ಬೆಳ್ತಂಗಡಿ: 1976 ಮೇ 1ರಂದು 98 ಸದಸ್ಯರೊಂದಿಗೆ ಆರಂಭಗೊAಡ ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಸಹಕಾರಿ ಮಾದರಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಗ್ರಾಹಕರಿಗಾಗಿ, ಶುದ್ಧ ಹಾಗೂ ಗುಣಮಟ್ಟದ ಹಾಲನ್ನು ಖರೀದಿಸಿ ನೂರಾರು ರೈತರ ಬಾಳಿಗೆ ಬೆಳಕಾಗಿದ್ದು, ಸಂಘವು ಇಂದು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ ಎಂದು ಸಂಘದ ಅಧ್ಯಕ್ಷ ಪ್ರಶಾಂತ್ ವೇಗಸ್ ತಿಳಿಸಿದ್ದಾರೆ.
ಅವರು ಮೇ 18ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ಮೇ ೨೧ರಂದು ನಡೆಯಲಿದ್ದು, ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಳದಂಗಡಿ ಚರ್ಚ್ನ ಧರ್ಮಗುರು ರೇ|ಫಾ| ಎಲಿಯಾಸ್ ಡಿ ಸೋಜ ಆಶೀರ್ವಚನ ನೀಡಲಿದ್ದು, ಅಳದಂಡಿ ಅರಸರಾದ ಡಾ.ಪದ್ಮಪ್ರಸಾದ ಅಜಿಲ ಉತ್ತಮ ಹೈನುಗಾರರಿಗೆ ಸನ್ಮಾನ, ಶಾಸಕ ಹರೀಶ್ ಪೂಂಜ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಸಚಿವ ರಮಾನಾಥ ರೈ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಒಕ್ಕೂಟದ ವ್ಯ.ನಿರ್ದೆಶಕ ವಿವೇಕ ಡಿ, ಕೆಪಿಸಿಸಿ ಪ್ರ.ಕಾರ್ಯದರ್ಶಿ ರಕ್ಷಿತ್ ಶಿವರಾಂ, ಒಕ್ಕೂಟದ ನಿರ್ದೇಶಕ ಪ್ರಭಾಕರ್ ಎಚ್, ದ.ಕ ಜಿಲ್ಲಾ ಯೂನಿಯನ್ ನಿರ್ದೇಶಕ ಸಹಕಾರ ರತ್ನ ಸತೀಶ್ ಕೆ. ಕಾಶಿಪಟ್ಣ, ಉದ್ಯಮಿ ಸತೀಶ್ ಪೂಜಾರಿ ನಡಾಯಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
1976ರಲ್ಲಿ ಸಂಘ ಸ್ಥಾಪನೆ:
1976ರಲ್ಲಿ ನೋಂದವಣೆಯಾದ ನಮ್ಮ ಸಂಘದ ಸ್ಥಾಪಕರು ರೆ.ಫಾ. ಬೆಂಜಮಿನ್ ಡಿ.ಸೋಜರವರು, ಆ ದಿನಗಳಲ್ಲಿ ಕಿತ್ತು ತಿನ್ನುವ ಬಡತನ,ಒಷ್ಟೊತ್ತಿಗೆ ಊಟಕ್ಕೂ ಕಷ್ಟದ ದಿನಗಳು. ಮಂಗಳೂರು ಧರ್ಮಪ್ರಾಂತ್ಯದ ಆಧೀನದಲ್ಲಿದ್ದ ಕಾರಿತಾಸ್ ಸಂಸ್ಥೆಯ (ಸಿ.