30.7 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಬರೆಂಗಾಯ ಮಹಮ್ಮಾಯಿ-ದೈವರಾಜ ಗುಳಿಗ ದೈವದ ಪ್ರತಿಷ್ಠೆ ಹಾಗೂ ನೇಮೋತ್ಸವ

ನಿಡ್ಲೆ: ಇಲ್ಲಿಯ ಬರೆಂಗಾಯ ಮಹಮ್ಮಾಯಿ-ದೈವರಾಜ ಗುಳಿಗ ಕ್ಷೇತ್ರದಲ್ಲಿ ವೇದಮೂರ್ತಿ ರವಿ ಕುಮಾರ್ ಭಟ್ ಪಜಿರಡ್ಕ ಇವರ ನೇತೃತ್ವದಲ್ಲಿ ಮಹಮ್ಮಾಯಿ-ದೈವರಾಜ ಗುಳಿಗ ದೈವದ ಪ್ರತಿಷ್ಠೆ ಹಾಗೂ ನೇಮೋತ್ಸವವು ಮೇ 10ರಂದು ನಡೆಯಿತು.

ಬೆಳಿಗ್ಗೆ ಮಹಮ್ಮಾಯಿ ಮತ್ತು ದೈವರಾಜ ಗುಳಿಗ ದೈವದ ಪ್ರತಿಷ್ಠೆ ನಡೆದು ನಂತರ ಬಜಿಲ ಪೂಜೆ (ರಾಶಿ ಪೂಜೆ), ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬೈಲಮಾರಿ ಮತ್ತು ದೈವರಾಜ ಗುಳಿಗ ದೈವದ ನೇಮೋತ್ಸವ ನಡೆಯಿತು.

ಈ ವೇಳೆ ನೂತನ ಕಟ್ಟೆಗೆ ಸಹಕರಿಸಿದ ದಾನಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನೇಮೋತ್ಸವ ಸಮಿತಿಯ ಅಧ್ಯಕ್ಷ ರುಕ್ಮಯ್ಯ ಪೂಜಾರಿ ಪೋರ್ಕಳ, ಕಾರ್ಯದರ್ಶಿ ಧನಂಜಯ ಕಜೆ, ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

Related posts

ನಿಡ್ಲೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಜ.13: ಮೊಗ್ರು ಮೂವರು ದೈವಗಳ ದೈವಸ್ಥಾನ ಮುಗೇರಡ್ಕ ಹಾಗೂ ಶ್ರೀ ದುರ್ಗಾನುಗ್ರಹ ಭಜನಾ ಮಂದಿರ ಸಹಭಾಗಿತ್ವದಲ್ಲಿ ಧಾರ್ಮಿಕ ಮತ್ತು ಸಾoಸ್ಕೃತಿಕ ಕಾರ್ಯಕ್ರಮ

Suddi Udaya

ಮೊರಾರ್ಜಿ ದೇಸಾಯಿ/ಇಂದಿರಾಗಾಂಧಿ/ ಡಾ. ಬಿಆರ್ ಅಂಬೇಡ್ಕರ್/ನಾರಾಯಣ ಗುರು ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Suddi Udaya

ಕೃಷಿಕ ಕಲಾಯ ದಾಮೋದರ ಬಂಗೇರ ನಿಧನ

Suddi Udaya

ಜೆಸಿಐ ಮಡಂತ್ಯಾರು ಆತಿಥ್ಯದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ “ಮೃದಿನಿ” ಸಮ್ಮೇಳನ

Suddi Udaya

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷಾ ಕೇಂದ್ರ

Suddi Udaya
error: Content is protected !!