27.1 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಿಡಿಗಲ್ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮಹಾಸಭೆ: ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಷಾ ಆಯ್ಕೆ

ಬೆಳ್ತಂಗಡಿ: ನಿಡಿಗಲ್ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿಯ ಮಹಾಸಭೆಯು ಮೇ 8 ರಂದು ಗೌರವಾಧ್ಯಕ್ಷ ಸಯ್ಯಿದ್ ಕಾಜೂರು ತಂಙಳ್ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಮಸೀದಿಯ ಖತೀಬ್ ಮುಸ್ತಫಾ ಸಅದಿ, ಜಮಾಅತ್ ಅಧ್ಯಕ್ಷ ಮುಜೀಬ್ ಸಾಹೇಬ್ ಹಾಗೂ ಮುಅಲ್ಲಿಮ್ ನಾಸಿರ್ ಸಅದಿ ಪೆರ್ಡಾಡಿ ಸೇರಿದಂತೆ ಜಮಾತಿನ ಸರ್ವ ಸದಸ್ಯರು ಭಾಗವಹಿಸಿದ್ದರು.
ಸಭೆಯಲ್ಲಿ ಸರ್ವಾನುಮತದಿಂದ ಮುಂದಿನ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಇಸ್ಮಾಯಿಲ್ ಷಾ, ಉಪಾಧ್ಯಕ್ಷರಾಗಿ ಬಿ.ಎನ್. ಹಮೀದ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಎಂ. ರಫೀಕ್, ಜೊತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ಅಲಿ, ಕೋಶಾಧಿಕಾರಿಯಾಗಿ ಪಿ.ಎಚ್. ಹನೀಫ್ ಇವರು ಸರ್ವಾನುಮತದಿಂದ ಆಯ್ಕೆಯಾದರು.

ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಜೀಬ್ ಸಾಹೇಬ್, ಟಿ.ಎಚ್. ಹನೀಫ್ ಮುಸ್ಲಿಯಾರ್, ಪಿ.ಎಚ್. ಹಮೀದ್, ಅಬ್ದುಲ್ ರೆಹಮಾನ್, ಎನ್.ಎಚ್. ಹಂಝ ಮತ್ತು ಕೆ.ಪಿ. ಉಮರಬ್ಬ ಇವರುಗಳನ್ನು ಆರಿಸಲಾಯಿತು.

ಖತೀಬ್ ಮುಸ್ತಫಾ ಸಅದಿ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎನ್.ಎಂ. ರಫೀಕ್ ಕಳೆದ ಸಾಲಿನ ವರದಿ ವಾಚಿಸಿದರು. ಜಮಾಅತ್‌ಗೆ ಸಂಬಂಧಪಟ್ಟ ಇತರ ಪ್ರಮುಖ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಬಿ.ಎನ್. ಹಮೀದ್ ಸ್ವಾಗತಿಸಿದರು.

ಕಾಜೂರು ತಂಙಳ್ ರಿಗೆ ಬೀಳ್ಕೊಡುಗೆ;
ಮಸ್ಜಿದ್ ಗೌರವಾಧ್ಯಕ್ಷರಾಗಿದ್ದು ಈ ಬಾರಿ ಸಕುಟುಂಬಿಕರಾಗಿ ಪವಿತ್ರ ಹಜ್ ಯಾತ್ರೆಗೆ ತೆರಳಲಿರುವ ಗೌರವಾಧ್ಯಕ್ಷ ಸಯ್ಯಿದ್‌ ಕಾಜೂರು ತಂಙಳ್ ಅವರನ್ನು ಈ ವೇಳೆ ಸನ್ಮಾನಿಸಿ ಬೀಳ್ಕೊಡಲಾಯಿತು. ನಿರ್ಗಮನಾಧ್ಯಕ್ಷ ಮುಜೀಬ್ ಸಾಹೇಬ್ ಅವರ ಸೇವೆಯನ್ನೂ ಗೌರವಿಸಿ ಅಭಿನಂದಿಸಲಾಯಿತು.

Related posts

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅ.ಹಿ.ಪ್ರಾ. ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಗೇರುಕಟ್ಟೆ ಫ್ರೆಂಡ್ಸ್ ಮತ್ತು ಗಲ್ಫ್ ಗೈಸ್ ವತಿಯಿಂದ ಜಿ.ಪಿ.ಎಲ್ – 2024 ಕ್ರಿಕೆಟ್ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya

ಕೊಕ್ಕಡ ಅಮೃತ ಗ್ರಾ.ಪಂ. ನಿಂದ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

Suddi Udaya

ಎಸ್.ಡಿ.ಎಂ ಕಾಲೇಜು : ಎರಡು ದಿನಗಳ ‘ ರೀಸರ್ಚ್ ಮೆಥಾಡಾಲಜಿ ‘ ಕಾರ್ಯಗಾರಕ್ಕೆ ಚಾಲನೆ

Suddi Udaya

ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟ: ಉಜಿರೆಯ ಪ್ರತೀಕ್ ಶೆಟ್ಟಿ ರಿಗೆ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ಕಂಚಿನ ಪದಕ

Suddi Udaya

ದೀಪಾವಳಿ ಹಬ್ಬದ ಪ್ರಯುಕ್ತ ಗುರುವಾಯನಕೆರೆ ಸುಪ್ರೀಂ ಎಲೆಕ್ಟ್ರಾನಿಕ್ ಸಂಸ್ಥೆಯಲ್ಲಿ ಮೆಗಾ ಡಿಸ್ಕೌಂಟ್ ಸೇಲ್

Suddi Udaya
error: Content is protected !!