ಒ.ಡಿ,ಪಿ) ಸಹಕಾರದಿಂದ ಈ ಪ್ರದೇಶದ ಆನೇಕ ಗ್ರಾಮಗಳಲ್ಲಿನ ಜನರನ್ನು ಬಡತನದಿಂದ ಮೇಲೆತ್ತುವ ಕೆಲಸ ಕಾರ್ಯಗಳು ಧರ್ಮಗುರುಗಳ ಮುಖಾಂತರ ನಡೆಯುತ್ತಿದ್ದು ಆ ಸಂದರ್ಭದಲ್ಲಿ ಅವರ ಮನಸ್ಸಿನಲ್ಲಿ ಮೊಳಕೆಯೊಡೆದ ಕನಸು ಈ ಸಂಘದ ಸ್ಥಾಪನೆಯಾಗಿದೆ. ಸುತ್ತ ಮುತ್ತಲಿನ ಏಳೆಂಟು ಗ್ರಾಮಗಳ ಸುಮಾರು ೯೮ರೈತರನ್ನು ಒಟ್ಟುಗೂಡಿಸಿದರು ಅಂದಿನ ಪಾಲು ಬಂಡವಾಳ ರೂ.2,580 ಅವರೇ ಕಟ್ಟಿ, ಊರಿನ ಯುವಕರ ಕಾರ್ಯಚಟುವಟಿಕೆಗಾಗಿ ಸ್ಥಾಪಿಸಿದ ಯುವಕ ಮಂಡಲದ ಒಂದು ಕೋಣೆಯಲ್ಲಿ ಸಂಘ ಕಾರ್ಯಾರಂಭವಾಯಿತು. ಇದರ ಮೂಲ ಉದ್ದೇಶ ನಿರುದ್ಯೋಗ ಮತ್ತು ಬಡತನವನ್ನು ನಿವಾರಿಸಿ ಆರ್ಥಿಕತೆಯನ್ನು ಸಾಧಿಸುವುದಾಗಿತ್ತು, ಎಂದು ನಮ್ಮ ಹಿರಿಯರು ಹೇಳುತಿದ್ದರು ಎಂದು ತಿಳಿಸಲು ಅಭಿಮಾನವಾಗುತ್ತಿದೆ ಎರಂದು ಹೇಳಿದರು.
ಹತ್ತು ವರ್ಷ ಸಂಘ ಮುನ್ನಡೆಸಿದ್ದರು:
ಧರ್ಮಗುರುಗಳು 10 ವರ್ಷಗಳ ಕಾಲ ಸ್ಥಾಪಕ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದರು. ಸದಸ್ಯರಿಗೆ ಬ್ಯಾಂಕ್‌ಗಳಿAದ ಸಾಲಮಾಡಿ ಎಮ್ಮೆಗಳನ್ನು ಕೊಡಿಸಿದರು. ಜೋಸೆಫ್ ಸಾಂತು ಮೇಯರ್ ಕಾರ್ಯದರ್ಶಿಯಾಗಿದ್ದರು. ಹಿಲಾರಿ ಡಿಸೋಜರವರು ಹಾಲನ್ನು ಸಂಗ್ರಹಿಸಿ ಗುರುವಾಯನಕೆರೆ ಬೆಳ್ತಂಗಡಿ ಪೇಟೆ ಮತ್ತು ಮನೆ ಮನೆಗಳಿಗೆ ಸೈಕಲ್‌ನಲ್ಲಿ ಹಾಲನ್ನು ಕೊಂಡುಹೋಗಿ ಮಾರಾಟ ಮಾಡುತಿದ್ದರು. ಇದರಿಂದ ಸಂಘವು ಅನುಭವಿಸಿದ ಕಷ್ಟ ನಷ್ಟಗಳೇ ಹೆಚ್ಚು ಹೀಗೆ ೧೯೮೬ರ ವರೆಗೆ ಅಲ್ಪ ವ್ಯವಹಾರ ನಡೆಸಿ ಸಂಘವು1986 ಮಾರ್ಚ್ ತಿಂಗಳಲ್ಲಿ ತನ್ನ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತ್ತು. ಈ ಅವಧಿಯಲ್ಲಿ ವೆಂಕಟೇಶ್, ಪ್ರಭಾಕರ, ಮಥಾಯಸ್ ಡಿಸೋಜ, ಶ್ರೀಧರ ಶೆಟ್ಟಿ, ಇವರುಗಳು ಅಲ್ಪಕಾಲಕ್ಕೆ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿರುತ್ತಾರೆ ಎಂದು ತಿಳಿಸಿದರು.
