25.2 C
ಪುತ್ತೂರು, ಬೆಳ್ತಂಗಡಿ
August 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜು

ಕುಂಭಶ್ರೀ ಪ.ಪೂ. ಕಾಲೇಜಿನಲ್ಲಿ ಸಂಕಲ್ಪ–2026: ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ತೋರಿದ ಪ್ರೇರಣಾದಾಯಕ ಓರಿಯಂಟೇಷನ್ ಕಾರ್ಯಕ್ರಮ

ವೇಣೂರು: ಕುಂಭಶ್ರೀ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ “ಸಂಕಲ್ಪ–2026” ಓರಿಯಂಟೇಷನ್ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ವಿದ್ಯಾರ್ಥಿಗಳ ಭವಿಷ್ಯ, ಶಿಸ್ತು ಹಾಗೂ ಗುರಿನಿರ್ಧಾರ ಕುರಿತು ಪ್ರೇರಣಾದಾಯಕ ಸಂದೇಶಗಳನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸ್ಥಾಪಕ ಗಿರೀಶ್ ಕೆ. ಹೆಚ್. ಅವರು ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿಯನ್ನು ಹೊಂದಿ, ನಿರಂತರ ಪರಿಶ್ರಮ ಹಾಗೂ ಶಿಸ್ತಿನಿಂದ ಮುನ್ನಡೆಯಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆನಂದ್ ಕೆ. ಸಿ., ಪ್ರಭೋದಿನಿ ವಿದ್ಯಾ ಕೇಂದ್ರ, ಕಳಸ ಸಂಸ್ಥೆಯ ಮುಖ್ಯಾಧ್ಯಾಪಕರು ಅವರು ವಿದ್ಯಾರ್ಥಿಗಳು ತಮ್ಮ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಹೇಳಿದರು.

ಚಂದ್ರಶೇಖರ್ ಎಂ. ಪಿ., ಇಂದಿರಾ ಗಾಂಧಿ ವಸತಿ ಶಾಲೆ, ಗೇರುಪುರ ಇದರ ಪ್ರಾಂಶುಪಾಲರು ಅವರು ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಕಠಿಣ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಶ್ರೀ ಅರವಿಂದ ಶೆಟ್ಟಿ ಖಂಡಿಗ, ಗಾಂಧಿನಗರ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರು ಅವರು ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗದೆ ಜ್ಞಾನ, ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಕುಂಭಶ್ರೀ ಶಿಕ್ಷಣ ಸಂಸ್ಥೆಯ ಸಂಚಾಲಕ ಲೆಫ್ಟಿನೆಂಟ್ ಅಶ್ವಿತ್ ಕುಲಾಲ್ ಸ್ವಾಗತಿಸಿ ಕಾರ್ಯಕ್ರಮವನ್ನು ಆರಂಭಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಶರಣ್ಯ ಕೆ. ಎಸ್., ವಾಣಿಜ್ಯ ವಿಭಾಗದ ಉಪನ್ಯಾಸಕಿ ಹಾಗೂ ಸುಮನ್, ಕನ್ನಡ ವಿಭಾಗದ ಉಪನ್ಯಾಸಕರು ಯಶಸ್ವಿಯಾಗಿ ನಿರ್ವಹಿಸಿದರು. ವಿವಿಧ ಶೈಕ್ಷಣಿಕ ವಿಭಾಗಗಳ ಕುರಿತು ನಡೆದ ಓರಿಯಂಟೇಷನ್ ಅಧಿವೇಶನವು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಯಿತು.
ವಿಜ್ಞಾನ ವಿಭಾಗದ ಕುರಿತು ಮನೋಜ್ ಎಸ್., ಜೀವಶಾಸ್ತ್ರ ವಿಭಾಗದ ಉಪನ್ಯಾಸಕರು ಹಾಗೂ ವಾಣಿಜ್ಯ ಮತ್ತು ಗಣಕಶಾಸ್ತ್ರ ಕ್ಷೇತ್ರಗಳ ಅವಕಾಶಗಳ ಕುರಿತು ಅಭಿಲಾಷ್ ಕಾಮತ್, ಗಣಕಶಾಸ್ತ್ರ ವಿಭಾಗದ ಉಪನ್ಯಾಸಕರು ಮಾಹಿತಿ ನೀಡಿದರು.

ಗಣಿತ ವಿಭಾಗದ ಉಪನ್ಯಾಸಕ ದೀಪಕ್ ಸಾಲಿಯಾನ್ ವಂದಿಸಿದರು.

Related posts

ಯಕ್ಷಗಾನದ ದಶಾವತಾರಿ ಸೂರಿಕುಮೇರು ಕೆ.ಗೋವಿಂದ ಭಟ್ ವಿಧಿವಶ

Suddi Udaya

ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಕಲರವ-2025 ಕಾರ್ಯಕ್ರಮ ಉದ್ಘಾಟನೆ

Suddi Udaya

ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿಯ ಸಾಫ್ಟ್ ವೇರ್ ತಂಡದಿಂದ ಶಾಲೆಗೆ ಬಣ್ಣ

Suddi Udaya

ವಲಯಮಟ್ಟದ ಪ್ರತಿಭಾ ಕಾರಂಜಿ : ಬೆಳ್ತಂಗಡಿ ಶ್ರೀ ಧ. ಮಂ. ಆಂ.ಮಾ. ಶಾಲೆಗೆ ಹಲವಾರು ಪ್ರಶಸ್ತಿ

Suddi Udaya

ರಾಜ್ಯ ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ಜಯರಾಜ್ ಸಾಲಿಯಾನ್ ಹಾಗೂ ರಾಜ್ಯ ಸದಸ್ಯರಾಗಿ ಅನಿಲ್ ಕುಮಾರ್ ಯು ಆಯ್ಕೆ

Suddi Udaya

ಚಾರಣಕ್ಕೆ ಮೊಬೈಲ್ ಆ್ಯಪ್, ಗೈಡ್ ಕಡ್ಡಾಯ-ಚಾರಣಿಗರ ಸುರಕ್ಷತೆಗೆ ಮಾರ್ಗದರ್ಶಿ ಬಿಡುಗಡೆ

Suddi Udaya
error: Content is protected !!