30.9 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ಎಸ್.ಡಿ.ಎಂ. ಐಟಿಐ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ

ವೇಣೂರು: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಯಲ್ಲಿ 2026ನೇ ಸಾಲಿನ ವಿದ್ಯಾರ್ಥಿಗಳಿಗಾಗಿ ಬೆಂಗಳೂರು ಮೂಲದ ಗಗನ ಏರ್ ಕಂಡೀಷನರ್ಸ್ HVAC ಸೊಲ್ಯೂಷನ್ಸ್ ಸಂಸ್ಥೆಯಿಂದ ರೆಫ್ರೀಜರೇಶನ್ ಮತ್ತು ಹವಾನಿಯಂತ್ರಿತ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಯಿತು.

ಕಂಪೆನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ಶ್ರೀಮತಿ ಜೀವಿತಾ ಹಾಗೂ ಗಂಗಾಧರ್ ಪೂಜಾರಿ ಅವರು ಸಂದರ್ಶನ ಪ್ರಕ್ರಿಯೆಯನ್ನು ನಡೆಸಿದರು. RAC ತಾಂತ್ರಿಕ ವಿಭಾಗದ ಒಟ್ಟು 86 ತರಬೇತಿ ಪಡೆದ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಂಗಾಧರ್ ಪೂಜಾರಿಯವರು ಅವರು, ಇಂದಿನ ದಿನಗಳಲ್ಲಿ HVAC ಹಾಗೂ ಏರ್ ಕಂಡೀಷನಿಂಗ್ ಕ್ಷೇತ್ರದಲ್ಲಿ ತಾಂತ್ರಿಕ ಪರಿಣತಿ ಹೊಂದಿರುವ ಯುವಕರಿಗೆ ಹೆಚ್ಚಿನ ಬೇಡಿಕೆ ಇದ್ದು, ಪ್ರಾಯೋಗಿಕ ಜ್ಞಾನ ಮತ್ತು ಶಿಸ್ತಿನೊಂದಿಗೆ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ಲಭ್ಯವಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಕೆ. ಆರ್. ಉಪಸ್ಥಿತರಿದ್ದರು. ನೇಮಕಾತಿ ಅಧಿಕಾರಿ ಶ್ರೇಯಸ್ ಜೈನ್ ಸಂಘಟಿಸಿ, ವಿನಯಚಂದ್ರರಾಜ ಹಾಗೂ ಸತೀಶ್ ಸಹಕರಿಸಿದರು.

Related posts

ಕಡಿರುದ್ಯಾವರ ಗ್ರಾಮ ಪಂಚಾಯತಿನಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ “ಶಿಕ್ಷಾ ಸಪ್ತಾಹ” ಕಾರ್ಯಕ್ರಮ

Suddi Udaya

ಹಿರಿಯ ಅಡಿಕೆ ವ್ಯಾಪಾರಿಯಾಗಿದ್ದ ಟಿ. ಉಮರಬ್ಬ ನಿಡಿಗಲ್ ನಿಧನ

Suddi Udaya

ಮಚ್ಚಿನ ಅಂಗನವಾಡಿ ಕೇಂದ್ರದಲ್ಲಿ ಪರಿಸರ ದಿನಾಚರಣೆ

Suddi Udaya

ಜೆಸಿಐ ಮಡಂತ್ಯಾರು ವಿಜಯ 2024 ರ ಶಾಶ್ವತ ಯೋಜನೆಗಳ ಆನಾವರಣ

Suddi Udaya

ರೋಟರಿ ಬೆಂಗಳೂರು ಇಂದಿರಾನಗರ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ರೋಟರಿ ಸೇವಾ ಟ್ರಸ್ಟ್ ಇದರ ವತಿಯಿಂದ ತಾಲೂಕಿನ ಬಡಕುಟುಂಬದ ಪ್ರತಿಭಾನ್ವಿತ 145 ವಿದ್ಯಾರ್ಥಿಗಳಿಗೆ ರೂ.10.26 ಲಕ್ಷ ವಿದ್ಯಾರ್ಥಿ ವೇತನ ವಿತರಣೆ

Suddi Udaya
error: Content is protected !!