ಕೆ.ಎಂ.ಎಫ್‌ನೊಂದಿಗೆ ವಿಲೀನ:
1988 ಜೂ. 7ರಂದು ಕೆ,ಎಂ.ಎಫ್.ನ ವಿಸ್ತರಣಾಧಿಕಾರಿಯಾಗಿದ್ದ, ಸಿ.ಪಿ ರೆಡ್ಡಿಯವರ ಮಾರ್ಗದರ್ಶನದಲ್ಲಿ ಅಳದಂಗಡಿ ಹಾಲು ಉತ್ಪಾದಕರ ಸಂಘವು ಪುನರ್‌ಉದ್ಘಾಟನೆಗೊಂಡು ಕೆ.ಎಂ.ಎಫ್‌ನೊAದಿಗೆ ವಿಲೀನಗೊಂಡಿತು. ಸಂಘದ, ವ್ಯಾಪ್ತಿ ಬಡಗಕಾರಂದೂರು, ಸುಲೈರಿಮೊಗ್ರು, ಶಿರ್ಲಾಲು, ಬಳಂಜ, ಪಿಲ್ಯ, ನಾವರ, ಕುದ್ಯಾಡಿ, ಗ್ರಾಮಗಳನ್ನು ಒಳಗೊಂಡಿತ್ತು. ಸಿಪ್ರಿಯನ್ ಫೆರ್ನಾಂಡಿಸ್ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದರು, ೧೯೯೦ ಮಾ.೩ ರಂದು ಹೆನ್ರಿ ಡಿಸೋಜರವರು ಕಾರ್ಯದರ್ಶಿಯಾಗಿ ನೇಮಕಗೊಂಡು 27 ವರ್ಷಗಳ ಸೇವೆ ಸಲ್ಲಿಸಿದ್ದರು ಎಂದು ವಿವರಿಸಿದರು.
ಸಂಘಕ್ಕೆ ಸ್ವಂತ ಕಟ್ಟಡ:
ಸಂಘವು ಜೈಕಿಸಾನ್‌ಯುವಕ ಮಂಡಲದಕಟ್ಟಡದಲ್ಲಿ ಬಾಡಿಗೆಯಲ್ಲಿಕಾರ್ಯನಿರ್ವಹಿಸುತ್ತಿದ್ದು ಸಂಘಕ್ಕೆ ಸ್ವಂತ ಜಾಗದ ಅವಶ್ಯಕತೆ ಇದ್ದುದರಿಂದ 1997ರಲ್ಲಿ ಸಂಘದ ಅಧ್ಯಕ್ಷ ಶಂಕರ್ ಭಟ್‌ರವರು ಹಾಗೂ ಆಡಳಿತ ಮಂಡಳಿ ಸೇರಿ ಜೈಕಿಸಾನ್ ಯುವಕ ಮಂಡಲಕ್ಕೆ ಸಲ್ಲಿಸಿದ ಮನವಿಯಂತೆ 1998 ರಲ್ಲಿ 3 ಸೆಂಟ್ಸ್ ಜಾಗವನ್ನು ದಾನ ಶಾಸನದ ಮೂಲಕ ಪಡೆಯಲಾಯಿತು. ೧೯೯೮ ರಲ್ಲಿ ಸಂಘದ ಅಧ್ಯಕ್ಷ ಎಲಿಯಸ್ ಪಾಯ್ಸ್ ಹಾಗೂ ಆಡಳಿತ ಮಂಡಳಿಸೇರಿ ಸಂಘಕ್ಕೆ ಸ್ವಂತಕಟ್ಟಡದ ಕನಸು ನನಸಾಗಲು ಪ್ರಯತ್ನಿಸಿದರು ಎಲ್ಲರ ಸಹಕಾರದೊಂದಿಗೆ ನಿರ್ಮಾಣವಾದ ಕಟ್ಟಡವನ್ನು ೨,೦೦೦ ಮೇ ೧೦ರಂದು ಆಗಿನ ಉಸ್ತುವಾರಿ ಸಚಿವ ರಮಾನಾಥರೈ ಉದ್ಘಾಟಿಸಿದ್ದರು. ಫಾ| ಜೋಸೆಫ್ ಲೋಬೋ ಆಶೀರ್ವಚನ ನೀಡಿದರು. ಒಕ್ಕೂಟದ ಅಧ್ಯಕ್ಷರಾದ ಸೀತಾ ರಾಮರೈ ಶುಭ ಹಾರೈಸಿದ್ದರು.
