33.9 C
ಪುತ್ತೂರು, ಬೆಳ್ತಂಗಡಿ
October 14, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೋಮಂತಡ್ಕ ಬಳಿ ಕಾರು- ಬೈಕ್ ನಡುವೆ ಭೀಕರ ರಸ್ತೆ ಅಪಘಾತ: ಯುವ ಪೋಟೋಗ್ರಾಫರ್ ಗಣೇಶ್ ಗೌಡ ಕಳೆಂಜ ಸಾವು

ಬೆಳ್ತಂಗಡಿ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವ ಪೋಟೋಗ್ರಾಫರ್ ಮೃತಪಟ್ಟ ಘಟನೆ ಸೋಮಂತಡ್ಕ ಅಗರಿ ಕ್ರಾಸ್ ಬಳಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕಳೆಂಜ ಅಶ್ವಥಡಿ ಮನೆಯ ನೋಣಯ್ಯ ಗೌಡ ಅವರ ಪುತ್ರ, ಯುವ ಪೋಟೋಗ್ರಾಫರ್ ಗಣೇಶ್ ಗೌಡ (36ವ ) ಮೃತ ದುರ್ದೈವಿ.

ಘಟನೆ ವಿವರ:ಮೇ 24ರಂದು ಬೆಂಗಳೂರಿನಿಂದ ಉಜಿರೆ ಕಡೆ ಚಲಿಸುತ್ತಿದ್ದ ಕಾರು ಸೋಮಂತಡ್ಕ ಬಳಿ ಗಣೇಶ್ ಗೌಡ ಅವರು ಚಲಿಸುತ್ತಿದ್ದ ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಣೇಶ್ ಗೌಡ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಪ್ರಮಾಣದ ಗಾಯವಾಗಿದ್ದು, ಕೂಡಲೇ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು(ಮೇ 25) ಮಧ್ಯಾಹ್ನ ನಿಧನರಾಗಿದ್ದಾರೆ.

ಬೆಳ್ತಂಗಡಿ ಪೋಲಿಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

Related posts

ಬಿ.ಕೆ.ಶಂಕರ ಮೊಗೆರಾಯ ನಿಧನ

Suddi Udaya

ರೋಟರಿ ಕ್ಲಬ್ ಹಾಗೂ ಕಾನ್ ಫಿನ್ ಹೋಮ್ಸ್ ಸಹಕಾರದಲ್ಲಿ ಸಿಯೋನ್ ಆಶ್ರಮದ ನಿವಾಸಿಗಳಿಗೆ 135 ಮಂಚಗಳು ಹಾಗೂ ಹಾಸಿಗೆ ಸಾಮಗ್ರಿಗಳ ಕೊಡುಗೆ

Suddi Udaya

ತೆಕ್ಕಾರು ಉಪ ಆರೋಗ್ಯ ಕೇಂದ್ರಕ್ಕೆ ಕಟ್ಟಡ ನಿರ್ಮಿಸಲು ಅನುದಾನ ಮಂಜೂರುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ತೆಕ್ಕಾರು ಗ್ರಾ.ಪಂ. ಸದಸ್ಯ ಅಬ್ದುಲ್ ರಝಾಕ್ ರವರಿಂದ ಮನವಿ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.340 ಕೋಟಿ ವ್ಯವಹಾರ, ರೂ. 71 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ 21% ಡಿವಿಡೆಂಡ್ ಸುಮಾರು 37 ವರ್ಷ ಸೇವೆ ಸಲ್ಲಿಸಿದ ಮಹೇಂದ್ರವರ್ಮರಿಗೆ ಬೀಳ್ಕೊಡುಗೆ

Suddi Udaya

ಉಜಿರೆ ಎಸ್.ಡಿ.ಎಮ್ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ

Suddi Udaya

ಶಿಬಾಜೆ : ಶಿವಪ್ಪ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!