27.6 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಲ್ಕೆ ಹೊಡಿಕಾರ್ ರಸ್ತೆಯ ಇಂಟರ್ಲಾಕ್ ಕಾಮಗಾರಿ ಕಳಪೆ ಆರೋಪ: ನಾವೂರು ಗ್ರಾ.ಪಂ.ಗೆ ಎಸ್.ಡಿ.ಪಿ.ಐ ಮನವಿ

ಬೆಳ್ತಂಗಡಿ: ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಲ್ಲಪಟ್ಟ – ಪಲ್ಕೆ ಹೊಡಿ ಕಾರ್ ಕಾಂಕ್ರೀಟ್ ರಸ್ತೆಯ ಇಕ್ಕಲಗಳಲ್ಲಿ ಅಳವಡಿಸಲಾದ ಇಂಟರ್ಲಾಕ್ ಕಾಮಗಾರಿಯಲ್ಲಿ ಕಲಪೆ ನಡೆದಿದೆ ಎಂದು ಆರೋಪಿಸಿ, ಎಸ್.ಡಿ.ಪಿ.ಐ ನಾವೂರು ಗ್ರಾಮ ಸಮಿತಿ ವತಿಯಿಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆ ಕಾಂಕ್ರೀಟೀಕರಣದ ವೇಳೆ ಅಳವಡಿಸಲಾದ ಇಂಟರ್ಲಾಕ್‌ಗಳು ಕಳಪೆ ಕಾಮಗಾರಿಯಿಂದ ಕೇವಲ ಒಂದು ವರ್ಷದೊಳಗೆ ಬಿರುಕು ಬಿಟ್ಟಿದ್ದು, ಕಾಮಗಾರಿಯನ್ನು ಸಂಪೂರ್ಣ ಫಿನಿಶಿಂಗ್ ಮಾಡದೇ ಅರ್ಧದಲ್ಲೇ ಬಿಟ್ಟು ಹೋಗಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಇದರಿಂದ ಸಾರ್ವಜನಿಕರಿಗೆ ಸಂಚಾರ ತೊಂದರೆ ಉಂಟಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಅಲ್ಲದೆ ಕಾಮಗಾರಿಯಲ್ಲಿ ಗುತ್ತಿಗೆದಾರರು ಭ್ರಷ್ಟಾಚಾರ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಶೀಘ್ರದಲ್ಲೇ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಸ್.ಡಿ.ಪಿ.ಐ ನಾವೂರು ಗ್ರಾಮ ಸಮಿತಿ ಎಚ್ಚರಿಸಿದೆ.

ಈ ವೇಳೆ ಎಸ್ ಡಿ ಪಿ ಐ ನಾವೂರು ಬ್ರಾಂಚ್ ಅಧ್ಯಕ್ಷ ಸ್ವಾದಿಕ್ ನಾವೂರು, ಉಪಾಧ್ಯಕ್ಷ ಸ್ವಾದಿಕ್ ಅಶ್ರಫ್ ಕಿರ್ನಡ್ಕ, ಕಾರ್ಯದರ್ಶಿ ಸಲೀಂ ಮುರ, ಪಕ್ಷದ ಮುಖಂಡರಾದ ಖಾದರ್ ನಾವೂರು, ಬಶೀರ್ ಕಳಸ, ಹಂಝ ರವರು ಉಪಸ್ಥಿತರಿದ್ದರು.

Related posts

ನಾವೂರು ಜಾತ್ರಾ ಮಹೋತ್ಸವ: ಡಾ. ವೀಣಾ ಬನ್ನಂಜೆ ಅವರಿಂದ ಮೂರನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ

Suddi Udaya

ಪೆರೋಡಿತ್ತಾಯಕಟ್ಟೆ ಸ.ಉ.ಪ್ರಾ. ಶಾಲೆಯಲ್ಲಿ ಮೆಟ್ರಿ ಕ್ ಮೇಳ

Suddi Udaya

ಎಲ್ ಸಿ ಆರ್ ಇಂಡಿಯನ್ ಪದವಿ ವಿಭಾಗದ ವಿದ್ಯಾರ್ಥಿಗಳಿಂದ ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ

Suddi Udaya

ಬೆಳ್ತಂಗಡಿ:ಸಹಕಾರಿಗಳ ನಡಿಗೆ ಧರ್ಮಸ್ಥಳ ಕಡೆಗೆ ಪೂರ್ವಭಾವಿ ಸಭೆ

Suddi Udaya

ಡಾನ್ಸ್ ರಿಯಾಲಿಟಿ ಶೋ: ಬೆಳ್ತಂಗಡಿಯ ಟಿವಾ ಡಾನ್ಸ್ ಕ್ರೀವ್ ವಿದ್ಯಾರ್ಥಿನಿ ಕು| ವಂಶಿ ತಂಡ ದ್ವಿತೀಯ ಸ್ಥಾನ

Suddi Udaya

ಉಜಿರೆ: ಎಸ್.ಡಿ.ಎಂ. ಮಹಿಳಾ ಐಟಿಐಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!