2 ಸಾವಿರ ಲೀಟರ್‌ನ ಬಿ.ಎಂ.ಸಿ:
ಹಿಂದೆ ಸಂಘದ ಹಾಲು ಪುತ್ತೂರಿನ ಚಿಲ್ಲಿಂಗ್ ಸೆಂಟರ್‌ಗೆ ಹೋಗುತ್ತಿತ್ತು. ಸಂಘದಲ್ಲಿ ಬಿ.ಎಂ.ಸಿ ಸ್ಥಾಪನೆಗೆ ಒಕ್ಕೂಟಕ್ಕೆ ನೀಡಿದ ಮನವಿಯಂತೆ 2006 ಫೆ.26 ರಂದು 2000 ಲೀಟರ್ ಸಾಮರ್ಥ್ಯದ ಬಿ.ಎಂ.ಸಿಯನ್ನು ಸಂಘದಲ್ಲಿ ಪ್ರಾರಂಭಿಸಲಾಯಿತ್ತು. ನಂತರ ಒಕ್ಕೂಟಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಸಂಘ ನೀಡಿದ್ದರಿಂದ ೨೦೧೩ ಫೆ.೨೦ರಂದು ರಲ್ಲಿಒಕ್ಕೂಟದಿಂದ ಜಿಲ್ಲಾಮಟ್ಟದ ಉತ್ತಮ ಬಿ.ಎಂ.ಸಿ ಎಂಬ ಗೌರವದ ಪ್ರಶಸ್ತಿಯನ್ನು ಸಂಘ ಪಡೆದಿದೆ. ಸಂಘದ ಸಭೆಗಳನ್ನು ನಡೆಸಲು ಸಭಾಭವನಕ್ಕಾಗಿ ೨೦೧೩ ರಲ್ಲಿಅಧ್ಯಕ್ಷ ಪ್ರಸಾದ್ ಪಿಂಟೋ ಹಾಗೂ ಆಡಳಿತ ಮಂಡಳಿಯವರು ಸೇರಿ ೨೦೧೩ರಲ್ಲಿ `ಶ್ವೇತ ಭವನ’ ಎಂಬ ಸಭಾಭವನವನ್ನು ಸ್ಥಾಪಿಸಿದರು ಎಂದು ಹೇಳಿದರು. ಸಂಘದಲ್ಲಿ ಕಾರ್ಯದರ್ಶಿಯಾಗಿ ೨೭ ವರ್ಷಗಳ ಸೇವೆ ನೀಡಿದ ಹೆನ್ರಿ ಡಿ ಸೋಜ ೨೦೧೭ ರಲ್ಲಿ ನಿವೃತ್ತಿಯಾದ್ದು, ನಂತರ ವಿಲೇಡ್ ಫೆರ್ನಾಂಡಿಸ್ ಕಾರ್ಯದರ್ಶಿಯಾಗಿ ಸೇವೆಗೆ ಸೇರಿದ್ದರು.
3 ಸಾವಿರ ಲೀಟರ್‌ನ ಬಿ.ಎಂ.ಸಿ:
ಸಂಘದ ಹಾಲಿನ ಸಂಗ್ರಹ ಹೆಚ್ಚದ್ದರಿಂದ ೨೦೧೮ರಲ್ಲಿ ಸಂಘಕ್ಕೆ ೩ಸಾವಿರ ಲೀಟರ್ ಬಿ.ಎಂ.ಸಿ ನೀಡಬೇಕೆಂದು ಒಕ್ಕೂಟವನ್ನು ಕೇಳಿಕೊಳ್ಳಲಾಯಿತು. 2019 ರಲ್ಲಿ 3 ಸಾವಿರ ಲೀಟರ್‌ನ ಬಿ.ಎಂ.ಸಿ ಸಂಘದಲ್ಲಿ ಆರಂಭವಾಯಿತು. ನಂತರದ ದಿನಗಳಲ್ಲಿ ಸದಸ್ಯರ ಉತ್ತಮ ಸಹಕಾರದಿಂದ ಹೆಚ್ಚು ಹೆಚ್ಚು ಹಾಲು ಉತ್ಪಾದನೆಯ ಮೂಲಕ ಸಂಘವು ಲಾಭದತ್ತ ಮುನ್ನಡೆಯಿತು. ಪ್ರಸ್ತುತ ಸಂಘದಲ್ಲಿ 378 ರಲ್ಲಿ ಸದಸ್ಯರಿದ್ದು, ರೂ75,600 ಪಾಲು ಬಂಡವಾಳ, ರೂ. 31,80,528 ಕ್ಷೇಮನಿಧಿ, ರೂ. 13,39,845 ಕಟ್ಟಡ ನಿಧಿ ಇದೆ. ಕೃಷಿ ಪತ್ತಿನ ಸಂಘ ಅಳದಂಗಡಿಯಲ್ಲಿ ರೂ.39,80,380 ಠೇವಣಿಯಾಗಿ ಹೂಡಿಕೆ ಮಾಡಲಾಗಿದೆ. ವರ್ಷಕ್ಕೆ ರೂ.5 ಕೋಟಿ ವ್ಯವಹಾರವನ್ನು ಮಾಡಿದ್ದು. ಪ್ರಸ್ತುತ ದಿನಕ್ಕೆ 2750 ಲೀಟರ್ ಹಾಲು ಸಂಗ್ರಹಣೆ ಮಾಡುತ್ತಿದ್ದು 2025-2026ರಲ್ಲಿ ಅಂದಾಜು ರೂ. 21 ಲಕ್ಷ ಲಾಭಗಳಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಶಿಕ್ಷಣಕ್ಕೆ ಪ್ರೋತ್ಸಾಹ:
