31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಡುಮಲೆ ದೇಯಿ ಬೈದೆತಿ ಮೂಲಸ್ಥಾನದಲ್ಲಿ ಪ್ರಶ್ನಾ ಚಿಂತನೆ

ಬೆಳ್ತಂಗಡಿ: ಪುತ್ತೂರು ತಾಲೂಕು ನಿಡ್ನಳ್ಳಿ ಗ್ರಾಮದ ಕೆಂಪು ಕೇಪುಲಾಜೆ ನಾಗಬ್ರಹ್ಮ ದೇವಸ್ಥಾನ ಮತ್ತು ಮೊಗೇರ್ಕಳ ದೈವಸ್ಥಾನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವ ಬೆನ್ನಲ್ಲೇ, ಪಡುಮಲೆಯ “ಏರಾಜೆ” ಪುಣ್ಯ ಮಣ್ಣಿನಲ್ಲಿ ದೇಯಿ ಬೈದೆತಿ ಮೂಲಸ್ಥಾನ ಹಾಗೂ ನಾಗ ಬೆರ್ಮೆರ ಮೂಲಸ್ಥಾನದಲ್ಲಿ ಇತ್ತೀಚೆಗೆ ಪ್ರಶ್ನಾ ಚಿಂತನೆ ನಡೆಯಿತು.

ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಮತ್ತು ಕೋಟಿ ಚೆನ್ನಯ ಜನ್ಮಸ್ಥಳ ಮೂಲಸ್ಥಾನ ಟ್ರಸ್ಟ್ ಪಡುಮಲೆ ಇವರ ಸಹಭಾಗಿತ್ವದಲ್ಲಿ ಧನೇಶ್ ವೆಳ್ಳಿಕೂತ್ತು ಕಾಞಂಗಾಡ್ ಹಾಗೂ ಮನಮೋಹನ್ ಪಂಡಿತ್ ದೊಡ್ಡಡ್ಕ ನೇತೃತ್ವದಲ್ಲಿ ಪಡುಮಲೆ ಎರುಕೊಟ್ಟ ನಾಗಬಿರ್ಮೆರ ಕ್ಷೇತ್ರದ ಆವರಣದಲ್ಲಿ ಪ್ರಶ್ನಾ ಚಿಂತನೆ ಜರುಗಿತು. ಈ ಹಿಂದೆ ನಡೆದ ಸ್ವರ್ಣ ಪ್ರಶ್ನಾ ಚಿಂತನೆಯಲ್ಲಿ ಬ್ರಹ್ಮರಗುಂಡ ಸ್ಥಳದ ಪೂರ್ವ ಭಾಗದಲ್ಲಿ ಮುದ್ಧ-ಕಳಲರನ್ನು ಚಿತೆಗೆ ಅರ್ಪಿಸಿದ ಸಮಾಧಿ ಇರುವ ಜಾಗದ ಬಗ್ಗೆ ಉಲ್ಲೇಖವಾಗಿತ್ತು. ದೈವಜ್ಞರು ತಿಳಿಸಿದ ಲಕ್ಷಣಗಳ ಪ್ರಕಾರ ಆ ಜಾಗದ ವಿಶೇಷತೆ, ವೈಶಿಷ್ಟ್ಯಗಳನ್ನು ತಿಳಿಯಬೇಕಾದ ಅವಶ್ಯಕತೆ ಇರುವುದರಿಂದ ಈ ಪ್ರಶ್ನಾ ಚಿಂತನೆ ನಡೆಸಲಾಯಿತು.

ಕೆಂಪು ಕೇಪುಲಾಜಿ ನಾಗಬ್ರಹ್ಮ ದೇವಸ್ಥಾನ ಮತ್ತು ಮೊಗೇರ್ಕಳ ದೈವಸ್ಥಾನ ನಿರ್ಮಾಣ ಕಾರ್ಯವನ್ನು ಈಗಾಗಲೇ ಪ್ರಶ್ನಾ ಚಿಂತನೆಯಲ್ಲಿ ದೈವಜ್ಞರು ತಿಳಿಸಿದ ಸಂಕಲ್ಪದಂತೆ ಆರು ಜಿಲ್ಲೆಗಳ ಮೊಗೇರ ಬಾಂಧವರ ಸಹಕಾರದೊಂದಿಗೆ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಳ ಮೂಲಸ್ಥಾನ ಟ್ರಸ್ಟ್‌ನ ಟ್ರಸ್ಟಿಗಳಾದ ಚರಣ್ ಕೆ, ಶ್ರೀಧರ ಪಟ್ಟ, ಮನೋಜ್ ರೈ ಪೇರಾಲು, ಶ್ರೀ ಕ್ಷೇತ್ರ ಪಡುಮಲೆ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ, ಸ್ಥಳೀಯರಾದ ಬಾಲಕೃಷ್ಣ ರೈ ಏರಾಜೆ, ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್‌ನ ಸದಸ್ಯರಾದ ವಿಜಯ ವಿಕ್ರಮ್ ಕರುಣಾಕರ ಪಾಲ್ತಾಡ್, ಬಾಬು ಪಂಜಪಾದೆ, ರವಿಚಂದ್ರ ಪಡುಬೆಟ್ಟು, ಸತೀಶ್ ಸಾಲಿಯಾನ್, ಬಾಲಕೃಷ್ಣ, ಸಂದೀಪ್ ಅಲಂಗಾರು, ಯಜೇಶ್, ಮಹೇಶ್, ಪಕೀರ ಮೈಂದನಡ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

ಬಂದಾರು: ಬಟ್ಲಡ್ಕ, ಬೀಬಿ ಮಜಲು ಪರಿಸರದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ

Suddi Udaya

ಮೊಗ್ರು :ಮುಗೇರಡ್ಕ ಮೂವರು ದೈವಸ್ಥಾನದಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ

Suddi Udaya

ಬೆಳ್ತಂಗಡಿ ಎಸ್‌ಡಿಪಿಐ ಕಚೇರಿಯಲ್ಲಿ ವಿಧಾನಸಭಾ ಚುನಾವಣೆ ಅವಲೋಕನ ಸಭೆ

Suddi Udaya

ಗರ್ಡಾಡಿ ಧರ್ಮಣ್ಣ ಸಾಲಿಯಾನ್ ನಿಧನ

Suddi Udaya

ಪೆರ್ಲ ಬೈಪಾಡಿ : ಶಾಸಕ ಹರೀಶ್ ಪೂಂಜರ ಗೆಲುವಿನ ಪ್ರಯುಕ್ತ ಸಿದ್ದಿವಿನಾಯಕ ದೇವಸ್ಥಾನದಲ್ಲಿ ರಂಗಪೂಜೆ

Suddi Udaya

ಚಾರ್ಮಾಡಿ: ಅನ್ನಾರು ಕಾಡಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಕಾಡಾನೆ ಸಾವು

Suddi Udaya
error: Content is protected !!