33.4 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಕಕ್ಕಿಂಜೆಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್‌ನಿಂದ ಟ್ರಾಫಿಕ್ ಕಿರಿಕಿರಿ

ಬೆಳ್ತಂಗಡಿ: ಪಟ್ಟಣದಲ್ಲಿ ದಿನೇದಿನೇ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ವಾಹನ ಸವಾರರಿಗೆ ಪಾರ್ಕಿಂಗ್ ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಕಕ್ಕಿಂಜೆ ಪೇಟೆಯಲ್ಲಿ ಅಂಗಡಿಗಳು ರಸ್ತೆ ತಪ್ಪಲಿನಲ್ಲಿದ್ದು ದಿನಕಳೆದ್ದಂತೆ ರಸ್ತೆ ಮಾತ್ರ ಕಿರಿದಾಗುತ್ತಿದೆ. ಅಂಗಡಿಗಳಿಗೆ ಲೈನ್ ಸೇಲ್ ಸಾಮಾಗ್ರಿ ಹಾಕುವ ವಾಹನಗಳು ರಸ್ತೆಯಲ್ಲೆ ನಿಂತರೆ ಇತ್ತ ಕೆಲವೊಂದು ಆಟೋ ರಿಕ್ಷಾಗಳು, ಇತರ ವಾಹನಗಳು ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಪ್ರತಿದಿನ ಕಕ್ಕಿಂಜೆಯಲ್ಲಿ ಟ್ರಾಫಿಕ್ ಕಿರಿಕಿರಿ ಉಲ್ಭಣಿಸುತ್ತಿದೆ ಹೊರತು ಕೊನೆಗೊಳ್ಳುತ್ತಿಲ್ಲ.

ರಾ.ಹೆ.75ರಲ್ಲಿ ಹಾದುಹೋಗುವ ಕಕ್ಕಿಂಜೆ ಪೇಟೆ ಒಂದು ಬದಿಯಾದರೆ ಇನ್ನೊಂದೆಡೆ ನೆರಿಯ, ತೊಟತ್ತಾಡಿ ಗ್ರಾಮಗಳ ಬೆಸೆಯುವ ಪ್ರಮುಖ ಕೇಂದ್ರಿಕೃತ ಪೇಟೆ ಕಕ್ಕಿಂಜೆ. ಇಲ್ಲಿ ಒಂದು ಸಣ್ಣ ಮಾದರಿಯ ಸರ್ಕಲ್‌ವಿದ್ದು ಉಜಿರೆಯಿಂದ ಬರುವ ಈ ರಸ್ತೆಯಲ್ಲಿ ನೇರವಾಗಿ ಹೋದರೆ ಚಾರ್ಮಾಡಿ, ಕೊಟ್ಟಿಗೆರೆ ಊರನ್ನು ಬೆಸೆಯಲಾಗುತ್ತದೆ, ಬಲ ಬದಿಗೆ ತಿರುಗಿಕೊಂಡಲ್ಲಿ ನೆರಿಯ, ಪುದುವೆಟ್ಟು ಗ್ರಾಮಗಳನ್ನು ಸೇರುವ ಪ್ರಮುಖ ರಸ್ತೆ ಇದಾಗಿದೆ. ಆದರೆ ದಿನಕಳೆದ್ದಂತೆ ಪಟ್ಟಣದಲ್ಲಿ ಅಂಗಡಿ ಮುಗ್ಗಂಟ್ಟುಗಳು ಬೆಳೆದು ರಸ್ತೆ ಇಕ್ಕೆಲದಲ್ಲಿ ಬಂದು ತಲುಪಿದೆ. ವಾಹನಗಳು ಅಲ್ಲಲ್ಲಿ ನಿಲ್ಲುಸುತ್ತಿರುವುದರಿಂದ ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ಫುಟ್‌ ಪಾತ್ ಇಲ್ಲ, ಆಗಾಗಾ ಸಣ್ಣಪುಟ್ಟ ಅನಾಹುತಗಳು ಸಂಭವಿಸುವುದು ಇಲ್ಲಿ ಸಾಮಾನ್ಯವಾಗಿದೆ. ಅಪಘಾತ ಸಂಭವಿಸಿದ ಸಂದರ್ಭ ಆಂಬುಲೆನ್ಸ್ ವಾಹನ ಹೋಗುವುದೆ ಸಾವಲು. ಇನ್ನೇನು ಮಳೆಗಾಲ ಸಮೀಪಿಸುತ್ತಿದೆ. ಇದೇ ರೀತಿಯಾದಲ್ಲಿ ಟ್ರಾಫಿಕ್ ಕಿರಿಕಿರಿಗೆ ನಾಂದಿ ಹಾಡುವವರು ಯಾರು ಇಲ್ಲಿ?… ಪಶ್ಚಿಮ ಘಟ್ಟದ ತಪ್ಪಲಿನ ನಿವಾಸಿಗಳಿಗೆ ಪ್ರಮುಖ ಪೇಟೆ ಕಕ್ಕಿಂಜೆ, ಇತ್ತ ಚಾರ್ಮಾಡಿ ಗ್ರಾಮ ಪಂಚಾಯತ್, ದಿನಸಿ ಅಂಗಡಿಗಳು, ಬ್ಯಾಂಕ್, ಆಸ್ಪತ್ರೆಗಳು ಇರುವ ಕಕ್ಕಿಂಜೆಯಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕೆಂಬುವುದು ಸಾರ್ವಜನಿಕರು ಪೋಲಿಸರನ್ನು, ಸಂಬಂಧ ಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ,

Related posts

ಏ.17: ಬೆಳ್ತಂಗಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಶನಿಪೂಜೆ

Suddi Udaya

ಪಡಂಗಡಿ: ಕಾರು ಡಿಕ್ಕಿ ಬೈಕ್ ಸವಾರನಿಗೆ ಗಂಭೀರ ಗಾಯ: ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಎಂಬಲ್ಲಿ ಘಟನೆ

Suddi Udaya

ಧರ್ಮಸ್ಥಳ : ಅಪರಿಚಿತ ವ್ಯಕ್ತಿ ಸಾವು : ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಬೆಳ್ತಂಗಡಿ ದೀಪಾ ಗೋಲ್ಡ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನದ ಧಮಾಕ

Suddi Udaya

ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ “ನೆನಪುಗಳ ನೇವರಿಕೆ” ಪುಸ್ತಕ ಬಿಡುಗಡೆ

Suddi Udaya

ಆ.24: ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

Suddi Udaya
error: Content is protected !!