28.1 C
ಪುತ್ತೂರು, ಬೆಳ್ತಂಗಡಿ
September 10, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ರಕ್ತದಾನ ಶಿಬಿರ

ನೆಲ್ಯಾಡಿ: ಸೆಂಟ್ ಅಲ್ಫೋನ್ಸ ಎಸ್‌ಎಂವೈಎಂ ಇದರ ನೇತೃತ್ವದಲ್ಲಿ ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜು, ದೇರ್ಲಕಟ್ಟೆ, ಮಂಗಳೂರು ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಭಾರತೀಯ ಭೂಸೇನೆಯ ಲೆಫ್ಟಿನೆಂಟ್ ಜನರಲ್ ಜಿನೋಜ್ ಪುತ್ತೆನ್ ಪರಂಭಿಲ್ ಉದ್ಘಾಟಿಸಿದರು. ಗಡಿಯಲ್ಲಿ ದೇಶವನ್ನು ಕಾಪಾಡುವ ಯೋಧರಂತೆ, ರಕ್ತದಾನಿಗಳು ಜೀವವನ್ನು ಉಳಿಸುವ ಸೈನಿಕರು ಎಂದು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

ವೇದಿಕೆಯಲ್ಲಿ ಪುಣ್ಯಕ್ಷೇತ್ರದ ವಂದನೀಯ ಫಾ. ಶಾಜಿ ಮಾತ್ಯು, ಎಸ್‌ಎಂವೈಎಂ ಅಧ್ಯಕ್ಷ ಜಿತು, ಉಪಾಧ್ಯಕ್ಷೆ ದಿಶಾ, ಸಿಸ್ಟರ್ ಲಿಸ್ ಮಾತ್ಯು, ಮಾತೃವೇದಿಕೆಯ ಸುಜಾ ಜೇಮ್ಸ್, ಕ್ರೆಡಿಟ್ ಯೂನಿಯನ್‌ನ ಶಿಬು, ವಿನ್ಸೆಂಟ್ ಡಿ ಪೌಲ್ ಸೊಸೈಟಿಯ ಸನ್ನಿ, ಟ್ರಸ್ಟಿಗಳಾದ ಜಾನ್ಸನ್ ಹಾಗೂ ರಾಜೇಶ್, ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನ ಡಾ. ಮಂಜುಷ ಮೊದಲಾದವರು ಉಪಸ್ಥಿತರಿದ್ದರು.ಅನೇಕ ಯುವಕರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ರಕ್ತದಾನ ಮಾಡಿ ಕಾರ್ಯಕ್ರಮಕ್ಕೆ ಯಶಸ್ಸು ತಂದರು. ಸಮಾಜ ಸೇವೆಯೊಂದಿಗೆ ಜೀವ ರಕ್ಷಿಸುವ ಮಹತ್ವದ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ಅಭಿನಂದನೆಗಳು ವ್ಯಕ್ತವಾಗಿವೆ.

Related posts

ಶಿರ್ಲಾಲು‌ ಗ್ರಾ.ಪಂ. ವಿಕಲಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ವಾಣಿ ಕಾಲೇಜು: ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ

Suddi Udaya

ಅಳದಂಗಡಿ ವಲಯ ಬಡಗಕಾರಂದೂರು ಕಾರ್ಯಕ್ಷೇತ್ರದ ಎ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಬೆಳಾಲು: ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣ: ಇಬ್ಬರು ಆರೋಪಿಗಳು ಐದು ದಿನ ಪೊಲೀಸ್ ಕಸ್ಟಡಿಗೆ

Suddi Udaya

ಬೆಳ್ತಂಗಡಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಮತ್ತು ಬೃಹತ್ ಪಂಜಿನ ಮೆರವಣಿಗೆ ಕಾರ್ಯಕ್ರಮ

Suddi Udaya

ಭಾರೀ ಮಳೆ ಹಿನ್ನೆಲೆ: ನಾಳೆ(ಆ.3) ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ತುರ್ತು ಸಭೆ

Suddi Udaya
error: Content is protected !!