suddi Udaya

ರಸ್ತೆ ಗುಂಡಿಗೆ ಬಿದ್ದು ಪ್ರಾಣಹಾನಿಯಾದರೆ ಇಂಜಿನಿಯರ್‌ಗಳೇ ಹೊಣೆ: ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವ ಯು.ಟಿ.ಖಾದರ್

Suddi Udaya

ಧರ್ಮಸ್ಥಳ: ಟಾಟಾ ಸುಮೋ ಹಾಗೂ ಸ್ಕೂಟಿ ನಡುವೆ ರಸ್ತೆ ಅಪಘಾತ: ಸ್ಕೂಟಿ ಸವಾರ ಗಂಭೀರ ಗಾಯ

Suddi Udaya

ಭಾರತೀಯ ಜೈನ್‌ ಮಿಲನ್ ಬೆಳ್ತಂಗಡಿ ಮತ್ತು ಧೀಮತಿ ಮಹಿಳಾ ಸಮಾಜ ಉಜಿರೆ ಸಹಯೋಗದಲ್ಲಿ “ಆಹಾರೋತ್ಸವ ಮತ್ತು ಪ್ರತಿಭಾ ಪುರಸ್ಕಾರ”

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಮಾಜಿ ಶಾಸಕ ಕೆ.ವಸಂತ ಬಂಗೇರರ ನಿಧನಕ್ಕೆ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪ ಸಿಂಹ ನಾಯಕ್ ರವರಿಂದ ಸಂತಾಪ

Suddi Udaya
error: Content is protected !!