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಒಕ್ಕೂಟದ ಅನುದಾನಗಳು ಸಂಘದ ಸದಸ್ಯರಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಹಾಲು ಉತ್ಪಾದಕರ ಸಂಘವು ಕಳೆದ 50 ವರ್ಷಗಳಲ್ಲಿ ರೈತರ ಅಭಿವೃದ್ಧಿ, ಗ್ರಾಮೀಣ ಆರ್ಥಿಕ ಪ್ರಗತಿ ಮತ್ತು ಹೈನುಗಾರಿಕೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಂಘದ ಏಕತೆ, ಪರಿಶ್ರಮ ಮತ್ತು ಸದಸ್ಯರ ಸಹಕಾರದಿಂದ ಅನೇಕ ಸಾಧನೆಗಳು ಕಾರ್ಯಗಳು ಸಾಧ್ಯವಾಗಿದೆ ಮುಂದಿನ ದಿನಗಳಲ್ಲಿ ಹೊಸ ಯೋಜನೆಗಳು ಮತ್ತು ಅಭಿವೃದ್ಧಿಯ ಮೂಲಕ ನಮ್ಮ ಹಾಲು ಉತ್ಪಾದಕರ ಸಂಘವು ಇನ್ನಷ್ಟುಉನ್ನತಿಗೇರಳಿದೆ ಎಂದು ವಿವರಿಸಿದರು.
ಪ್ರಸ್ತುತ ಅಧ್ಯಕ್ಷರಾಗಿ ಪ್ರಶಾಂತ್ ವೇಗಸ್, ಉಪಾಕ್ಷರಾಗಿ ಅಶೋಕ ಸುವರ್ಣ, ನಿರ್ದೇಶಕರಾಗಿ ಪ್ರಸಾದ್ ಪಿಂಟೋ, ಗಣೇಶ್ ದೇವಾಡಿಗ, ಲ್ಯಾನ್ಸಿರೊಡ್ರಿಗಸ್, ಧರ್ಣಪ್ಪ ಪೂಜಾರಿ, ಸುಧೀರ್, ಹರೀಶ್ ಪೂಜಾರಿ, ಸುರೇಶ್ ಪೂಜಾರಿ, ಸುಂದರ, ಸುನೀಲ್ ಮಹಿಳಾ ನಿರ್ದೇಶಕರಾಗಿ ಪುಷ್ಪಾವತಿ, ಮಲ್ಲಿಕಾ ಪದನಿಮಿತ್ತ ನಿರ್ದೇಶಕರಾಗಿ ವಿಸ್ತರಣಾಧಿಕಾರಿ ರಾಜೇಶ್ ಕಾರ್ಯ ನಿರ್ವಹಿಸುತ್ತಾರೆ. ಸಂಘದಲ್ಲಿ 4 ಮಂದಿ ನೌಕರರು ಸೇವೆ ಸಲ್ಲಿಸುತ್ತಿದ್ದು ಸಂಘದಎಲ್ಲಾಕಾರ್ಯ ಕಲಾಪಗಳು ಉತ್ತಮರೀತಿಯಲ್ಲಿ ಸಾಗುತ್ತಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಅಶೋಕ್ ಸುವರ್ಣ, ನಿರ್ದೇಶಕರಾದ ಲ್ಯಾನ್ಸಿ ರೋಡ್ರಿಗಸ್, ಸದಸ್ಯರಾದ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.












