24.9 C
ಪುತ್ತೂರು, ಬೆಳ್ತಂಗಡಿ
October 8, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಧರ್ಮಸ್ಥಳ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಕು. ಶೌರ್ಯ ಎಸ್ ವಿ ಬರೆದಿರುವ ಚೊಚ್ಚಲ ಪುಸ್ತಕ ಪ್ರೀತಿ ಏಕೆ ಭೂಮಿ ಮೇಲಿದೆ ಬಿಡುಗಡೆ

ಬೆಳ್ತಂಗಡಿ: ದ್ವಿತೀಯ ಪಿಯುಸಿ ವಿಧ್ಯಾರ್ಥಿನಿ ಕನ್ಯಾಡಿಯ ಕು|ಶೌರ್ಯ ಎಸ್ ವಿ ಅವರು ತನ್ನ ಅನುಭವ ಹಾಗೂ ಯುವ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಆಸಕ್ತಿಯಿಂದ ಬರೆದಿರುವ ಈ ಪುಸ್ತಕಕ್ಕೆ ಜಗದ್ಗುರು ಪೀಠ ಶೃಂಗೇರಿ ಶ್ರೀಗಳು, ಮಂತ್ರಾಲಯ ಶ್ರೀಗಳು,ಕನ್ಯಾಡಿ ಶ್ರೀಗಳು ಶುಭ ಸಂದೇಶಗಳನ್ನು ಕಳುಹಿಸಿ ಆಶೀರ್ವದಿಸಿದ್ದಾರೆ ಹಾಗೂ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಪ್ರೋತ್ಸಾಹದ ಬೆನ್ನುಡಿ ಇರುವ ಪ್ರೀತಿ ಏಕೆ ಭೂಮಿ ಮೇಲಿದೆ ಪುಸ್ತಕವನ್ನು ಬಹಳ ಪ್ರೀತಿಯಿಂದ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬಿಡುಗಡೆ ಮಾಡಿದರು.

ಅತಿ ಚಿಕ್ಕ ವಯಸ್ಸಿನಲ್ಲಿ ಪುಸ್ತಕ ಬರೆಯುವ ಸಾಹಸ ಮಾಡಿದ ಕು ಶೌರ್ಯ ಎಸ್ ವಿ ಅವರ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಹೇಮಾವತಿ ವೀ. ಹೆಗ್ಗಡೆಯವರಿಗೆ ಬಿಡುಗಡೆ ಯ ಮೊದಲ ಪ್ರತಿಯನ್ನು ನೀಡಿ ಆಶೀರ್ವಾದ ಪಡೆಯಲಾಯಿತು.

ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಪುಷ್ಪಗಿರಿ, ಸುದರ್ಶನ ಕನ್ಯಾಡಿ, ಉಪನ್ಯಾಸಕರಾದ ಮಾಧವ ಎಂಕೆ, ವಕೀಲರಾದ ಪೃಥ್ವಿಶ್ ಧರ್ಮಸ್ಥಳ, ಮಾತೃಮಂಡಳಿ ಅಧ್ಯಕ್ಷರಾದ ಮಮತಾ, ಕಾರ್ಯದರ್ಶಿ ಚಂದ್ರಾವತಿ, ಪುಸ್ತಕದ ಲೇಖಕಿ ಕು|ಶೌರ್ಯ,ಲೇಖಕಿಯವರ ತಾಯಿ ಕುಸುಮ ಉಪಸ್ಥಿತರಿದ್ದರು.

ನಂತರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ದೇವಳ ಪಾರುಪತ್ಯೆಗಾರರಾದ ಲಕ್ಷ್ಮೀನಾರಾಯಣ ರಾವ್,ಹಿರಿಯರಾದ ಆರ್ ಎನ್ ಪೂವಣಿ ಮತ್ತು ರಾಜೇಂದ್ರ ದಾಸ್ ಹಾಗೂ ಸುನಿಲ್ ಅವರಿಗೆ ಪುಸ್ತಕವನ್ನು ನೀಡಲಾಯಿತು.

Related posts

ಸೆ.14-16: ಉಜಿರೆಯಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ದಯಾ ವಿಶೇಷ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪೋಷಕರ ಸಭೆ

Suddi Udaya

ಅರಸಿನಮಕ್ಕಿ ಮೂಲ್ಯರ ಯಾನೆ ಕುಲಾಲರ ಸಂಘ: 29ನೇ ವರ್ಷದ ವಾರ್ಷಿಕೋತ್ಸವ-ಸತ್ಯನಾರಾಯಣ ಪೂಜೆ

Suddi Udaya

ಸುದ್ದಿ ಉದಯ ‘ಬೆಳಕಿನ ಉದಯ’ ದೀಪಾವಳಿ ವಿಶೇಷಾಂಕ ಬಿಡುಗಡೆ: ಶ್ರೀರಾಮ‌ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀಯವರು ಬಿಡುಗಡೆಗೊಳಿಸಿ ಶುಭ ಹಾರೈಕೆ

Suddi Udaya

ಇಂದಬೆಟ್ಟು: ಕಲ್ಲಾಜೆ ನಿವಾಸಿ ವಸಂತ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ “ಸಾಧನಾ ಪ್ರಶಸ್ತಿ”

Suddi Udaya
error: Content is protected !!