23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಣ್ಣೀರುಪಂಥ : ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

ತಣ್ಣೀರುಪಂಥ: ಗ್ರಾಮ ಪಂಚಾಯತ್ ತಣ್ಣೀರುಪಂಥ ಅರಿವು ಕೇಂದ್ರ ಗ್ರಂಥಾಲಯ ತಣ್ಣೀರುಪಂತ ಇಲ್ಲಿ,”ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ” ಸರಕಾರದ ಆದೇಶದಂತೆ ಮೇ 04 ರಿಂದ ಮೇ11 ವರೆಗೆ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಮೇ 12 ರಂದು ನಡೆಯಿತು.

ಕಾರ್ಯಕ್ರಮಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮ್ಮಯ್ಯ ಜೆ.ಹೆಚ್ , ಕಾರ್ಯದರ್ಶಿ ಆನಂದ್, ಸಂಪನ್ಮೂಲ ವ್ಯಕ್ತಿಯಾಗಿ ಪ್ರವೀಣ್ ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗ ಪಾಲ್ಗೊಂಡರು.

ನಂತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಅಭಿನಂದನೆ ಹೇಳಿ ಶಿಬಿರದ ಪ್ರಯೋಜನವನ್ನು ಮಕ್ಕಳಿಗೆ ತಿಳಿಸಿ ನಿಮ್ಮ ಮುಂದಿನ ಜೀವನದಲ್ಲಿ ಉತ್ತಮ ವಿದ್ಯಾರ್ಥಿಗಳಾಗಿ ಹೊರ ಹೊಮ್ಮಲು ಈ ಶಿಬಿರವು ನಿಮಗೆ ಮಾರ್ಗದರ್ಶನವಾಗಲಿ ಎಂದು ಶುಭ ಹಾರೈಸಿದರು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ತಮ್ಮ ತಮ್ಮ ಪ್ರತಿಭೆಯನ್ನು ಹಾಡು ನಾಟಕ ನೃತ್ಯದ ಮೂಲಕ ವ್ಯಕ್ತಪಡಿಸಿದರು.
ಶಿಬಿರದಲ್ಲಿ ಭಾಗವಹಿಸಿದ 25 ಮಕ್ಕಳಿಗೆ ಪ್ರಮಾಣ ಪತ್ರ, ಪೆನ್ನು, ಪುಸ್ತಕ, ರಬ್ಬರ್, ಪೆನ್ಸಿಲ್, ಕಂಪಾಸ್ ಬಾಕ್ಸ್ ನೀಡಿ ಅಭಿನಂದಿಸಲಾಯಿತು . ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ನೇತ್ರಾವತಿ ಹೋಟೆಲ್ ಮಾಲೀಕರು ಹಣ್ಣು ಹಂಪಲು ನೀಡಿದರು.

Related posts

ಕಳಿಯ ಗ್ರಾ.ಪಂ. ಅಧ್ಯಕ್ಷೆ ಸುಭಾಷಿಣಿ ಕೆ.ಗೌಡ ಹಾಗೂ ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಸಿಇಟಿ ಯಲ್ಲಿ ಎಕ್ಸೆಲ್ ವಿದ್ಯಾರ್ಥಿಗಳ ಅಮೋಘ ಸಾಧನೆ, ಜೆಇಇ, ಎನ್ ಡಿ ಎ, ನಾಟಾ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅತ್ಯುತ್ತಮ ಸಾಧನೆ

Suddi Udaya

ಸೌಜನ್ಯ ಕೊಲೆ ಪ್ರಕರಣ: ಕಾನತ್ತೂರು ಕ್ಷೇತ್ರದಲ್ಲಿ ಪ್ರಮಾಣ ಪೂರೈಸಿದ ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ್ ಜೈನ್

Suddi Udaya

ಮುಂಡಾಜೆ: ಅರಸುಮಜಲು ನಿವಾಸಿ ಗುರುವಪ್ಪ ಪೂಜಾರಿ ನಿಧನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬ್ಯಾಂಕ್ ಆಫ್ ಬರೋಡದ ಡಿಆರ್‌ಎಂ ಯೋಗೀಶ್ ಭೇಟಿ

Suddi Udaya

ಲಾಯಿಲ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!