25.6 C
ಪುತ್ತೂರು, ಬೆಳ್ತಂಗಡಿ
October 7, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂಟರ ಯಾನೆ ನಾಡವರ ಮಾತೃ ಸಂಘ ಸಂಚಾಲಕರಾಗಿ ಜಯರಾಮ ಭಂಡಾರಿ ಹಾಗೂ ಸಹ ಸಂಚಾಲಕರಾಗಿ ಕಿರಣ್ ಕುಮಾರ್ ಶೆಟ್ಟಿ : ನಾಮ ನಿರ್ದೇಶನ ನಿರ್ದೇಶಕರಾಗಿ ಜಯಂತ ಶೆಟ್ಟಿ ಹಾಗೂ ಅಜಿತ್ ಜಿ. ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಆಯ್ಕೆ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಬೆಳ್ತಂಗಡಿ ತಾಲೂಕು ಸಮಿತಿ ಸಭೆ ಮೇ 20 ರಂದು ಜಯರಾಮ ಶೆಟ್ಟಿ ಮುಂಡಾಡಿಗುತ್ತು ಇವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಬಂಟರ ಭವನದಲ್ಲಿ ನಡೆಯಿತು.

ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ 108 ನೇ ವರ್ಷದ ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆಯಾದ ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಕಿರಣ್ ಕುಮಾರ್ ಶೆಟ್ಟಿ ಜೈನ್‌ಪೇಟೆ, ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಶ್ರೀಮತಿ ಸುಜಾತ ಶೆಟ್ಟಿ ಪೆರಿಂಜೆ ಇವರು ಸಭೆಯಲ್ಲಿ ಭಾಗವಹಿಸಿದ್ದರು.


ಸಭೆಯಲ್ಲಿ ಬೆಳ್ತಂಗಡಿ ತಾಲೂಕಿನ ಮುಂದಿನ ಸಾಲಿನ ಮಾತೃ ಸಂಘದ ಸಂಚಾಲಕರಾಗಿ ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಸಹ ಸಂಚಾಲಕರಾಗಿ ಕಿರಣ್ ಕುಮಾರ್ ಶೆಟ್ಟಿ ಜೈನ್‌ಪೇಟೆ ಇವರನ್ನು ಪುನರಾಯ್ಕೆಗೊಳಿಸಲಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಆಡಳಿತ ಮಂಡಳಿಗೆ ಬೆಳ್ತಂಗಡಿ ತಾಲೂಕಿನಿಂದ ನಾಮ ನಿರ್ದೇಶನ ನಿರ್ದೇಶಕರಾಗಿ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಅಧ್ಯಕ್ಷರು, ಬಂಟರ ಯಾನೆ ನಾಡವರ ಸಂಘ (ರಿ) ಬೆಳ್ತಂಗಡಿ, ಅಜಿತ್ ಜಿ. ಶೆಟ್ಟಿ ಅಧ್ಯಕ್ಷರು, ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಗುರುವಾಯನಕೆರೆ, ಪುಷ್ಪರಾಜ್ ಶೆಟ್ಟಿ ಪೂರ್ವಾಧ್ಯಕ್ಷರು, ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇವರನ್ನು ಆಯ್ಕೆ ಮಾಡಲಾಯಿತು.

Related posts

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ಬೆಳ್ತಂಗಡಿ ತಾಲೂಕು ದ್ವಿತೀಯ ಗಮಕ ಸಮ್ಮೇಳನ

Suddi Udaya

ನಾಳ ಭಜನಾ ಮಂಡಳಿ ಸದಸ್ಯರು ಅಯೋಧ್ಯೆ ಕ್ಷೇತ್ರಕ್ಕೆ ಭೇಟಿ

Suddi Udaya

ಬಳಂಜ ಶಾಲಾ ವಿದ್ಯಾರ್ಥಿಗಳನ್ನು ಪಿಕಪ್-ಟಿಪ್ಪರ್ ನಲ್ಲಿ ವಿಹಾರಕ್ಕೆ ಕರೆದೊಯ್ದ ಶಿಕ್ಷಕ: ಸುರಕ್ಷಿತ ಕ್ರಮಗಳನ್ನು ಅನುಸರಿಸದೆ ಕರೆದೊಯ್ದ ಶಿಕ್ಷಕನ ವಿರುದ್ಧ ಪೋಷಕರ ಅಸಮಾಧಾನ

Suddi Udaya

ಜೂನಿಯರ್ ರೆಡ್ ಕ್ರಾಸ್ ಪರೀಕ್ಷೆ: ಎಸ್.ಡಿ.ಎಂ. ಪಿಯು ಕಾಲೇಜಿನ 24 ವಿದ್ಯಾರ್ಥಿಗಳಿಗೆ ಅತ್ಯುನ್ನತ ಶ್ರೇಣಿ

Suddi Udaya

ಪಟ್ರಮೆ: ಸೂರ್ಯತ್ತಾವು ನಿವಾಸಿ, ನಾಟಿ ವೈದ್ಯ ನಾರಾಯಣ ಉಂಗ್ರುಪುಳಿತ್ತಾಯ ನಿಧನ

Suddi Udaya

ಶ್ರೀ ಕ್ಷೇತ್ರ ಓಡೀಲು ವತಿಯಿಂದ ಎಕ್ಸೆಲ್ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ಗೌರವಾರ್ಪಣೆ

Suddi Udaya
error: Content is protected !!