33.4 C
ಪುತ್ತೂರು, ಬೆಳ್ತಂಗಡಿ
October 14, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಯ್ಯೂರು ಶ್ರೀ ಕೃಷ್ಣ ಭಜನಾ ಮಂಡಳಿಯ ಸದಸ್ಯರುಗಳಿಗೆ ಅಭಿನಂದನ ಕಾರ್ಯಕ್ರಮ

ಕೊಯ್ಯೂರು : ಕೊಯ್ಯೂರು ಶ್ರೀ ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೇರಾಲ್ ಇಲ್ಲಿ ಭಜನೆಗೆ ಬರುವಂತಹ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಹಾಗೂ ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದಾಗ ಅವರನ್ನು ಗುರುತಿಸಿ ಅಭಿನಂದಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ಹಲವಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ.
ಅದರಂತೆ 2025-2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನದೊಂದಿಗೆ 600 ಅಂಕಗಳಲ್ಲಿ 597 ಅಂಕಗಳನ್ನು ಪಡೆದ ಅಕ್ಷಯ್ ಕೋರ್ಯಾರು, 10ನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕುಮಾರಿ ಪ್ರಜ್ಞಾ ಎನ್ ಗೌಡ ಹಾಗೂ ಕುಮಾರಿ ನಿಶಾ ಬೆರ್ಕೆ ಇವರುಗಳನ್ನು ಶ್ರೀ ಕೃಷ್ಣ ಭಜನಾ ಮಂಡಳಿಯ ವತಿಯಿಂದ ಅಭಿನಂದಿಸಿ ಪ್ರೋತ್ಸಾಹಿಸಲಾಯಿತು.

ಅಭಿನಂದನೆಗಳನ್ನು ಸ್ವೀಕರಿಸಿದ ವಿದ್ಯಾರ್ಥಿಗಳು ಭಜನಾ ಮಂದಿರದ ಆರಾಧ್ಯ ದೇವರಿಗೆ ಶಿರಬಾಗುತ್ತಾ ಭಜನೆಯೊಂದಿಗೆ ನಮ್ಮ ವಿದ್ಯಾಭ್ಯಾಸಕ್ಕೂ ನಿರಂತರವಾಗಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವ ಭಜನಾ ಮಂಡಳಿಯ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಸದಸ್ಯರುಗಳಿಗೆ ನಾವು ಚಿರಋಣಿಗಳೆಂದರು.
ಶ್ರೀ ಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ರೋಹಿತಾಶ್ವ ಉಮಿಯ ದರ್ಕಾಸು ಇವರ ಸಹಕಾರದೊಂದಿಗೆ ಊರಿನ ಹಿರಿಯರು ಪ್ರಗತಿಪರ ಕೃಷಿಕರು ಭಜನಾ ಮಂಡಳಿಯ ಹಿರಿಯ ಸದಸ್ಯ ಪ್ರಚಂಡ ಬಾನು ಭಟ್ ಪಾಂಬೆಲು ಇವರು ವಿದ್ಯಾರ್ಥಿಗಳನ್ನು ಭಜಕರೆಲ್ಲರ ಸಮ್ಮುಖದಲ್ಲಿ ಸನ್ಮಾನಿಸಿ ಭಜನೆಯೊಂದಿಗೆ ಭಜನೆಗೆ ಬಂದಂತಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಕೂಡ ಉತ್ತೇಜನ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಇಂತಹ ಕೆಲಸಗಳು ಎಲ್ಲಾ ಭಜನಾ ಮಂಡಳಿಗಳಲ್ಲಿಯೂ ನಡೆದರೆ ಭವಿಷ್ಯದ ಉತ್ತಮ ಸಮಾಜ ನಿರ್ಮಾಣಕ್ಕೆ ಭಜನಾ ಮಂಡಳಿಯ ಕೊಡುಗೆಯು ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಗೌರವ ಅಧ್ಯಕ್ಷ ವಿಶ್ವನಾಥಗೌಡ ಬಚ್ಚಿರ್ದಡಿ, ಸಲಹೆಗಾರರಾದ ಶೇಖರಗೌಡ ಕೋರ್ಯಾರು, ಉಪಾಧ್ಯಕ್ಷ ಸುಂದರ ಗೌಡ ಕಜೆಕೋಡಿ, ಕಾರ್ಯದರ್ಶಿ ಓಬಯ್ಯ ನಾಯ್ಕ ಆದರ್ಶ ನಗರ , ಜೊತೆ ಕಾರ್ಯದರ್ಶಿ ಶಶಿಧರ ಕೆರೆಹಿತ್ತಿಲು, ಕೋಶಾಧಿಕಾರಿ ಬಾಲಕೃಷ್ಣ ಸಾಲಿಯಾನ್ ಆದರ್ಶ ನಗರ, ಲೆಕ್ಕಪರಿಶೋಧಕರಾದ ಹೇಮಂತ ದೇಂತ್ಯಾರು ಬೊಟ್ಟು, ಭಜನಾ ಮಂದಿರದ ಅರ್ಚಕರಾದ ಹೇಮಂತ ನಾಗನೋಡಿ ಹಿರಿಯ ಸದಸ್ಯರುಗಳಾದ ಮನೋಜ್ ಕಜೆ, ದೇಜಪ್ಪ ಗೌಡ ಬೆಲ್ಡೆ, ದಯಾನಂದ್ ಆಚಾರ್ಯ ಆದರ್ಶ ನಗರ, ವಸಂತ ನೇಕಾರ ಮುಂಡೆವು ಹಾಗೂ ಭಜಕರೆಲ್ಲರೂ ಉಪಸ್ಥಿತರಿದ್ದರು.

ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ ಚಂದ್ರಶೇಖರ ಸಾಲ್ಯಾನ್ ರವರು ವಿದ್ಯಾರ್ಥಿಗಳಿಗೆ ಅಭಿನಂದನ ನುಡಿಯನ್ನು ನುಡಿದರು.
ಭಜನಾ ಮಂಡಳಿಯ ಲೆಕ್ಕಪರಿಶೋಧಕ ಲಿಂಗಪ್ಪಗೌಡ ಬೆರ್ಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂಡಳಿಯ ಸದಸ್ಯರಾದ ನಾರಾಯಣ ನಾಯ್ಕ ವಂದಿಸಿದರು.

Related posts

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವೀನ್ ಮತ್ತು ಹರಿಣಾಕ್ಷಿ ನವ ದಂಪತಿಗಳಿಂದ ನಂದಗೋಕುಲ ಗೋಶಾಲೆಗೆ ರೂ 1.47 ಲಕ್ಷ ಗೋ ನಿಧಿ ಹಸ್ತಾಂತರ

Suddi Udaya

ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾ ಗಣೇಶ ಸಭಾ ಭವನದ ಲೋಕಾಪ೯ಣೆ:ಮೈಸೂರು ಸಂಸ್ಥಾನದ ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಿಂದ ದೀಪ ಪ್ರಜ್ವಲನೆ – ಗಣ್ಯರ ಉಪಸ್ಥಿತಿ

Suddi Udaya

ಕೆ. ಪಿ. ಸಿ. ಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ದ.ಕ. ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಪೂಜಾರಿ ಬಳ್ಳಮಂಜ ಆಯ್ಕೆ

Suddi Udaya

ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಮಡಂತ್ಯಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಪ್ರಮೋದ್ ಕುಮಾರ್

Suddi Udaya
error: Content is protected !!