23.8 C
ಪುತ್ತೂರು, ಬೆಳ್ತಂಗಡಿ
October 8, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಕ್ರಮ ಜೂಜಾಟದ ಮೇಲೆ ವೇಣೂರು ಪೊಲೀಸರ ದಾಳಿ: 17 ಮಂದಿ ಆರೋಪಿಗಳ ಬಂಧನ

ಬೆಳ್ತಂಗಡಿ : ಕರಿಮಣೇಲು ಗ್ರಾಮದ ಬೋಳಾರಗುತ್ತು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಉಳಾಯಿ-ಪಿದಾಯಿ ಜೂಜಾಟ ಆಡುತ್ತಿದ್ದ ಬಗ್ಗೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮೇ.17 ರಂದು ರಾತ್ರಿ 7:30 ಕ್ಕೆ ದಾಳಿ ಮಾಡಿದ್ದಾರೆ.

ಜೂಜಾಟ ಆಡುತ್ತಿದ್ದ ಪಡಂಗಡಿಯ ಅಶೋಕ್(37) ,ಪಡಂಗಡಿಯ ವಿತೇಶ್(33), ವೇಣೂರು ಕರಿಮಣೇಲಿನ ರಾಜೇಶ್(35), ವೇಣೂರು ಕತ್ತೋಡಿಬೈಲಿನ ರಮೇಶ್(40) , ಕುಕ್ಕೇಡಿ ಬರ್ನತ್ಯಾರಿನ ರಾಜೇಶ್(42), ಕಾರ್ಕಳ ಮುಗಿರಡ್ಡಸ ಪ್ರಮೀತ್(35), ನಾರಾವಿ ಅರಸಿಕಟ್ಟೆಯ ಕರುಣಾಕರ(38), ವೇಣೂರು ಶಿವಾಜಿನಗರದ ಶೇಖರ್(50), ಮರೋಡಿಯ ಸಧಾಕರ(42), ಗರ್ಡಾಡಿಯ ನವಾಜ್(26), ಗೇರುಕಟ್ಟೆ ಜನತಾಕಾಲೋನಿಯ ಇಕ್ಬಾಲ್(37), ಕುಕ್ಕೇಡಿಯ ಕಿರಣ್(35), ವೇಣೂರು ಶಿವಾಜಿನಗರದ ಲಕ್ಷ್ಮಣ(51), ಬೆಳ್ತಂಗಡಿ ಲಾಯಿಲದ ನಿಸಾರ್(47), ಬೆಳ್ತಂಗಡಿ ತೆಂಕಎಡಪದವು ಜೀವಂಧರ್ ಕುಮಾರ್(36), ಗುರುವಾಯನಕೆರೆಯ ಸಂತೋಷ್(37), ಸೊಣಂದೂರು ಅಬ್ದುಲ್ ಅಜೀಜ್(40) ಬಂಧಿತ 17 ಮಂದಿ ಆರೋಪಿಗಳು.

ಆರೋಪಿಗಳು ಜೂಜಾಟಕ್ಕೆ ಬಳಸಿದ 69 ಸಾವಿರ ರೂಪಾಯಿ ಹಣ , ಎರಡು ಆಟೋ ರಿಕ್ಷಾ, 20 ಮೊಬೈಲ್ ಫೋನ್ ವಶಪಡಿಸಿಕೊಂಡು ವೇಣೂರು ಪೊಲೀಸ್ ಠಾಣೆಯಲ್ಲಿ 17 ಮಂದಿ ಆರೋಪಿಗಳ ವಿರುದ್ಧ ಕಲಂ 87 ಕೆ.ಪಿ.ಆಕ್ಟ್,112 BNS ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ, ಎಎಸ್ಐ ವೆಂಕಟೇಶ್,ಸಿಬ್ಬಂದಿ ಅಬ್ದುಲ್ ಲತೀಫ್, ಕೃಷ್ಣ, ವಸಂತ, ಮೋಹನ, ರಾಕೇಶ್, ಕಾಳಮ್ಮ, ಕಾವೇರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಸುಣ್ಣದಕೆರೆ ಅಂಗನವಾಡಿ ಕೇಂದ್ರದ ನಿವೃತ್ತ ಕಾರ್ಯಕರ್ತೆ ವಸಂತಿರವರಿಗೆ ಸನ್ಮಾನ

Suddi Udaya

ಕುವೆಟ್ಟು ಸ.ಉ.ಪ್ರಾ.ಶಾಲೆಯ ಎಲ್ ಕೆ ಜಿ -ಯು ಕೆ ಜಿ ವಿಭಾಗದ ಹೊರಾಂಗಣ ಆಟದ ಸಲಕರಣೆಗಳ ಉದ್ಘಾಟನೆ

Suddi Udaya

ಅಭಿವೃದ್ಧಿಯ ಹರಿಕಾರ, ಶಾಸಕ ಹರೀಶ್ ಪೂಂಜರವರ ಹುಟ್ಟುಹಬ್ಬ ಪ್ರಯುಕ್ತ ವೇಣೂರು ಕ್ರಿಸ್ತರಾಜ ನವಚೇತನ ವಿಶೇಷ ಶಾಲೆಯ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಹರೀಶ್ ಪೂಂಜ ಅಭಿಮಾನಿ ಬಳಗ

Suddi Udaya

ಊಟಕ್ಕಿಲ್ಲದ ಉಪ್ಪಿನಕಾಯಿಯಂತಿರುವ ಬಳಂಜದ ಮೊಬೈಲ್ ಟವರ್: ಬಳಂಜ- ನಾಲ್ಕೂರಿನಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾದ ಗ್ರಾಹಕರು

Suddi Udaya

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ತಂಗಡಿ ಸುವರ್ಣ ಆರ್ಕೇಡ್ ಗೆ ಸ್ಥಳಾಂತರ

Suddi Udaya

ಪುದುವೆಟ್ಟು ನಿಡ್ವಾಳ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಸಂಪರ್ಕ ರಸ್ತೆಗೆ ಅನುದಾನ ನೀಡಿ ಅಭಿವೃದ್ದಿ ಪಡಿಸುವಂತೆ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya
error: Content is protected !!