24.9 C
ಪುತ್ತೂರು, ಬೆಳ್ತಂಗಡಿ
October 8, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪತಿಯ ವರದಕ್ಷಿಣೆ ಕಿರುಕಳಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ-ಪತಿ ಅಂಧರ್

ಬೆಳ್ತಂಗಡಿ: ಮದ್ಯಪಾನ ಸೇವಿಸಿ ಪ್ರತಿದಿನ ಪತಿ ನೀಡುತ್ತಿದ್ದ ಕಿರುಕಳಕ್ಕೆ ಬೆಸತ್ತು ಮನನೊಂದು ಪತ್ನಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾರೆಂಕಿ ಗ್ರಾಮದ ಬಂಗೇರುಕಟ್ಟೆ ದೋಟ ಎಂಬಲ್ಲಿ ಮೇ 15 ರಂದು ನಡೆದಿದೆ.

ಮೃತಪಟ್ಟ ಮಹಿಳೆ ಸಂಧ್ಯಾ (27ವ) ಆಗಿದ್ದು ಅವರ ಸಹೋದರ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಮೇ 16 ರಂದು ದೂರು ನೀಡಿದ್ದು ಪತಿ ಧನಂಜಯ್ ಮೇಲೆ ವರದಕ್ಷಿಣೆ ನಿಷೇಧ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದು ಆತನನ್ನು ಪೊಲೀಸರು ಮೇ 17ರಂದು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಯ ವಿವರ:
ಸಂಧ್ಯಾ ಎಂಬವರನ್ನು ಕಳೆದ ಮೂರು ವರ್ಷದ ಹಿಂದೆ ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ದೋಟ ವಾಸಿ ಧನಂಜಯ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದು ಅವರಿಗೆ 1 ವರ್ಷ 7 ತಿಂಗಳ ಹೆಣ್ಣು ಮಗು ಇದೆ. ಧನಂಜಯ ಪ್ರತೀ ದಿನ ಮದ್ಯಪಾನ ಮಾಡುತ್ತಿದ್ದು ಈ ಬಗ್ಗೆ ಮೃತ ಸಂಧ್ಯಾ ಆಕೆಯ ತಾಯಿಗೆ ಕರೆ ಮಾಡಿ ಗಂಡ ಪ್ರತಿ ನಿತ್ಯ ಮದ್ಯಪಾನ ಮಾಡಿ ಚಿನ್ನಾಭರಣ ಮತ್ತು ಹಣ ನೀಡಬೇಕೆಂದು ಕಿರುಕುಳ ನೀಡುತ್ತಿರುವುದಾಗಿ ತಿಳಿಸುತ್ತಿದ್ದಳು. ಈ ಬಗ್ಗೆ ತಾಯಿ ಇವತ್ತಲ್ಲಾ ನಾಳೆಯಾದರೂ ಸರಿಯಾಗಬಹುದೆಂದು ತಿಳಿದು ಸಮಾಧಾನ ಮಾಡುತ್ತಿದ್ದರು. ಮೇ 15ರಂದು ರಾತ್ರಿ ಸುಮಾರು 9.00 ಗಂಟೆಗೆ ಸಂಧ್ಯಾಳು ತನ್ನ ತಾಯಿಗೆ ಕರೆ ಮಾಡಿ ಇನ್ನು ಮುಂದೆ ನನ್ನ ಮಗುವನ್ನು ನೀವೇ ನೋಡಿಕೊಳ್ಳಿ ನನ್ನ ಜೀವನ ಮುಗಿದಂತೆ ಎಂದು ಕರೆ ಮಾಡಿ ತಿಳಿಸಿದ್ದರು. ತದನಂತರ ಆಕೆಯ ಮೊಬೈಲ್‌ಗೆ ಕರೆ ಮಾಡಿದಾಗ ನೆರೆಯವರು ಯಾರೋ ಮೊಬೈಲ್ ರಿಸೀವ್ ಮಾಡಿ ಅವರು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಆಕೆಯನ್ನು ಆಂಬುಲೆನ್ಸ್‌ನಲ್ಲಿ ಬಂಟ್ವಾಳ ಆಸ್ಪತ್ರೆಗೆ ಕರೆದುಕೊಂಡು ಧನಂಜಯ್ ಹೋಗಿರುವ ವಿಚಾರ ತಿಳಿದು ಕೂಡಲೆ ಆಸ್ಪತ್ರೆಗೆ ಹೋದಾಗ ಅಕ್ಕ ಸಂಧ್ಯಾಳನ್ನು ಪರೀಕ್ಷಿಸಿದ ವೈದ್ಯರು ಈಕೆ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ವಿಚಾರ ತಿಳಿಸಿರುತ್ತಾರೆ.

ಮೃತೆ ಸಂಧ್ಯಾ(27) ಎಂಬವರು ಆಕೆಯ ಗಂಡನ ಕಿರುಕುಳದಿಂದ ಅಥವಾ ಇನ್ಯಾವುದೋ ಉದ್ದೇಶದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನನೊಂದು ಮೇ 15ರಂದು ರಾತ್ರಿ 9.00 ಗಂಟೆಯಿಂದ 10.15ರ ಮದ್ಯ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಇವರ ಮರಣದ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕೆಂದ ಮೃತಪಟ್ಟ ಸಂಧ್ಯಾರ ಸಹೋದರ ಬಂಟ್ವಾಳ ತಾಲೂಕಿನ ಸಜೀಪಮೂಡು ಕೋಮಲಿ ನಿವಾಸಿ ಸಂದೀಪ್ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸರು ವರದಕ್ಷಿಣೆ ನಿಷೇಧ ಕಾಯಿದೆ ಅಡಿ, ಬಿಎನ್‌ಎಸ್ ಅಕ್ರಂ ೮೦,೮೫, ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಬಡಗಕಾರಂದೂರು ಶಾಲೆಯಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಯಶಸ್ವಿ

Suddi Udaya

ಬೆಳ್ತಂಗಡಿ ಸರಕಾರಿ ಪ.ಪೂ. ಕಾಲೇಜಿನಲ್ಲಿ ವೈದ್ಯಕೀಯ ತಪಾಸಣಾ ಶಿಬಿರ

Suddi Udaya

ಸುಲ್ಕೇರಿ ಗ್ರಾ.ಪಂ. ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಧರ್ಮಸ್ಥಳ: ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ ಹಾಗೂ ಖ್ಯಾತ ಚಲನಚಿತ್ರ ನಟ ಸಿಹಿಕಹಿ ಚಂದ್ರು ರವರಿಂದ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ಆಶ್ರಯದಲ್ಲಿ ಇಕೋಫ್ರೆಶ್ ಎಂಟರ್‌ ಪ್ರೈಸಸ್ ಬೆಳ್ತಂಗಡಿ-ಪುತ್ತೂರು ಇದರ ಸಹಯೋಗದೊಂದಿಗೆ ರೈತರಿಗಾಗಿ ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟನೆ

Suddi Udaya

ಉಪ ವಲಯ ಅರಣ್ಯಾಧಿಕಾರಿ ಉಜಿರೆಯ ಕಮಲಾ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆ

Suddi Udaya
error: Content is protected !!